ಬೆಂಗಳೂರು: ಯತ್ನಾಳ್ (Basanagouda Patil Yatnal) ಡೆಡ್‌ಲೈನ್ ಫಿಕ್ಸ್ ಮಾಡಿದ್ದಕ್ಕೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಶಿವಾನಂದ ಪಾಟೀಲ್ ಹೇಳಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಚಿವ ಶಿವಾನಂದ ಪಾಟೀಲ್ (Shivananda Patel), ಯತ್ನಾಳ್ ಅವರ ಸವಾಲು ಸ್ವೀಕಾರ ಮಾಡಿ ಸ್ಪೀಕರ್ ಅವರಿಗೆ ರಾಜೀನಾಮೆ ನೀಡಿದ್ದೇನೆ. ಪಕ್ಷಕ್ಕೂ, ಸಿಎಂಗೂ ಇದು ಸಂಬಂಧಿಸಿಲ್ಲ ಎಂದು ಹೇಳಿದರು.
ಡೆಡ್ ಲೈನ್ ಫಿಕ್ಸ್ ಮಾಡಿದ್ದು ಯತ್ನಾಳ್. ಶುಕ್ರವಾರದೊಳಗೆ ರಾಜೀನಾಮೆ ಕೊಡದಿದ್ದರೆ ಅವರಪ್ಪನಿಗೆ ಹುಟ್ಟಿಲ್ಲ ಎಂದಿದ್ದರು. ಅದಕ್ಕೆ ಈಗ ನಾನು ರಾಜೀನಾಮೆ ನೀಡಿದ್ದೇನೆ. ಹೀಗಾಗಿ ಯತ್ನಾಳ್ ಕೂಡ ರಾಜೀನಾಮೆ ಕೊಡಲಿ. ವಿಜಯಪುರದಲ್ಲಾದ್ರೂ ಸರಿ, ಬಸವನಬಾಗೇವಾಡಿಯಲ್ಲಾದ್ರೂ ಸರಿ ಅವರ ಎದುರು ಸ್ಪರ್ಧೆ ಮಾಡುತ್ತೇನೆ ಎಂದು ಘೋಷಣೆ ಮಾಡಿದರು. ಇದನ್ನೂ ಓದಿ: ಮಥುರಾದಲ್ಲಿ ಮುಸ್ಲಿಂ ಕುಟುಂಬದ 8 ಮಂದಿ ಹಿಂದೂ ಧರ್ಮಕ್ಕೆ ಮತಾಂತರ
ಯತ್ನಾಳ್ ಅವರ ತಂದೆ ತಾಯಿಗಳಿಗೆ ಹುಟ್ಟಿದ್ದಾರೆ. ನಾನು ಆ ಮಾತುಗಳನ್ನ ಆಡಲ್ಲ. ಆದರೆ ನನ್ನ ಪೂರ್ವಜರ ಬಗ್ಗೆ ಪಾಟೀಲ್ ಹೆಸರಿನ ಬಗ್ಗೆ ಮಾತನಾಡಿದ್ದಕ್ಕೆ ನೋವಾಗಿದೆ ಎಂದು ಬೇಸರ ಹೊರ ಹಾಕಿದರು.
ನನ್ನ ಪೂರ್ವಜರು ಹಿಂದೆ ಬೇರೆ ಅಡ್ಡ ಹೆಸರು ಇಟ್ಟುಕೊಂಡಿರಬಹುದು ಗೊತ್ತಿಲ್ಲ. ನನಗೆ ಹುಟ್ಟಿನಿಂದ ಪಾಟೀಲ್ ಅಂತಾ ಹೆಸರು ಇಟ್ಟಿದ್ದಾರೆ. ವೈಯುಕ್ತಿಕವಾಗಿ ತೇಜೋವಧೆ ಮಾಡಿದ್ದಾರೆ. ಮಾತುಗಳನ್ನು ಸಹಿಸಲು ಆಗಲ್ಲ ಎಂದು ಸಿಟ್ಟು ಹೊರಹಾಕಿದರು. ಇದನ್ನೂ ಓದಿ: ಕನ್ನಡಿಗರೇನು ಭಯೋತ್ಪಾದಕರಾ?: ಸೋನು ನಿಗಮ್ ಹೇಳಿಕೆಗೆ ಸಾರಾ ಗೋವಿಂದು ಕಿಡಿ