ವಿಜಯಪುರ: ರಾಜ್ಯಾಧ್ಯಕ್ಷ ಹೋಗಿ ಡಿಕೆಶಿ ಬಳಿ 20 ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದರು ಆ ವಿಡಿಯೋ ನನ್ನ ಬಳಿ ಇದೆ. ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಬಾಂಬ್ ಸಿಡಿಸಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ (ನ.27) ದೆಹಲಿ (Delhi) ಹೈಕಮಾಂಡ್‌ನಿಂದ ಕರೆ ಬಂದಿತ್ತು. ವರಿಷ್ಠರ ಜೊತೆಗೆ ಮಾತನಾಡಿದ್ದೇನೆ. ನಾನು ಒಬ್ಬನೇ ಬರುವುದಿಲ್ಲ. ನನ್ನ ತಂಡ ಸಹಿತವಾಗಿಯೇ ಬಂದು ಎಂದು ಉತ್ತರಿಸಿರುವೆ ಎಂದು ತಿಳಿಸಿದ್ದೇನೆ ಎಂದರು.ಇದನ್ನೂ ಓದಿ: ಭಾರತೀಯ ನೌಕಾಪಡೆಯಿಂದ 3,500 ಕಿಮೀ ರೇಂಜ್ ಪರಮಾಣು ಸಾಮರ್ಥ್ಯದ ಕ್ಷಿಪಣಿ ಯಶಸ್ವಿ ಉಡಾವಣೆ
Advertisement
Advertisement
ಭ್ರಷ್ಟಾಚಾರದ ವಿರುದ್ಧ, ವಕ್ಫ್ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಎಲ್ಲರನ್ನೂ ದೆಹಲಿಗೆ ಕರೆಯಿರಿ ಆಗ ಬಂದು ಕರ್ನಾಟಕದಲ್ಲಿ ಏನು ನಡೆದಿದೆ ಎಂದು ಹೇಳುತ್ತೇವೆ. ಒಬ್ಬರನ್ನು ಕರೆದು ಸಮಾಧಾನ ಮಾಡಲು ಆಗುವುದಿಲ್ಲ. ನಾನು ಯಾವುದಕ್ಕೂ ಹೆದರುವುದಿಲ್ಲ, ಕ್ಷಮಾಪಣೆ ಕೇಳುವುದಿಲ್ಲ ಎಂದರು.
Advertisement
ನಾನು ಯಾರಿಗೂ ಹೆದರುವುದಿಲ್ಲ. ನಾನೇ ದೂರು ಕೊಡಲು ಹೇಳಿದ್ದೇನೆ. ಯಾರ ದೂರಿಗೂ ನಾನು ಹೆದರುವುದಿಲ್ಲ. ಯತ್ನಾಳ್‌ನ್ನು ಮುಟ್ಟುವುದು ಅಷ್ಟೊಂದು ಸಲೀಸಲ್ಲ. ನನ್ನ ಜೊತೆಗೆ ರಾಜ್ಯದ ಜನರಿದ್ದಾರೆ. ನನ್ನ ಜೊತೆಗೆ ದೆಹಲಿ ನಾಯಕರಿದ್ದಾರೆ ಎಂದು ಖಡಕ್ ವಾರ್ನ್ ಮಾಡಿದರು.
Advertisement
ನಾನು ಒಂದು ಶಬ್ದವನ್ನು ವಾಪಸ್ ತೆಗೆದುಕೊಳ್ಳುವುದಿಲ್ಲ. ಕಾಂಗ್ರೆಸ್ ಜೊತೆಗೆ ಕೂರುವಂತಹ ಚಿಲ್ಲರೆ ಕೆಲಸ ನಾವು ಮಾಡುವುದಿಲ್ಲ. ರಾಜ್ಯಾಧ್ಯಕ್ಷ ಹೋಗಿ ಡಿಕೆಶಿ ಬಳಿ 20 ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದರು. ಆ ವಿಡಿಯೋ ನನ್ನ ಬಳಿ ಇದೆ. ನಾನು ಕಾಂಗ್ರೆಸ್ ಜೊತೆಗೆ ಕೈ ಜೋಡಿಸುವ ಕೆಲಸ ಮಾಡಲ್ಲ. ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ. ಕೆಲವರೆಲ್ಲ ರಾತ್ರಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮನೆಗೆ ಹೋಗುತ್ತಾರೆ. ನಾನು ಯಾರ ಮನೆಗೆ ಹೋಗಿ ಕೆಲಸ ಮಾಡಿಕೊಡಿ ಎಂದು ಕೇಳುವ ವ್ಯಕ್ತಿಯಲ್ಲ. ಅದಕ್ಕೆ ನನ್ನ ಮೇಲೆ ಕೇಸ್‌ಗಳ ಮೇಲೆ ಕೇಸ್ ಹಾಕುತ್ತಲೇ ಇದ್ದಾರೆ. ನನ್ನ ಮೇಲೆ ಕೇಸ್ ಹಾಕಿ ಬ್ಲ್ಯಾಕ್‌ಮೇಲ್ ಮಾಡಲು ಸಾಧ್ಯವಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.ಇದನ್ನೂ ಓದಿ: ಪತ್ರಕರ್ತರಾಗುವ ಹಂಬಲ ನಿಮಗಿದೆಯೇ – ಪಬ್ಲಿಕ್ ಟಿವಿಗೆ ಇಂದೇ ಅರ್ಜಿ ಸಲ್ಲಿಸಿ