– ನಾನು ವಾಪಸ್ ಪಕ್ಷಕ್ಕೆ ಸೇರಬೇಕು ಅಂತ ಬಿಜೆಪಿ ಶಾಸಕರ ಅಭಿಪ್ರಾಯ
ಬೆಂಗಳೂರು: ಜಮೀರ್‌ಗೆ ದೇಶ, ರಾಜ್ಯ ಬೇಡ, ತಮ್ಮ ಜನಸಂಖ್ಯೆ, ಮತದಾರರು ಹೆಚ್ಚಾಗಬೇಕು ಅಂತ ಮನೆ ಕೊಡ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಕಿಡಿಕಾರಿದ್ದಾರೆ.
ಕೋಗಿಲು ಲೇಔಟ್ ಅಕ್ರಮ ನಿವಾಸಗಳಿಗೆ ಸರ್ಕಾರದಿಂದ ಮನೆ ಕೊಡ್ತಿರೋ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಅವರೆಲ್ಲಾ ಮುಸ್ಲಿಂ ಇದ್ದಾರೆ ಅಂತ ಜಮೀರ್ ಮಾತಾಡ್ತಾ ಇದ್ದಾರೆ. ಜಮೀರ್‌ಗೆ ದೇಶ, ರಾಜ್ಯ ಬೇಕಾಗಿಲ್ಲ. ತಮ್ಮ ಜನಸಂಖ್ಯೆ, ತಮ್ಮ ಮತದಾರರು ಹೆಚ್ಚಾಗಬೇಕು. ಈ ದೇಶವನ್ನು ಆದಷ್ಟು ಬೇಗ ಇಸ್ಲಾಂಮೀಕರಣ ಮಾಡಬೇಕು ಅಂತ ಟಾರ್ಗೆಟ್ ಬಿಟ್ಟರೆ, ಅವರ ತಲೆಯಲ್ಲಿ ಏನು ಇರಲ್ಲ. ದುರ್ದೈವ ಅಂದರೆ ಸಿದ್ದರಾಮಯ್ಯ ಅಂತಹವರು ಜಾತ್ಯಾತೀತ ಅನ್ನೋ ಹೆಸರಿನಿಂದ ಮುಸ್ಲಿಂ ತುಷ್ಟೀಕರಣ ಮಾಡೋದು ಬಿಟ್ಟು ಬೇರೆ ಜನರ ಸಮಸ್ಯೆ ಗೊತ್ತಿಲ್ಲ. ಹೀಗಾಗಿ ಇಂತಹ ನಿರ್ಣಯ ಆಗ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದಲ್ಲಿ ತುಷ್ಟೀಕರಣ ಪರಾಕಾಷ್ಠೆ ಮುಟ್ಟಿದೆ. ಸಿದ್ದರಾಮಯ್ಯ ನಿಜವಾದ ಕನ್ನಡಿಗರು, ಮೂಲ ನಿವಾಸಿಗಳಿಗೆ ವಸತಿ ಕೊಡೋದು ಬಿಟ್ಟು ಕಾಂಗ್ರೆಸ್ ಹೈಕಮಾಂಡ್ ಸಿಎಂ, ಡಿಸಿಎಂಗೆ ವಾರ್ನಿಂಗ್ ಮಾಡಿದ್ದರಿಂದ ಲೋಕಲ್ ಅಲ್ಲದೆ ಇರುವವರಿಗೆ ಮನೆ ಕೊಡ್ತಾ ಇದ್ದಾರೆ. ಅವರೆಲ್ಲಾ ಯಾವ ದೇಶದವರು ಅಂತ ತನಿಖೆ ಮಾಡದೇ ವೋಟ್ ಬ್ಯಾಂಕ್ ಸಲುವಾಗಿ ಸರ್ಕಾರ ಮನೆ ಕೊಡುವ ನಿರ್ಧಾರ ಮಾಡ್ತಿದೆ. ಇದನ್ನ ನಾವು ವಿರೋಧ ಮಾಡ್ತೀವಿ. ರಾಜ್ಯದಲ್ಲಿ ನುಸುಳುಕೋರರು, ಬಾಂಗ್ಲಾದೇಶದವರು, ರೋಹಿಂಗ್ಯಾಗಳು ಯಾರು ಇದ್ದಾರೆ ಅವರನ್ನ ತನಿಖೆ ಮಾಡಿ, ಬಳಿಕ ಪುನರ್ ವಸತಿ ಕಲ್ಪಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕೋಗಿಲು ಲೇಔಟ್‌ನಲ್ಲಿ ಇರೋರು ಎಲ್ಲರೂ ಬಾಂಗ್ಲಾದೇಶದವರೇ: ಅಶ್ವಥ್ ನಾರಾಯಣ
ದಶಕಗಳಿಂದ ಉತ್ತರ ಕರ್ನಾಟಕದ ಜನ ಕೂಲಿ-ನಾಲಿ, ಜೀವನ ಮಾಡಲು ಬೆಂಗಳೂರು ಬಂದವರಿಗೆ ಪುನರ್ ವಸತಿ ಕಲ್ಪಿಸಬೇಕು. ಆದರೆ ಕಾಂಗ್ರೆಸ್ ಹೈಕಮಾಂಡ್‌ಗೆ ತಲೆಬಾಗಿ ಕನ್ನಡಿಗರಿಗೆ ಅಪಮಾನ ಮಾಡುವ ಕೆಲಸ ಈ ಸರ್ಕಾರ ಮಾಡ್ತಿದೆ, ಸರ್ಕಾರದ ನಡೆ ಖಂಡಿಸುತ್ತೇನೆ ಅಂತ ಕಿಡಿಕಾರಿದ್ದಾರೆ.
ಅಕ್ರಮ ಬಾಂಗ್ಲಾದೇಶದವರ ಬಗ್ಗೆ ಕೇಂದ್ರ ಸರ್ಕಾರ ತನಿಖೆ ಶುರು ಮಾಡಿತ್ತು. ಈಗ ಯಾಕೆ ನಿಂತಿದೆ ಗೊತ್ತಿಲ್ಲ. ಕೂತು ಚರ್ಚೆ ಮಾಡುವ ಅವಶ್ಯಕತೆ ಇದೆ. ದೇಶದಲ್ಲಿ ಎಸ್‌ಐಆರ್ ನಡೆಯುತ್ತಿದೆ. ತಮಿಳುನಾಡಿನ 1 ಕೋಟಿ ನಕಲಿ ಮತದಾರರು ಸಿಕ್ಕಿದ್ದಾರೆ. ಪಶ್ಚಿಮ ಬಂಗಾಳ ದಲ್ಲಿ 1 ಕೋಟಿ ನಕಲಿ ಮತದಾರರು ಸಿಕ್ಕಿದ್ದಾರೆ. ಕರ್ನಾಟಕದಲ್ಲೂ ನಕಲಿ ಮತದಾರರು, ಬಾಂಗ್ಲಾ, ರೋಹಿಂಗ್ಯಾಗಳ ಇದ್ದಾರೆ. ನಾನು ಈಗಾಗಲೇ ವಿಜಯಪುರ ಡಿಸಿಗೆ ಜಿಲ್ಲೆಯಲ್ಲಿ 19 ಸಾವಿರ ನಕಲಿ ಮತದಾರರು ಇದ್ದಾರೆ ಎಂದು ಮಾಹಿತಿ ಕೊಟ್ಟಿದ್ದೇನೆ. ಕರ್ನಾಟಕದಲ್ಲೂ ಎಸ್‌ಐಆರ್ ಪ್ರಾರಂಭ ಮಾಡಬೇಕು. ನಕಲಿ ಮತದಾರರನ್ನ ಭಾರತದ ಗಡಿಯಿಂದ ಆಚೆ ಹಾಕುವ ಕೆಲಸ ಸರ್ಕಾರ ಮಾಡಬೇಕು. ಅವರು ಹೋಗದೇ ಇದ್ದರೆ ಬಾಂಗ್ಲಾದೇಶದಲ್ಲಿ ಹೇಗೆ ಹಿಂದೂಗಳನ್ನು ಕೊಲೆ ಮಾಡುತ್ತಿದ್ದಾರೆ, ಅದೇ ರೀತಿ ಅನಿವಾರ್ಯವಾಗಿ ಭಾರತದ ಜನರೇ ಅವರನ್ನು ಕೊಲೆ ಮಾಡೋ ಪರಿಸ್ಥಿತಿ ನಿರ್ಮಾಣ ಆಗುತ್ತದೆ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ 2026ಕ್ಕೆ ಬಿಜೆಪಿಗೆ ವಾಪಸ್ ಬರ್ತಿರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ನಾನು ವಾಪಸ್ ಬರಬೇಕು ಅಂತ ಅನೇಕ ಶಾಸಕರ ಅಭಿಪ್ರಾಯ ಇದೆ. 2026 ಏನ್ ಆಗುತ್ತೋ ನೋಡಬೇಕು. ಯಾರಿಗೆ ಶುಭ ಸುದ್ದಿ, ಯಾರಿಗೆ ಅಶುಭ ಸುದ್ದಿ ಆಗುತ್ತೋ, ಯಾರು ಮನೆಗೆ ಹೋಗ್ತಾರೋ, ಯಾರು ಮೇಲೆ ಹೋಗ್ತಾರೋ ಗೊತ್ತಿಲ್ಲ ಎಂದಿದ್ದಾರೆ.
ಅನೇಕ ಶಾಸಕರು ಬಿಜೆಪಿಗೆ ಬರಬೇಕು ಅಂತ ಹೇಳ್ತಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಶಾಸಕರು ಬಿಜೆಪಿಗೆ ಬರಬೇಕು ಅಂತ ಕೇಳಿದ್ರು. ಇಲ್ಲದೆ ಹೋದ್ರೆ ಜನರನ್ನು ಆಕರ್ಷಣೆ ಮಾಡದೇ ಇರೋ ವ್ಯಕ್ತಿಯ ಮುಂದೆ ನಾವು ಜೋತು ಬಿದ್ದು ಹಣ ಖರ್ಚು ಮಾಡಿ, ಜನ ಸೇರಿಸಿ ಕಾರ್ಯಕ್ರಮ ಮಾಡೋದ್ರಲ್ಲಿ ಸತ್ತು ಹೋಗಿದ್ದೇವೆ ಎಂದು ಶಾಸಕರು ಹೇಳ್ತಿದ್ದಾರೆ. ನಾನು ಹೋದರೆ ಜನ ದುಡ್ಡು ಇಲ್ಲದೆ ಸೇರುತ್ತಾರೆ. ನಮ್ಮ ಶಾಸಕರಿಗೆ ಈ ವರ್ಷ ಖರ್ಚು ಕಡಿಮೆ ಆಗೋ ವರ್ಷ ಆಗಲಿ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಕೋಗಿಲು ಲೇಔಟ್‌ಗೆ ಅಕ್ರಮವಾಗಿ ಜನ ಹೇಗೆ ಬಂದರು ತನಿಖೆ ಆಗಲಿ: ಸುರೇಶ್ ಕುಮಾರ್

