ವಿಜಯಪುರ: ಯಡಿಯೂರಪ್ಪ ಮಗನ ಕರ್ಮಕಾಂಡ ವಿವರಿಸಲು ಮಂಗಳವಾರ ಮಧ್ಯಾಹ್ನ ದೆಹಲಿಗೆ ಹೊರಟಿದ್ದೇವೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದರು.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ತಟಸ್ಥರಿದ್ದವರು ಇದೀಗ ನಮ್ಮ ನಿಷ್ಠಾವಂತರ ಗುಂಪು ಸೇರಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಹೈಕಮಾಂಡ್ ಗಮನಕ್ಕೆ ತರಲು ಹೊರಟಿದ್ದೇವೆ. ವಂಶಪಾರಂಪರಿಕ, ಕುಟುಂಬಶಾಹಿ ವಿರುದ್ಧ ನಮ್ಮ ಹೋರಾಟ ಇದೆ. ಯಡ್ಡಿಯೂರಪ್ಪ ಅವರ ಮಗನ ಕರ್ಮಕಾಂಡದ ಬಗ್ಗೆ ವಿವರಿಸಲು ಹೊರಟಿದ್ದೇವೆ ಎಂದು ಕಿಡಿಕಾರಿದರು.ಇದನ್ನೂ ಓದಿ: ಈ ವರ್ಷ SSLC ವಿದ್ಯಾರ್ಥಿಗಳಿಗೆ 10% ಗ್ರೇಸ್ ಅಂಕ ಇಲ್ಲ: ಮಧು ಬಂಗಾರಪ್ಪ ಘೋಷಣೆ
Advertisement
Advertisement
ಇನ್ನೂ ಕುಟುಂಬಶಾಹಿ ರಾಜಕಾರಣ ಬಿಜೆಪಿಯಲ್ಲಿ ಕೊನೆಗೊಳ್ಳಬೇಕು. ಭ್ರಷ್ಟಾಚಾರ ಕುಟುಂಬ ಈ ರಾಜ್ಯದಿಂದ ತೊಲಗಬೇಕು. ಹಿಂದುತ್ವದ ಪರ ಇರುವ ನಾಯಕತ್ವ ಬರಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಯಾರು ಕೂಡ ಹಿಂದೂತ್ವದ ರಕ್ಷಣೆ ಮಾಡಲಿಲ್ಲ. ಹಿಂದೂಗಳ ಕೊಲೆಯಾದರೂ ಯಾರು ಕೇಳಲಿಲ್ಲ. ಕೇವಲ ಕಠಿಣ ಕ್ರಮ ಅನ್ನೋದನ್ನು ಬಿಟ್ಟರೆ ಏನು ಮಾಡಲಿಲ್ಲ. ಅದಕ್ಕಾಗಿಯೇ ರಾಜ್ಯದಲ್ಲಿ ಬಿಜೆಪಿ ಹೀನಾಯ ಪರಿಸ್ಥಿತಿ ತಲುಪಿದೆ. ಅದಕ್ಕೆ ಕಾರಣ ಹಿಂದುತ್ವ ಕೈಬಿಟ್ಟು ರಾಜಕಾರಣ ಮಾಡಿದ್ದು. ನಮ್ಮ ಟೀಂ ಈಗ ಬಹಳ ದೊಡ್ಡದಾಗಿದೆ. ತಟಸ್ಥ ಎಂದು ಎರಡು ಕಡೆ ಆಟ ಆಡುತ್ತಿದ್ದರು. ಈಗ ಅವರಿಗೂ ಗೊತ್ತಾಗಿದೆ. ಅವರೆಲ್ಲ ನಿಷ್ಠಾವಂತರಾಗಿದ್ದಾರೆ ಎಂದರು.
Advertisement
ವಿಜಯೇಂದ್ರನನ್ನು ರಾಜ್ಯಾಧ್ಯಕ್ಷನಾಗಿ ಮುಂದುವರೆಸಿದ್ರೆ ಕರ್ನಾಟಕದಲ್ಲಿ ಹೀನಾಯ ಸ್ಥಿತಿ ಬರುತ್ತದೆ. ಮೊನ್ನೆ ವಿಜಯೇಂದ್ರನಿಗೆ ಬಗ್ಗೆ ಹೀನಾಯವಾಗಿ ಬೈದರೂ ಉತ್ತರ ಕೊಡಲಿಲ್ಲ. ಯಡ್ಡಿಯೂರಪ್ಪನಿಗೆ ಮತ್ತು ಮಗನಿಗೆ ಡಿಕೆಶಿ ಭಯಪಡಿಸಿಬಿಟ್ಟಿದ್ದಾರೆ. ನೀವೇನಾದರೂ ನಮ್ಮ ಹಗರಣ ಹೊರತೆಗೆದರೆ ನಿಮ್ಮ ಪೋಕ್ಸೋ ಕೇಸ್ ಇದೆ, ನಕಲಿ ಸಹಿ ಮಾಡಿದಿಯಾ, ಅವನೆಲ್ಲ ಹೊರತೆಗೆಯುತ್ತೇವೆ ಅಂತಾ ಹೆದರಿಸಿದ್ದಾರೆ. ಇಂತಹವರು ಬೇಕಾ ಅಂತಾ ನಾವು ಹೈಕಮಾಂಡ್‌ಗೆ ಕೇಳುತ್ತಿದ್ದೇವೆ ಎಂದರು.ಇದನ್ನೂ ಓದಿ: ಮಂಡ್ಯ | ವಿಸಿ ನಾಲೆಗೆ ಕಾರು ಪಲ್ಟಿ – ಓರ್ವ ಸಾವು, ಇಬ್ಬರು ನಾಪತ್ತೆ
Advertisement