– ಶಾಮನೂರು ಶಿವಶಂಕರಪ್ಪ ಪರ ಬ್ಯಾಟ್ ಬೀಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ವಿಜಯಪುರ: ಪ್ರಸ್ತುತ ರಾಜ್ಯ ಸರ್ಕಾರದ ಹಿಂದೂ ವಿರೋಧಿ ಹಾಗೂ ಲಿಂಗಾಯತ ವಿರೋಧಿ ನೀತಿಯಿಂದ ಲಿಂಗಾಯತರ ಕಡೆಗಣನೆ ಆಗಿದೆ. ಉನ್ನತ ಹುದ್ದೆಗಳಲ್ಲಿ ಅಲ್ಪಸಂಖ್ಯಾತರನ್ನೇ ಕೂರಿಸಿ ಲಿಂಗಾಯತ ಅಧಿಕಾರಿಗಳಿಗೆ (lingayat Officers) ಅವಮಾನ ಮಾಡಲಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
Advertisement
ವಿಜಯಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತರು ಸಿಎಂ ಆಗಬೇಕು ಎಂಬ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರ ಹೇಳಿಕೆಯನ್ನ ಸ್ವಾಗತಿಸಿದ್ದಾರೆ. ಈ ಬಾರಿ ಲಿಂಗಾಯತರು ಸಪೋರ್ಟ್ ಮಾಡಿದ್ದರಿಂದಲೇ ಕಾಂಗ್ರೆಸ್‌ಗೆ (Congress) 135 ಸ್ಥಾನ ಬಂದಿದೆ. ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ಲಿಂಗಾಯತ ಅಧಿಕಾರಿಗಳಿಗೆ ಅವಮಾನ ಆಗಿರೋದು ನಿಜ. ಡಿಸಿ, ಎಸ್ಪಿ ಅಂತಹ ಉನ್ನತ ಹುದ್ದೆಗಳಲ್ಲಿ ಲಿಂಗಾಯತರು ಯಾರೂ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
Advertisement
Advertisement
ಸರ್ಕಾರದ ಹಿಂದೂ ವಿರೋಧಿ ಹಾಗೂ ಲಿಂಗಾಯತ ವಿರೋಧಿ ನೀತಿಯೇ ಇದಕ್ಕೆ ಕಾರಣ. ಎಲ್ಲ ಉನ್ನತ ಹುದ್ದೆಗಳನ್ನ ಅಲ್ಪಸಂಖ್ಯಾತರಿಗೆ ನೀಡಿ, ಲಿಂಗಾಯತ ಅಧಿಕಾರಿಗಳನ್ನ ಮೂಲೆಗುಂಪು ಮಾಡಿದ್ದಾರೆ. ಹಣಕಾಸು ಕಾರ್ಯದರ್ಶಿಯಿಂದ ಹಿಡಿದು ಸಿದ್ದರಾಮಯ್ಯನವರ ಮುಖ್ಯಮಂತ್ರಿ ಕಚೇರಿಯನ್ನೆಲ್ಲಾ ಅವರಿಗೇ ಕೊಟ್ಟಿದ್ದಾರೆ. ಅಲ್ಪಸಂಖ್ಯಾತರಿಂದಲೇ ಅಧಿಕಾರಕ್ಕೆ ಬಂದಿದ್ದೇವೆ ಎನ್ನವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಲಿಂಗಾಯತ ಶಾಸಕರು ಕಾಂಗ್ರೆಸ್‌ನಲ್ಲಿ ಇದ್ದರೂ ಅವರಿಗೆ ಮಾತನಾಡಲು ಧಮ್ ಇಲ್ಲ, ಧೈರ್ಯ ಮಾಡೋದು ಇಲ್ಲ ಎಂದು ಲೇವಡಿ ಮಾಡಿದ್ದಾರೆ.
Advertisement
ಬಿ.ಆರ್ ಪಾಟೀಲ್ ಆಳಂದ, ಬಸವರಾಜ ರಾಯರೆಡ್ಡಿ ಮಾತನಾಡಿ ಸುಮ್ಮನಾದರು. ನಮ್ಮಂತೆ ಮಾತನಾಡಿದ್ರೆ ಯಾಕೆ ಕೊಡೋದಿಲ್ಲ? ಶಾಮನೂರು ಶಿವಶಂಕರಪ್ಪನವರು ಸೋನಿಯಾಗಾಂಧಿ ಅವರ ಬಳಿ ಹೋಗಬೇಕು ಎಂದರಲ್ಲದೇ ಲಿಂಗಾಯತರಿಗೆ ಸ್ಥಾನಮಾನ ಕೊಡದೇ ಇದ್ದರೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದ್ದಾರೆ.
Web Stories