ವಿಜಯಪುರ: ಕೋವಿಡ್ (Covid 19) ವೇಳೆ 40 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ. 45 ರೂಪಾಯಿ ಒಂದು ಮಾಸ್ಕ್‌ಗೆ (Mask) 485 ರೂಪಾಯಿ ಹಾಕಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರು ಬಿಜೆಪಿ ಸರ್ಕಾರದ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ
ನನಗೂ ಕೋವಿಡ್ ಬಂದಿತ್ತು. ಆ ವೇಳೆ ನನಗೂ 5.80 ಲಕ್ಷ ರೂ. ಬಿಲ್ ಮಾಡಿದ್ದಾರೆ. ಶಾಸಕರಿಗೆ ಸಂಬಳ ಇದೆ. ಎಲ್ಲಾ ಸರ್ಕಾರದಿಂದ ತೆಗೆದುಕೊಂಡರೇ ಹೇಗೆ? ನಾನು ನನ್ನ ಬಿಲ್ ಅನ್ನು ಸ್ವಂತ ದುಡ್ಡಿನಿಂದ ಪಾವತಿಸಿದ್ದೇನೆ ಎಂದರು. ಇದನ್ನೂ ಓದಿ: ಕಮಲ ಉದುರಿ ಹೋಯ್ತು, ತೆನೆ ಹೊತ್ತ ಮಹಿಳೆ ತೆನೆ ಎಸೆದು ಓಡಿಯಾಯಿತು: ಡಿಕೆಶಿ ಕವನ ವಾಚನ
ಕೊರೊನಾ ವೇಳೆ ಕೋಟಿ ಕೋಟಿ ಲೂಟಿ ಮಾಡಲಾಗಿದ್ದು, ನನಗೆ ಲೂಟಿ ಮಾಡುವ ಚಟ ಇಲ್ಲ. ಕೊರೊನಾದಲ್ಲಿ (Corona) ಯಾರನ್ನು ಉದ್ಧಾರ ಮಾಡಿದ್ದೀರಿ. ಬೆಡ್‌ನಲ್ಲೂ ಅವ್ಯವಹಾರ ಮಾಡಲಾಗಿದೆ. ಕಳ್ಳರು ಕಳ್ಳರೇ ಎಂದ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸತ್ಯ ಹೇಳಿದರೆ ಭಯ ಇರುತ್ತದೆ. ನನ್ನನ್ನು ಪಕ್ಷದಿಂದ ಉಚ್ಛಾಟನೆ ಅಥವಾ ನೋಟಿಸ್ ನೀಡಲಿ. ಅವರ ಬಗ್ಗೆ ಎಲ್ಲವನ್ನೂ ಬಯಲು ಮಾಡುತ್ತೇನೆ ಎಂದು ಬಿಜೆಪಿ ಸವಾಲು ಹಾಕಿದರು.