BelgaumDistrictsKarnatakaLatestMain Post

ಚಹಾ, ಸಿಗರೇಟ್ ತಂದುಕೊಡುವಂತಹ ರೌಡಿಗಳಿಂದ ನಾನೇನು ಕಲಿಯಬೇಕಿಲ್ಲ: ಯತ್ನಾಳ್

- ಮುತಾಲಿಕ್‍ಗೆ ನನ್ನ ಬೆಂಬಲವಿದೆ

– ಮಾನ ಇದ್ದವರಿಗೆ ಮಾನನಷ್ಟ ಅಗುತ್ತೆ

ವಿಜಯಪುರ: ಚಹಾ, ಸಿಗರೇಟ್ ತಂದುಕೊಡುವಂತಹ ರೌಡಿಗಳಿಂದ ನಾನೇನು ಕಲಿಯಬೇಕಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಶಾಸಕ ಬಸನಗೌಡಾ ಪಾಟೀಲ್ ಯತ್ನಾಳ್ ಕಿಡಿಕಾರಿದರು.

ಡಿಕೆಶಿ ಹೇಳಿಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆಶಿ ಒಂದು ಬಾರಿ ಮಾನನಷ್ಟ ಮೊಕದ್ದಮೆ ಹಾಕಿದ್ದಾನೆ. ಮತ್ತೇನು ಹಾಕ್ತಾನೆ. ಹಣ ಇದೆ ಹಾಕ್ತಾನೆ, ಹಾಕಲಿ ಅದರಿಂದ ಏನಾಗುತ್ತೆ. ಮಾನ ಇದ್ದವರಿಗೆ ಮಾನನಷ್ಟ ಆಗುತ್ತೆ. ಮಾನ ಇಲ್ಲದವರಿಗೆ ಏನು ಮಾನನಷ್ಟ ಆಗುತ್ತೆ. ಕೋತ್ವಾಲ್ ರಾಮಚಂದ್ರನಿಗೆ ಚಹಾ, ಸಿಗರೇಟ್ ತಂದುಕೊಡುವಂತಹ ರೌಡಿಗಳಿಂದ ನಾನೇನು ಕಲಿಯಬೇಕಾಗಿಲ್ಲ ಎಂದು ಟಾಂಗ್ ನೀಡಿದರು ಇದನ್ನೂ ಓದಿ: ಪತಿ ಆಸೆ ಈಡೇರಿಸಿದ ಪತ್ನಿ: ಹುತಾತ್ಮ ಯೋಧನ ಪತ್ನಿ ಈಗ ಲೆಫ್ಟಿನೆಂಟ್

ಧ್ವನಿವರ್ಧಕ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ತೀರ್ಪಿನಂತೆ ಧ್ವನಿವರ್ಧಕ ವಿಷಯದಲ್ಲಿ ನಡೆಯಬೇಕಾಗುತ್ತೆ. ಸರ್ಕಾರ ಇದನ್ನು ಪಾಲಿಸಬೇಕು. ಈ ಕೂಡಲೇ ಸಿಎಂ ಬಸವರಾಜ ಬೊಮ್ಮಾಯಿ ಅವರು ಸರಿಯಾಗಿ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕು ಎಂದು ವಿವರಿಸಿದರು.

ಉತ್ತರ ಪ್ರದೇಶದಲ್ಲಿ ಯಾವ ರೀತಿ ಕ್ರಮ ಜರುಗಿಸಿದ್ದಾರೆ. ಅದೇ ರೀತಿ ನಮ್ಮಲ್ಲಿ ಏಕೆ ಮಾಡುವುದಕ್ಕೆ ಆಗುವುದಿಲ್ಲ. ಗೃಹ ಸಚಿವರು ಈ ಕೂಡಲೇ ಕ್ರಮಕ್ಕೆ ಮುಂದಾಗಬೇಕು. ದೇವಸ್ಥಾನ, ಮಸೀದಿ, ಚರ್ಚ್ ಯಾವುದೇ ಇರಲಿ, ನಿಯಮ ಮೀರಿ ಧ್ವನಿವರ್ಧಕ ಬಳಸುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದರು.

ಒಂದು ವೇಳೆ ಅವರು ಹೇಳಿದಂತೆ ಕೇಳದೆ ಹೋದ್ರೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಹೇಳಿದಂತೆ ದೇವಸ್ಥಾನಗಳಲ್ಲಿ ಹನುಮಾನ್ ಚಾಲಿಸಾ, ಸುಪ್ರಭಾತ, ಭಕ್ತಿಗೀತೆ 5 ಬಾರಿ ನುಡಿಸಬೇಕು ಎಂಬ ನಿರ್ಧಾರಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದರು. ಇದನ್ನೂ ಓದಿ:  ಧ್ವನಿವರ್ಧಕ ಗಲಾಟೆ ಮುಗಿದಿದ್ದು, ರಾಜ್ಯದಲ್ಲಿ ಶಾಂತಿ ನೆಲೆಸಿದೆ: ಸಂಜಯ್ ರಾವತ್

Leave a Reply

Your email address will not be published.

Back to top button