ಬೆಂಗಳೂರು: ರಾಜಾಹುಲಿ ಇರಲಿ, ಎಷ್ಟೇ ದೊಡ್ಡ ಹುಲಿಯಾಗಲಿ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಹೇಳಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರು ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Patnal) ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿಂದು (Vidhana Soudha) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವಪಕ್ಷೀಯರ ವಿರುದ್ಧ ಮತ್ತೆ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಜೆಡಿಎಸ್‍ನಲ್ಲಿ ಭಿನ್ನಮತ ಸ್ಫೋಟ- ಬಹಿರಂಗವಾಗಿ ಆಕ್ರೋಶ ಹೊರಹಾಕಿದ ಹೆಚ್.ಡಿ.ರೇವಣ್ಣ
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ಎಫ್‌ಐಆರ್ (FIR) ದಾಖಲಿಸುವಂತೆ ಕೋರ್ಟ್ (Court) ಆದೇಶ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಯತ್ನಾಳ್, ಎಷ್ಟೇ ದೊಡ್ಡ ಹುಲಿ ಇದ್ದರೂ, ಕಾನೂನಿನ ಮುಂದೆ ಎಲ್ಲರೂ ಒಂದೇ. ಈ ಹಿಂದೆ ಎಲ್.ಕೆ ಅಡ್ವಾಣಿ (LK Advani) ಮೇಲೆ ಹವಲಾ ಆರೋಪ ಕೇಳಿ ಬಂದಿತ್ತು. ಆ ಸಂದರ್ಭದಲ್ಲಿ ಅಡ್ವಾಣಿ ಅವರು ಎಲ್ಲ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ಆದ್ದರಿಂದ ರಾಜಾಹುಲಿ ಇರ್ಲಿ, ಯಾರೇ ಇರಲಿ ಎಲ್ಲರೂ ಕಾನೂನಿಗೆ ಸಮಾನರೇ. ಎಲ್.ಕೆ ಅಡ್ವಾಣಿ, ವಾಜಪೇಯಿಗಿಂತ ದೊಡ್ಡವ್ರಾ ಅವರು? ಬಿಎಸ್‌ವೈ ಅಡ್ವಾಣಿ ಅವರ ಆದರ್ಶ ಪಾಲಿಸಲಿ, ಕೇಂದ್ರೀಯ ಸಂಸದೀಯ ಮಂಡಳಿಯ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದ್ದಾರೆ.
ಮುಂಬರುವ ಚುನಾವಣೆಯ ದೃಷ್ಟಿಯಿಂದ ಮಾಡಲಾದ ಬಿಜೆಪಿ (BJP) ಕೇಂದ್ರೀಯ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ (Election) ಸಮಿತಿ ಎರಡಲ್ಲೂ ಬಿ.ಎಸ್.ಯಡಿಯೂರಪ್ಪ ಸ್ಥಾನ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಸುಕೇಶ್ ಕೊಟ್ಟ ದುಬಾರಿ ಗಿಫ್ಟ್ ಆಸೆಗೆ ಬಿದ್ದಿದ್ದು ಕೇವಲ ಜಾಕ್ವೆಲಿನ್ ಮಾತ್ರ ಅಲ್ಲ, ಇನ್ನೂ 4 ನಟಿಯರ ಲಿಸ್ಟ್ ರೆಡಿ
ನನ್ನ ಕಂಡ್ರೆ ಭಯ: ಕಾಂಗ್ರೆಸ್ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಭಯ ಇಲ್ಲ, ಯಡಿಯೂರಪ್ಪರ ಭಯ ಇಲ್ಲ. ಅವರಿಗೆ ನನ್ನ ಕಂಡರೆ ಭಯ. ಯತ್ನಾಳ್ ಎಲ್ಲಿ ಬಂದು ಬಿಡ್ತಾನೋ? ಅನ್ನೋ ಭಯ ಅವರಿಗೆ. ಯತ್ನಾಳ್ ಸಿಎಂ ಆದ್ರೆ ಜೈಲಿಗೊಬ್ಬರು, ಕಾಡಿಗೆ ಒಬ್ಬರು ಹೋಗಬೇಕಾಗುತ್ತೆ. ತಿಹಾರ್ ಜೈಲಿನಲ್ಲಿ ಯಾವ ಬಂಡೆನೂ ಇಲ್ಲ, ಪಂಡೆನೂ ಇಲ್ಲ, ಕೇವಲ ಸಂಡೇ ಅಷ್ಟೇ ಇರೋದು. ಹಾಗಾಗಿ ಕಾಂಗ್ರೆಸ್‌ಗೆ ನನ್ನ ಕಂಡರೆ ಭಯ ಎಂದು ಯತ್ನಾಳ್ ಕುಟುಕಿದ್ದಾರೆ.