– 224 ಮರಿ ಮೊಮ್ಮಕ್ಕಳು ಇದ್ದಿದ್ರೆ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದಿಂದ ನಿಲ್ಲಿಸ್ತಿದ್ರು
ವಿಜಯಪುರ: ಇಡೀ ರಾಜ್ಯ ಹಾಗೂ ದೇಶ ಆಳಬೇಕು ಎನ್ನುವ ಸ್ವಾರ್ಥ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಕುಟುಂಬಕ್ಕಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕುಟುಕಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಎಚ್.ಡಿ.ದೇವೇಗೌಡ ಅವರಿಗೆ 28 ಮೊಮ್ಮಕ್ಕಳು ಇದ್ದಿದ್ದರೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಂದ ಅವರನ್ನು ಕಣಕ್ಕೆ ಇಳಿಸುತ್ತಿದ್ದರು. ಅಷ್ಟೇ ಅಲ್ಲದೆ 224 ಮರಿ ಮೊಮ್ಮಕ್ಕಳು ಇದ್ದಿದ್ದರೆ ವಿಧಾನಸಭೆಗೆ ನಿಲ್ಲಿಸುತ್ತಿದ್ದರು ಎಂದು ಕುಟುಂಬ ರಾಜಕಾರಣದ ವಿರುದ್ಧ ಗುಡುಗಿದರು.
Advertisement
Advertisement
ವಿಶ್ವ ಮಹಿಳಾ ದಿನದಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಸುಮಲತಾ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಸಚಿವರು ಕೇವಲ ಸುಮಲತಾ ಅಂಬರೀಶ್ ಅವರಿಗೆ ಅಷ್ಟೇ ಅಲ್ಲ, ಇಡೀ ಮಹಿಳಾ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ರೇವಣ್ಣ ಅವರ ಹೇಳಿಕೆ ದೇವೇಗೌಡ ಅವರ ಕುಟುಂಬಕ್ಕೆ ಶೋಭೆ ತರುವುದಿಲ್ಲ. ಹೀಗಾಗಿ ಸಚಿವ ರೇವಣ್ಣ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಜೊತೆಗೆ ಸಚಿವರು ಮಾಡಿದ ತಪ್ಪಿಗೆ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಕೂಡ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
Advertisement
ಈ ಹಿಂದೆ ಜೆಡಿಎಸ್‍ನ ಶಾಸಕರೊಬ್ಬರು ನಿಧನರಾದ ಬಳಿಕ ಅವರ ಪತ್ನಿಗೆ ಟಿಕೆಟ್ ನೀಡಿದ್ದಾರೆ. ಅನುಕಂಪ ಹಾಗೂ ಜನರ ಒತ್ತಾಯದಿಂದ ಮೃತ ಶಾಸಕರ ಕುಟುಂಬದವರಿಗೆ ಅವಕಾಶ ನೀಡಲಾಗುತ್ತದೆ. ಅಂಬರೀಶ್ ಕಲಿಯುಗದ ದಾನಸೂರ ಕರ್ಣ. ಅಂಬರೀಶ್ ನಿಧನದ ಬಳಿಕ ಅವರ ಪತ್ನಿ ಸುಮಲತಾ ಅವರಿಗೆ ಟಿಕೆಟ್ ನೀಡಬೇಕು ಎಂದು ಸುಮಲತಾ ಪರ ಶಾಸಕರು ಬ್ಯಾಟ್ ಬೀಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv