ವಿಜಯಪುರ: ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದ (Ranya Rao Gold Smuggling Case) ನಂಟು ಹೊಂದಿರುವ ಸಚಿವರು ಯಾರು ಅನ್ನೋದು ಗೊತ್ತಿದೆ. ಅಧಿವೇಶನಲ್ಲಿ ಸಚಿವರ ಹೆಸರು ಬಹಿರಂಗಪಡಿಸುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೊಸ ಬಾಂಬ್ ಸಿಡಿಸಿದ್ದಾರೆ.
ರನ್ಯಾ ಗೋಲ್ಡ್ ಸ್ಮಗ್ಲಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿಂದು (Vijayapura) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರನ್ಯಾ ರಾವ್ ಪ್ರಕರಣದಲ್ಲಿ ಭಾಗಿಯಾಗಿರುವ ಸಚಿವರ ಹೆಸರು ನನಗೆ ಗೊತ್ತಿದೆ ಎಂದು ಸ್ಫೋಟಕ ಹೇಳಿಕೆ ನೀಡಿದರು. ಇದನ್ನೂ ಓದಿ: Ramanagara| 20 ವರ್ಷಗಳ ಬಳಿಕ ಮಂಚನಬೆಲೆ ಎಡದಂಡೆ ನಾಲೆಗೆ ಹರಿದ ನೀರು
ರನ್ಯಾ ಪ್ರಕರಣದ ನಂಟು ಹೊಂದಿರೋ ಸಚಿವರು ಯಾರು ಅನ್ನೋದು ಗೊತ್ತಿದೆ. ಅಧಿವೇಶನಲ್ಲಿ ಸಚಿವರ ಹೆಸರು ಬಹಿರಂಗಪಡಿಸುತ್ತೇನೆ. ರನ್ಯಾ ಜೊತೆಗೆ ಸಂಬಂಧ ಹೊಂದಿದವರು, ಆಕೆಗೆ ಪ್ರೋಟೊಕಾಲ್ (ಶಿಷ್ಟಾಚಾರ) ಕೊಟ್ಟವರ ಮಾಹಿತಿ ಸಂಗ್ರಹ ಮಾಡಿದ್ದೇವೆ. ಗೋಲ್ಡ್ ಎಲ್ಲಿಂದ ತಂದ್ರು? ಗೋಲ್ಡ್ ಎಲ್ಲಿಟ್ಟುಕೊಂಡು ತಂದ್ರು? ಎಲ್ಲವೂ ಗೊತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಸಿನಿಮಾ ಮೂಲಕ ಪುನೀತ್ ಜೀವಂತವಾಗಿದ್ದಾರೆ: ‘ಅಪ್ಪು’ ಸಿನಿಮಾ ಬಗ್ಗೆ ರಮ್ಯಾ ಮಾತು
ರನ್ಯಾ ಪ್ರಕರಣದಲ್ಲಿ ಕೇಂದ್ರದವರ ತಪ್ಪಿದೆ ಎಂಬ ಸಚಿವ ಲಾಡ್ ಆರೋಪ ಕುರಿತು ಪ್ರತಿಕ್ರಿಯಿಸಿದ ಯತ್ನಾಳ್, ಯಾರು ತಪ್ಪು ಮಾಡಿದ್ರೆ ಅದು ತಪ್ಪೆ. ನಾವು ಬಿಜೆಪಿಯವರು ಸಮರ್ಥನೆ ಮಾಡಿಕೊಳ್ತಿಲ್ಲ. ಕೇಂದ್ರದ ಅಧಿಕಾರಿಗಳ ತಪ್ಪಿದ್ರೆ ತಪ್ಪೆ, ನಮ್ಮ ಕೇಂದ್ರದ ಸಚಿವರು ಇದ್ರಲ್ಲಿ ಭಾಗಿ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನೂ ರನ್ಯಾಳಿಗೆ ಕೆಐಎಡಿಬಿಯಿಂದ ಜಮೀನು ಕೊಟ್ಟ ವಿಚಾರ ಕುರಿತು ಮಾತನಾಡಿ, ಜಮೀನು ಕೊಟ್ಟಿದ್ದನ್ನ ಸ್ವತಃ ನಿರಾಣಿ ಒಪ್ಪಿಕೊಂಡಿದ್ದಾರೆ. 12 ಏಕರೆ ಜಮೀನು ಕೊಟ್ಟಿದ್ದು, ಹಣ ಕಟ್ಟದೇ ಇರೋದಕ್ಕೆ ಅದು ರದ್ದಾಗಿದೆ. 12 ಎಕರೆಯದ್ದು ಯಾರೋ ಒಬ್ಬರು ಹಣ ಕೊಡ್ತೀನಿ ಎಂದಿದ್ದರು ಅವ್ರು ಕೊಟ್ಟಿಲ್ಲ ಎಂದರು. ಈ ವೇಳೆ ಹಣ ಕೊಡ್ತೀನಿ ಎಂದವರು ಸಚಿವರಾ? ಎನ್ನುವ ಪ್ರಶ್ನೆಗೆ ಮುಗುಳ್ನಕ್ಕರು. ಇದನ್ನೂ ಓದಿ: ‘ಜಗದೋದ್ಧಾರನಾ ಆಡಿಸಿದಳು ಯಶೋಧೆ’ ಹಾಡು ಹಾಡಿದ ಸಂಸದ ತೇಜಸ್ವಿ ಸೂರ್ಯ ಪತ್ನಿ