ಕ್ಯಾಮೆರಾಗೆ ಪೋಸ್ ಕೊಟ್ಟು ‘ಸಾಕು ಮಾಡಿ’ ಎಂದ ಆರಾಧ್ಯ: ವಿಡಿಯೋ ವೈರಲ್

Public TV
2 Min Read
aradhya bachchan collage

ಮುಂಬೈ: ಆರಾಧ್ಯ ಬಚ್ಚನ್ ತನ್ನ ತಂದೆ ಅಭಿಷೇಕ್ ಬಚ್ಚನ್ ಹಾಗೂ ತಾಯಿ ಐಶ್ವರ್ಯ ರೈ ಬಚ್ಚನ್ ಜೊತೆ ಭಾನುವಾರ ಉದ್ಯಮಿ ಮುಕೇಶ್ ಅಂಬಾನಿ ಮಗ ಆಕಾಶ್ ಅಂಬಾನಿ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಆರಾಧ್ಯ ಕ್ಯಾಮೆರಾಗೆ ಪೋಸ್ ಕೊಟ್ಟು ಸಾಕು ಮಾಡಿ ಎಂದು ಹೇಳಿದ ವಿಡಿಯೋ ವೈರಲ್ ಆಗಿದೆ.

ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಮೆಹ್ತಾ ಮದುವೆಗೆ ಕಾರ್ಯಕ್ರಮಕ್ಕೆ ಹಲವಾರು ಬಾಲಿವುಡ್ ಕಲಾವಿದರು ಆಗಮಿಸಿದ್ದರು. ಆರಾಧ್ಯ ಕೂಡ ತನ್ನ ತಂದೆ – ತಾಯಿ ಜೊತೆ ಆಗಮಿಸಿದ್ದಾಗ ಕ್ಯಾಮೆರಾಗಳಿಗೆ ಪೋಸ್ ನೀಡಲು ಅಲ್ಲಿದ ಛಾಯಾಗ್ರಾಹಕರು ಹೇಳಿದ್ದಾರೆ.

ಆರಾಧ್ಯ ತನ್ನ ತಂದೆ-ತಾಯಿ ಜೊತೆ ಫೋಟೋಗೆ ಪೋಸ್ ಕೊಡುವಾಗ ತನ್ನ ಕಣ್ಣನ್ನು ತಿರುಗಿಸುತ್ತಿದ್ದಳು. ಅಲ್ಲದೇ ಕ್ಯಾಮೆರಾಮೆನ್‍ಗಳು ತನ್ನತ್ತ ನೋಡಲು ಆಕೆಗೆ ಹೇಳಿದ್ದಾಗ ಆರಾಧ್ಯ ಒಂದೇ ಸಮ್ಮನೇ ಎಡಗಡೆ ಹಾಗೂ ಬಲಗಡೆ ತಿರುಗುತ್ತಾ ತುಂಟಾಟ ಮಾಡುತ್ತಾ ಫೋಟೋಗೆ ಪೋಸ್ ನೀಡಿದ್ದಾಳೆ.

aradhya bachchan 2

ಫೋಟೋ ಪೋಸ್ ನೀಡಿದ ಬಳಿಕ ಆರಾಧ್ಯ ಅಭಿಷೇಕ್ ಹಾಗೂ ಐಶ್ವರ್ಯ ರೈ ಬಚ್ಚನ್ ಜೊತೆ ಹೋಗುವಾಗ ಸಾಕು ಮಾಡಿ ಎಂದು ಜೋರಾಗಿ ಕ್ಯಾಮೆರಾಮೆನ್‍ಗಳಿಗೆ ಹೇಳಿದ್ದಾಳೆ. ಈ ವೇಳೆ ಅಭಿಷೇಕ್, ಐಶ್ವರ್ಯ ಹಾಗೂ ಅಲ್ಲಿದ್ದ ಛಾಯಾಗ್ರಾಹಕರು ಜೋರಾಗಿ ನಕ್ಕಿದ್ದಾರೆ. ಆರಾಧ್ಯ ಸಾಕು ಮಾಡಿ ಎಂದು ಹೇಳಿದ ವಿಡಿಯೋ ಈಗ ವೈರಲ್ ಆಗಿದೆ.

ಆಕಾಶ್ ಅಂಬಾನಿ ಹಾಗೂ ಶ್ಲೋಕ ಮೆಹ್ತಾ ಭಾನುವಾರ ಮುಂಬೈನ ಬಾಂದ್ರಾ- ಕುರ್ಲಾ ಕಾಂಪ್ಲೆಕ್ಸ್ ನಲ್ಲಿರುವ ಜಿಯೋ ವರ್ಲ್ಡ್ ಸೆಂಟರ್​ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆಗೆ ಬಾಲಿವುಡ್ ಕಲಾವಿದರು ಸೇರಿದಂತೆ ಉದ್ಯಮಿಗಳು, ರಾಜಕೀಯ ವ್ಯಕ್ತಿಗಳು ಹಾಗೂ ಕ್ರೀಡಾ ಆಟಗಾರರು ಆಗಮಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *