ನವದೆಹಲಿ: ಗಾಂಧೀಜಿ ಅವರ ನಂತರ ಈ ದೇಶದಲ್ಲಿ ಯಾರಾದರೂ ಸ್ವಚ್ಛತೆಯ ಮಹತ್ವವನ್ನು ಹೆಚ್ಚು ಅರಿತಿದ್ದರೆ, ಅದು ಮೋದಿ ಮಾತ್ರ. ನರೇಂದ್ರ ಮೋದಿ (Narendra Modi) ಅವರನ್ನು ಹೊರತುಪಡಿಸಿ ಬೇರೆ ಯಾವೊಬ್ಬ ಪ್ರಧಾನಿಯೂ ದೇಶದಲ್ಲಿ ಶೌಚಾಲಯಗಳ ನಿರ್ಮಾಣದ ಅಗತ್ಯತೆಯ ಬಗ್ಗೆ ಹೇಳಲಿಲ್ಲ ಎಂದು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ram Nath Kovind) ಹೇಳಿದ್ದಾರೆ.
आज नई दिल्ली में सुलभ इंटरनेशनल द्वारा आयोजित राष्ट्रीय संगोष्ठी ‘स्वच्छता के समाजशास्त्र’ विषय पर संबोधन दिया। मेरा मानना है कि सामाजिक परिवर्तन लाने और स्वरोजगार पैदा करने के लिए, स्वच्छता के समाजशास्त्र को एक टूल के रूप में इस्तेमाल किया जाना चाहिए। pic.twitter.com/65oKVqJF8o
— Ram Nath Kovind (@ramnathkovind) April 2, 2023
Advertisement
ಭಾನುವಾರ ದೆಹಲಿಯಲ್ಲಿ (NewDelhi) ನಡೆದ ನೈರ್ಮಲ್ಯ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕಿಂತಲೂ ಹೆಚ್ಚಾಗಿ ಸ್ವಚ್ಛತೆಯೂ ಅಗತ್ಯ ಎಂಬುದು ರಾಷ್ಟ್ರಪಿತ ಗಾಂಧೀಜಿಯವರ ನಂಬಿಕೆಯಾಗಿತ್ತು. ಅವರು ಸ್ವಾತಂತ್ರ್ಯ ಮತ್ತು ಸ್ವಚ್ಛತೆಗೆ ಸಮಾನ ಆದ್ಯತೆ ನೀಡಿದ್ದರು ಎಂದು ಹೇಳಿದರು. ಇದನ್ನೂ ಓದಿ: ಕೋರ್ಟ್ ಆದೇಶ ಪ್ರಶ್ನಿಸಿ ಸೋಮವಾರ ರಾಹುಲ್ ಮೇಲ್ಮನವಿ ಸಾಧ್ಯತೆ
Advertisement
Advertisement
ಗಾಂಧೀಜಿ ಅವರ ನಂತರ ಯಾರಾದರೂ ಸ್ವಚ್ಛತೆಯ ಮಹತ್ವ ಹೆಚ್ಚು ಅರಿತಿದ್ದರೆ, ಅದು ಮೋದಿ ಮಾತ್ರ. ಶೌಚಾಲಯಗಳನ್ನು (Toilets Buildings) ನಿರ್ಮಿಸುವ ಬಗ್ಗೆ ರಾಷ್ಟ್ರಪತಿ ಭವನದ ಕೆಂಪುಕೋಟೆಯಿಂದ ಮಾತನಾಡಿದ ಮೊದಲ ಪ್ರಧಾನಿಯೂ ಮೋದಿಯೇ ಆಗಿದ್ದಾರೆ. ಆದರೆ ಅದಕ್ಕೂ ಕೆಲವರು ಮೋದಿಯನ್ನ ಗೇಲಿ ಮಾಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಗುಣಗಾನ ಮಾಡಿದರು.
Advertisement
ಇದೇ ವೇಳೆ ಸಮ್ಮೇಳನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಗೈರಾದ ಹಿನ್ನೆಲೆಯ ಅವರ ಸಂದೇಶವನ್ನು ಓದಲಾಯಿತು. ಇದನ್ನೂ ಓದಿ: ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹಕ್ಕೆ ಅಮೆರಿಕ, ಜರ್ಮನಿ ಸ್ಪಂದನೆ ಅನಗತ್ಯ: ಕೇಂದ್ರ ಸಚಿವ ಜೈಶಂಕರ್
ದೆಹಲಿಯ ಸುಲಭ್ ಇಂಟರ್ ನ್ಯಾಷನಲ್‌ನ ಸೋದರ ಸಂಸ್ಥೆ ಸುಲಭ್ ಇಂಟರ್‌ನ್ಯಾಷನಲ್ ಸ್ಕೂಲ್ ಆಫ್ ಆಕ್ಷನ್ ಸೋಶಿಯಾಲಜಿ ಆಯೋಜಿಸಿರುವ 3 ದಿನಗಳ ಸಮ್ಮೇಳನದಲ್ಲಿ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು ಮತ್ತು ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.