ನವದೆಹಲಿ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಸುಮಾರು 200 ರೈತ ಸಂಘಟನೆಗಳು ಮಂಗಳವಾರ (ಫೆ.13) ದೆಹಲಿ ಚಲೋಗೆ (Delhi Chalo) ಕರೆ ನೀಡಿವೆ.
#WATCH | Barricading arranged by the Delhi Police at Singhu Border, ahead of the ‘Delhi-Chalo’ protest by farmers on February 13. pic.twitter.com/DBayCdcGU2
— ANI (@ANI) February 12, 2024
`ದೆಹಲಿ ಚಲೋ’ ನಲ್ಲಿ ಸುಮಾರು 20,000 ರೈತರು (Farmers) ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಈಗಾಗಲೇ ಹಲವು ಕಡೆ ಗಡಿಗಳನ್ನು ಬ್ಯಾರಿಕೇಡ್‌ಗಳಿಂದ ಬಂದ್ ಮಾಡಲಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಈ ಪ್ರತಿಭಟನೆಗೆ 200 ರೈತ ಸಂಘಟನೆಗಳು ಬೆಂಬಲ ನೀಡಿದ್ದು, ಸುಮಾರು 20,000 ರೈತರು ಪಾಲ್ಗೊಳ್ಳಲಿದ್ದಾರೆ ಎಂದು ಗುಪ್ತಚರ ಇಲಾಖೆ ಅಂದಾಜಿಸಿದೆ. ಇದನ್ನೂ ಓದಿ: ಪಾಕ್ ಚುನಾವಣೆ ಮತ ಎಣಿಕೆ ಅಂತ್ಯ; ಇಮ್ರಾನ್ ಖಾನ್ ಮುನ್ನಡೆ, ನವಾಜ್ ಷರೀಫ್‌ಗೆ ಸೇನೆ ಬೆಂಬಲ
ಈ ಹಿನ್ನೆಲೆಯಲ್ಲಿ ರೈತರು ಅಂಬಾಲ-ಸಿಂಘು, ಕನೌರಿ-ಜಿಂದ್, ಮತ್ತು ದಬಾವಲಿ ಗಡಿಗಳ ಮೂಲಕ ರಾಜಧಾನಿ ಪ್ರವೇಶಕ್ಕೆ ರೈತರು ಯೋಜಿಸಿದ್ದಾರೆ. ಈಗಾಗಲೇ ಪಂಜಾಬ್ ಹಾಗೂ ಹರಿಯಾಣದ ಟ್ರ್ಯಾಕ್ಟರ್‌ಗಳಲ್ಲಿ ಹೊರಟಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿಯ ಗಡಿ ಭಾಗಗಳನ್ನ ಬ್ಯಾರಿಕೇಡ್‌ಗಳಿಂದ (Barricading) ಬಂದ್ ಮಾಡಲಾಗಿದೆ. ಇದನ್ನೂ ಓದಿ: ಮುಸ್ಲಿಮರು ನಮ್ಮ ಹಿಂದುತ್ವ ಬೆಂಬಲಿಸುತ್ತಾರೆ.. ಬಿಜೆಪಿ ಹಿಂದುತ್ವ ತಿರಸ್ಕರಿಸುತ್ತಾರೆ: ಉದ್ಧವ್ ಠಾಕ್ರೆ
ಗಡಿಗಳಲ್ಲಿ ಕ್ರೇನ್ ಮತ್ತು ಕಂಟೇನರ್‌ಗಳನ್ನು ತಂದಿಡಲಾಗಿದ್ದು, ರೈತರು ದೆಗಲಿ ಪ್ರವೇಶ ಮಾಡಲು ಯತ್ನಿಸಿದ್ರೆ ಹೆದ್ದಾರಿಯನ್ನೇ ಬಂದ್ ಮಾಡಲು ಪೊಲೀಸರು ಯೋಜಿಸಿದ್ದಾರೆ. ಇದರೊಂದಿಗೆ ಯಾವುದೇ ಅನಾಹುತಕಾರಿ ಘಟನೆಗಳನ್ನು ತಡೆಯಲು ಹೆಚ್ಚುವರಿ ಪೊಲೀಸ್ ಭದ್ರತೆಯನ್ನ ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲಾಗಿದೆ. ಆದ್ರೆ ಬ್ಯಾರಿಕೇಡ್‌ಗಳ ಅಸ್ತ್ರವನ್ನು ಭೇದಿಸಲು ರೈತರು ತಮ್ಮ ಟ್ರ್ಯಾಕ್ಟರ್‌ಗಳನ್ನೇ ಹಿಟಾಚಿ ರೂಪಕ್ಕೆ ಪರಿವರ್ತಿಸಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಪತಿ-ಪತ್ನಿಯ ವೈಮನಸ್ಸಿನಿಂದ ನಡೆದೇಹೋಯ್ತು ಘೋರ ದುರಂತ – ಮಹಿಳೆ ಮೇಲೆ ಗ್ಯಾಂಗ್ ರೇಪ್