ಮುಂಬೈ: ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಗ್ರೂಪ್-ಬಿ ಪಂದ್ಯದಲ್ಲಿ ಬರೋಡಾ (Baroda), ಸಿಕ್ಕಿಂ ತಂಡದ ವಿರುದ್ಧ ರನ್ ರಣಮಳೆಯನ್ನೇ ಸುರಿಸಿದೆ.
ಇಂದೋರ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೃನಾಲ್ ಪಾಂಡ್ಯ ನಾಯಕತ್ವದ ಬರೋಡಾ ತಂಡ 20 ಓವರ್‌ನಲ್ಲಿ ಬರೋಬ್ಬರಿ 349 ರನ್ ಸಿಡಿಸಿ ವಿಶ್ವ ದಾಖಲೆ ಬರೆದಿದೆ. ಆರಂಭಿಕರಾಗಿ ಕಣಕ್ಕಿಳಿದ ಬರೋಡಾದ ಶಾಶ್ವತ್ ರಾವತ್ ಹಾಗೂ ಅಭಿಮನ್ಯು ಸಿಂಗ್ 92 ರನ್ ಗಳ ಜೊತೆಯಾಟ ನೀಡಿ ಸ್ಫೋಟಕ ಆರಂಭ ನೀಡಿದರು. ಇದರಲ್ಲಿ ಅಭಿಮನ್ಯು 17 ಎಸೆತಗಳಲ್ಲಿ 53 ರನ್ ಬಾರಿಸಿದ್ರೆ, ಶಾಶ್ವತ್ 16 ಎಸೆತಗಳಲ್ಲಿ 43 ರನ್ ಸಿಡಿಸಿದರು.
Advertisement
ಇವರಿಬ್ಬರ ವಿಕೆಟ್ ಪತನಗೊಳ್ಳುತ್ತಿದ್ದಂತೆ ಕ್ರೀಗಿಳಿದ ಭಾನು ಪಾನಿಯಾ (Bhanu Pani) ಭರ್ಜರಿ ಸಿಕ್ಟರ್ ಬೌಂಡರಿಗಳ ಮಳೆ ಸುರಿಸಿದರು. ತಾನು ಎದುರಿಸಿದ 51 ಎಸೆಯಗಳಲ್ಲಿ 15 ಭರ್ಜರಿ ಸಿಕ್ಸರ್, 5 ಬೌಂಡರಿ ಸೇರಿ 262.74 ಸ್ಟ್ರೈಕ್‌ರೇಟ್‌ನೊಂದಿಗೆ ಅಜೇಯ 134 ರನ್ ಚಚ್ಚಿದರು. ಇದನ್ನೂ ಓದಿ: ಅಂತಾರಾಷ್ಟ್ರೀಯ ಟೆಕ್ವಾಂಡೋ ಸ್ಪರ್ಧೆ: ಪಾಣೆಮಂಗಳೂರಿನ ಆಯಿಶಾ ಹಫೀಝ್‌ಗೆ ಚಿನ್ನ
Advertisement
Advertisement
ಇದರೊಂದಿಗೆ ಜೊತೆಯಾದ ಶಿವಾಲಿಕ್ ಶರ್ಮಾ 17 ಎಸೆತಗಳಲ್ಲಿ 6 ಸಿಕ್ಸರ್ ಗಳನ್ನು ಬಾರಿಸಿ 55 ರನ್ ಗಳಿಸಿದರು. ಇನ್ನಿಂಗ್ಸ್‌ನ ಕೆಲ ಓವರ್ ಬಾಕಿ ಇರುವಾಗ ಕಣಕ್ಕಿಳಿದ ವಿಕೆಟ್ ಕೀಪರ್ ಬ್ಯಾಟರ್ ವಿಷ್ಣು ಸೋಲಂಕಿ 16 ಎಸೆತಗಳಲ್ಲಿ 6 ಸಿಕ್ಸರ್ಗಳೊಂದಿಗೆ 50 ರನ್ ಬಾರಿಸಿದರು.
Advertisement
ಒಟ್ಟಾರೆಯಾಗಿ ಬರೋಡಾ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 349 ರನ್ ಪೇರಿಸಿತು. ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ್ದ ಸಿಕ್ಕಿಂ ತಂಡ 20 ಓವರ್‌ಗಳಲ್ಲಿ ಕೇವಲ 86 ರನ್‌ಗಳಿಸಿ 7 ವಿಕೆಟ್ ಕಳೆದುಕೊಂಡು 263 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ಡಿ.22 ರಂದು ಹಸೆಮಣೆ ಏರಲಿದ್ದಾರೆ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು
ಈ ಹಿಂದೆ (2024 ರಲ್ಲಿ) ಜಿಂಬಾಬ್ಬೆ ತಂಡ ಗಾಂಬಿಯಾ ವಿರುದ್ಧದ ಪಂದ್ಯದಲ್ಲಿ ತಂಡವು 344 ರನ್ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿತ್ತು. ಇದಕ್ಕೂ ಮುನ್ನ ನೇಪಾಳ ತಂಡ ಮಂಗೋಲಿಯಾ ವಿರುದ್ಧ ಹ್ಯಾಂಗ್‌ಝೌ (2023ರಲ್ಲಿ) 314/3 ರನ್ ಗಳಿಸಿತ್ತು.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿದ ಟಾಪ್-5 ತಂಡಗಳು
* ಜಿಂಬಾಬ್ವೆ – 344 ರನ್
* ನೇಪಾಳ – 314 ರನ್
* ಭಾರತ – 297 ರನ್
* ಜಿಂಬಾಬ್ವೆ – 286 ರನ್
* ಭಾರತ – 283 ರನ್