ಮಂಗಳೂರು: ಬ್ರೇಕ್ ವಾಟರ್ ಕಾಮಗಾರಿಯ ಬಾರ್ಜ್ ಸಮುದ್ರದ ನಡುವಿನ ಬಂಡೆಗೆ ಡಿಕ್ಕಿ ಹೊಡೆದ ಘಟನೆ ಮಂಗಳೂರಿನ ಉಳ್ಳಾಲದ ಸಮುದ್ರ ಕಿನಾರೆಯಲ್ಲಿ ನಡೆದಿದೆ.
ಉಳ್ಳಾಲದ ಮೊಗವೀರಪಟ್ಣದಲ್ಲಿ ಈ ಘಟನೆ ನಡೆದಿದೆ. ಬಾರ್ಜ್ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ಭಾಗಶಃ ಹಾನಿಯಾಗಿದ್ದು, ಮುಳುಗಡೆ ಭೀತಿಯಲ್ಲಿದೆ. ಬಾರ್ಜ ನಲ್ಲಿ ಕೆಲಸ ಮಾಡುತ್ತಿದ್ದ 33 ನೌಕರರು ಅಪಾಯದಂಚಿನಲ್ಲಿದ್ದಾರೆ. ಇತ್ತ ಬಾರ್ಜ್ ನಲ್ಲಿರುವ ಜನರು ಸಿಡಿಮದ್ದು ಸಿಡಿಸಿ ರಕ್ಷಣೆಗಾಗಿ ಮೊರೆ ಇಡುತ್ತಿದ್ದಾರೆ.
ಬ್ರೇಕ್ ವಾಟರ್ ಕಾಮಗಾರಿಗೆ ಆಗಮಿಸಿದ್ದ ಬಾಜ್ ಈಗಾಗಲೇ ಮೊದಲ ಹಂತದ ಕಾಮಾಗರಿಯನ್ನು ಪೂರ್ಣಗೊಳಿಸಿತ್ತು. ಬಾರ್ಜ್ ರವಿವಾರ ಮುಂಬೈನತ್ತ ಪ್ರಯಾಣ ಬೆಳಸಬೇಕಿತ್ತು. ಬಾರ್ಜ್ ನಿಲುಗಡೆಗೆ ಹಾಕಿದ್ದ ಲಂಗರು ಸಮುದ್ರದ ಅಲೆಗಳ ಹೊಡೆತಕ್ಕೆ ಶನಿವಾರ ಮಧ್ಯಾಹ್ನ ತುಂಡಾಗಿದೆ. ಇನ್ನು ಸ್ಥಳಕ್ಕೆ ಕೋಸ್ಟಲ್ ಗಾರ್ಡ್ ತಂಡ ಆಗಮಿಸಿದ್ದು, ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ.