ಹಾಸನ: ಪ್ರೇಮ ವೈಫಲ್ಯದಿಂದ (Love Failure) ಪ್ರಿಯಕರ ತನ್ನ ಪ್ರೇಯಸಿಯ (Lover) ಕತ್ತು ಕುಯ್ದು ಬರ್ಬರವಾಗಿ ಹತ್ಯೆಗೈದ ಘಟನೆ ಹಾಸನ (Hassan) ತಾಲೂಕಿನ ಕುಂತಿಗುಡ್ಡದಲ್ಲಿ (Kuntigudda) ನಡೆದಿದೆ.
ಸುಚಿತ್ರಾ (20) ಕೊಲೆಯಾದ ಯುವತಿ. ತೇಜಸ್ (23) ಕೊಲೆ ಮಾಡಿರುವ ಪ್ರಿಯಕರ. ಸುಚಿತ್ರಾ ಆಲೂರು ತಾಲೂಕಿನ ಕವಳಗೆರೆ ಗ್ರಾಮದವಳಾಗಿದ್ದು, ಮೊಸಳೆಹೊಸಳ್ಳಿ ಎಂಜಿನಿಯರ್ ಕಾಲೇಜಿನಲ್ಲಿ ಬಿಇ ಮೆಕ್ಯಾನಿಕಲ್ ಪದವಿ ಓದುತ್ತಿದ್ದಳು. ಮೂಲತಃ ಹಾಸನ ತಾಲೂಕಿನ ಶಂಕರನಹಳ್ಳಿ ಗ್ರಾಮದವನಾದ ತೇಜಸ್ ಸುಚಿತ್ರಾಳ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದಿದ್ದಾನೆ. ಇದನ್ನೂ ಓದಿ: ಬೈಕ್‌ಗೆ ಖಾಸಗಿ ಬಸ್ ಡಿಕ್ಕಿ – ಮಗಳ ಮನೆಗೆ ತೆರಳುತ್ತಿದ್ದ ಮಹಿಳೆ ದಾರುಣ ಸಾವು
ಪ್ರೀತಿಸಲು ನಿರಾಕರಿಸಿದ್ದಕ್ಕೆ ತೇಜಸ್ ಸುಚಿತ್ರಾಳನ್ನು ತನ್ನೊಂದಿಗೆ ಕುಂತಿಬೆಟ್ಟಕ್ಕೆ ಕರೆದೊಯ್ದಿದ್ದಾನೆ. ಇಂದು ಮುಂಜಾನೆ ಯುವತಿಯನ್ನು ಒಂಟಿಯಾಗಿ ಕರೆದೊಯ್ದು ಬಳಿಕ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾನೆ. ಘಟನೆ ಬಳಿಕ ಆರೋಪಿ ತೇಜಸ್ ಎಸ್ಕೇಪ್ ಆಗಿದ್ದ. ಇದನ್ನೂ ಓದಿ: ಹಳಿಯಲ್ಲಿ ಕಬ್ಬಿಣದ ರಾಡ್, ದೊಡ್ಡ ಮರದ ದಿಮ್ಮಿ – ಮೈಸೂರಿನಲ್ಲಿ ತಪ್ಪಿತು ಭಾರೀ ರೈಲು ದುರಂತ
ತೇಜಸ್ ಕೂಡಾ ಮೊಸಳೆಹೊಸಳ್ಳಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 10 ಕೋಟಿ ಆಸ್ತಿ ಆಸೆಗೆ ಪತ್ನಿಯನ್ನೇ ಕೊಂದು ಸಹಜ ಸಾವೆಂದು ನಾಟಕವಾಡಿ ಸಿಕ್ಕಿಬಿದ್ದ ಪತಿ