ಬೆಂಗಳೂರು: ಕೋರಮಂಗಲದ (Koramangala) ಪಿಜಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಭಿಷೇಕ್ ವಿರುದ್ಧ ಕೋರಮಂಗಲ ಪೊಲೀಸರು (Koramangala Police) ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಘಟನೆ ನಡೆದ 38 ದಿನಗಳ ಒಳಗಾಗಿ 39ನೇ ಎಸಿಎಂಎಂ ನ್ಯಾಯಾಲಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. 1,205 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. ಬಿಎನ್‌ಎಸ್ ಅಡಿಯಲ್ಲಿ ದಾಖಲಾದ ಕೊಲೆ ಪ್ರಕರಣದ ಮೊದಲ ಚಾರ್ಜ್‌ಶೀಟ್ ಇದಾಗಿದೆ. ಜುಲೈ 23ರ ರಾತ್ರಿ 11 ಗಂಟೆಗೆ ಕೋರಮಂಗಲದ ಲೇಡಿಸ್ ಪಿಜಿ ಒಳಗೆ ನುಗ್ಗಿ ಕೃತಿಕಾ ಎಂಬ ಯುವತಿಯನ್ನು ಅಭಿಷೇಕ್ ಕೊಲೆ ಮಾಡಿದ್ದ. 85 ಸಾಕ್ಷಿಗಳ ಹೇಳಿಕೆಯನ್ನು ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿದ್ದಾರೆ. ಇದನ್ನೂ ಓದಿ: Paris Paralympics 2024 | ಭಾರತಕ್ಕೆ ಮತ್ತೊಂದು ಪದಕ – ಕಂಚಿಗೆ ರುಬಿನಾ ಶೂಟ್
ಸೈಕೋ ಅಭಿಷೇಕ್, ಮೃತ ಕೃತಿಕಾ ಸ್ನೇಹಿತೆಯನ್ನು ಲವ್ ಮಾಡುತ್ತಿದ್ದ. ಕೃತಿ ಗೆಳತಿಯನ್ನು ಪಾಗಲ್ ಪ್ರೇಮಿ ರೂಂನಲ್ಲಿ ಕೂಡಿ ಹಾಕಿದ್ದ. ರೂಂಮೇಟ್ ಪಿಜಿಗೆ ಬರಲಿಲ್ಲ ಎಂದು ತಲೆಬಿಸಿ ಮಾಡಿಕೊಂಡಿದ್ದ ಕೃತಿ ವಿಷಯ ಗೊತ್ತಾಗಿ ಗೆಳತಿಯನ್ನು ಬಂಧನದಿಂದ ಬಿಡಿಸಿದ್ದಳು. ಕೃತಿಕಾಳಿಂದ ನನ್ನ ಪ್ರೇಯಸಿ ದೂರವಾಗುತ್ತಿದ್ದಾಳೆಂದು ಪಿಜಿ ಬಳಿ ಕಾದು ಕೊಲೆ ಮಾಡಿ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ಕೋರಮಂಗಲ ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಮೂರು ವಂದೇ ಭಾರತ್ ರೈಲುಗಳಿಗೆ ಮೋದಿ ಚಾಲನೆ – ಮಧುರೈ-ಬೆಂಗಳೂರು ರೈಲಿಗೂ ಹಸಿರು ಪತಾಕೆ ತೋರಿದ ಪ್ರಧಾನಿ