ಬೆಳಗಾವಿ: ಸ್ನೇಹಿತನನ್ನು ಬರ್ತ್‍ಡೇ (Birthday) ಪಾರ್ಟಿಗೆ ಕರೆದು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಯರಗಟ್ಟಿ ತಾಲೂಕಿನ ನುಗ್ಗಾನಟ್ಟಿ ಗ್ರಾಮದಲ್ಲಿ ನಡೆದಿದೆ.
ಹತ್ಯೆಗೀಡಾದ ಯುವಕನನ್ನು ಬಸವರಾಜ್ ಮುದ್ದಣ್ಣವರ (23) ಎಂದು ಗುರುತಿಸಲಾಗಿದೆ. ಬಸವರಾಜ್ ಎಂಎಸ್‍ಡಬ್ಲ್ಯೂ (MSW) ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಆತನನ್ನು ಸ್ನೇಹಿತ ಮಲ್ಲಿಕಾರ್ಜುನ್ ಬರ್ತ್ ಡೇ ಪಾರ್ಟಿಗೆ ಕರೆದಿದ್ದ. ಬಳಿಕ ಆತ ಬರುತ್ತಿದ್ದಂತೆ ಗಲಾಟೆ ಆರಂಭಿಸಿ, ಐವರು ಸ್ನೇಹಿತರು ಸೇರಿ ಆತನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಸಾಲ ವಾಪಸ್ ಕೊಡುತ್ತೇನೆಂದು ಕರೆಸಿ ಮಹಿಳೆ ಕೊಲೆ – ರೇಷ್ಮೆ ತೋಟದಲ್ಲಿ ಶವ ಹೂತಿಟ್ಟು ಆರೋಪಿ ಎಸ್ಕೇಪ್!
ತೀವ್ರವಾಗಿ ಗಾಯಗೊಂಡ ಬಸವರಾಜ್‍ನನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ. ಮುರಗೋಡ ಪೊಲೀಸ್ (Muragod Police) ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಉತ್ತರಾಖಂಡ ಹಿಮಪಾತ- ಬೆಂಗಳೂರಿನ ಪ್ರಸಿದ್ಧ ಬಹುರಾಷ್ಟ್ರೀಯ ಕಂಪನಿ ಉದ್ಯೋಗಿ ಸಾವು