ಪಾಟ್ನಾ: ಮದುವೆಮನೆಯಲ್ಲಿ ಊಟ ಮಾಡುವಾಗ ರಸಗುಲ್ಲಾ ಸಿಗಲಿಲ್ಲವೆಂದು ವಧುವಿನ ಕುಟುಂಬದ ಮೇಲೆ ಹಲ್ಲೆ ನಡೆಸಿ ಮದುವೆ ನಿಲ್ಲಿಸಿದ ಘಟನೆ ಬಿಹಾರದ ನಂಲದಾ ಜಿಲ್ಲೆಯಲ್ಲಿ ನಡೆದಿದೆ.
ಮೂಲಗಳ ಪ್ರಕಾರ ಹಲ್ಲೆ ನಡೆಸಿದವರು ಶೋಕ್ಪುರ ಜಿಲ್ಲೆಯ ಮಂಡಪ್‍ಸೌನಾ ಗ್ರಾಮದವರಾಗಿದ್ದು, ಮದುವೆಗಾಗಿ ಮಣಿರಾಮ್‍ಗೆ ಬಂದಿದ್ದರು. ಆಗ ವರನ ಕಡೆಯವರು ಊಟ ಮಾಡುವಾಗ ರಸಗುಲ್ಲ ಕೇಳಿದ್ದರು. ಮೊದಲ ಬಾರಿಗೆ ನೀಡಿದ್ದಾಗ ಪುನಃ ಸಿಹಿ ಕೇಳಿದರು. ಆಗ ವಧು ಕಡೆಯವರು ವರದ ಸಂಬಂಧಿಕರಿಗೆ 5ಕ್ಕೂ ಹೆಚ್ಚೂ ಸಿಹಿಯನ್ನು ನೀಡಿದ್ದಾರೆ.
Advertisement
5ಕ್ಕೂ ಹೆಚ್ಚೂ ರಸಗುಲ್ಲ ಪಡೆದ ನಂತರವೂ ಅವರು ಮತ್ತಷ್ಟು ರಸಗುಲ್ಲ ಬೇಕೆಂದು ಕೇಳಿದ್ದರು. ಆಗ ವಧು ಕಡೆಯವರು ರಸಗುಲ್ಲ ನೀಡಲು ನಿರಾಕರಿಸಿದ್ದಾರೆ. ಇದ್ದರಿಂದ ಕೋಪಗೊಂಡ ವರನ ಕಡೆಯವರು ವಧುವಿನ ಸಂಬಂಧಿಕರ ಜೊತೆ ಜಗಳವಾಡಲು ಶುರು ಮಾಡಿದ್ದಾರೆ.
Advertisement
Advertisement
ಇದಾದ ಸ್ವಲ್ಪ ಸಮಯದಲ್ಲೇ ವರನ ಕಡೆಯವರು ಕೈಯಲ್ಲಿ ದೊಣ್ಣೆ ಹಾಗೂ ರಾಡ್ ಹಿಡಿದು ಮದುವೆಮನೆಗೆ ಬಂದಿದ್ದಾರೆ. ಮದುವೆಮನೆಗೆ ಬಂದ ತಕ್ಷಣ ಅವರು ವಧುವಿನ ತಂದೆ, ಸಹೋದರ, ತಾಯಿ, ಸಹೋದರಿ ಹಾಗೂ ಆಕೆಯ ಸ್ನೇಹಿತೆ ಮೇಲೆ ಹಲ್ಲೆ ನಡೆಸಿದ್ದಾರೆ.
Advertisement
ಮದುವೆಮನೆಯಲ್ಲಿ ಯಾರೇ ಎಲ್ಲೇ ಕಂಡರೂ ಅವರ ಮೇಲೆ ಹಲ್ಲೆ ನಡೆಸುತ್ತಿದ್ದರು. ಮಹಿಳೆ ಹಾಗೂ ಮಕ್ಕಳೆಂದು ನೋಡದೇ ಅವರನ್ನು ಥಳಿಸಿದ್ದಾರೆ. ವರನ ಕಡೆಯವರ ಹಲ್ಲೆಯಿಂದ ತಪ್ಪಿಸಿಕೊಂಡು ವಧು ಕಡೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಎಲ್ಲರನ್ನೂ ಶಾಂತಿಗೊಳಿಸಿದ್ದಾರೆ. ಈ ಘಟನೆ ಆದ ಬಳಿಕ ಮದುವೆಯನ್ನು ನಿಲ್ಲಿಸಿ, ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.