ಶ್ರೀನಗರ: ಸದ್ಯದಲ್ಲೇ ನನ್ನ ಸಹೋದರಿಯ ಮದುವೆ ನಿಶ್ಚಯವಾಗಿತ್ತು.. ಅಪ್ಪ ಶುಗರ್ ಕಾಯಿಲೆಯಿಂದ ಬಳಲುತ್ತಿದ್ರು, ಹಾಗಾಗಿ ಅಮ್ಮ ಎಲ್ಲ ಜವಾಬ್ದಾರಿ ನೋಡಿಕೊಳ್ತಿದ್ರು. ಆದ್ರೆ ಪಾಕಿಸ್ತಾನ (Pakistan) ನಡೆಸಿದ ದಾಳಿಯಲ್ಲಿ ಶೆಲ್ ತುಣುಕು ಅಮ್ಮನ ಮುಖ ಸೀಳಿತು. ಆಸ್ಪತ್ರೆಗೆ ಕರೆದುಕೊಂಡು ಹೋದ್ರೂ ಅತಿಯಾದ ರಕ್ತಸ್ರಾವದಿಂದ ನನ್ನಮ್ಮ ಪ್ರಾಣ ಬಿಟ್ಟರು. ಈಗ ಅಮ್ಮನೂ ಇಲ್ಲ.. ಆಶ್ರಯವೂ ಇಲ್ಲದೇ ಅನಾಥವಾಗಿದ್ದೇವೆ….. ಪಾಕಿಸ್ತಾನದ ಶೆಲ್ ದಾಳಿಗೆ ಒಳಗಾದ ಕಾಶ್ಮೀರದ ʻಬಾರಾಮುಲ್ಲಾʼ (Baramulla) ಜನ ʻಪಬ್ಲಿಕ್ ಟಿವಿʼಜೊತೆಗೆ ಹಂಚಿಕೊಂಡ ಕಣ್ಣೀರ ಕಥೆ ಹೀಗಿತ್ತು..
ಜಮ್ಮುವಿನ ಅಂತಾರಾಷ್ಟ್ರೀಯ ಗಡಿಯಲ್ಲಿ (International Boundary) ಭಾರತದ ವಿರುದ್ಧ ಪಾಕಿಸ್ತಾನ (Pakistan) ನಡೆಸಿದ ಶೆಲ್ ದಾಳಿ ಅಮಾಯಕರ ಜೀವವನ್ನೇ ತೆಗೆದಿದೆ. ಇದರಿಂದ ರೋಸಿಹೋಗಿರುವ ಜನ ನಮಗೆ ಯುದ್ಧವೇ ಬೇಡ ಎನ್ನುತ್ತಿದ್ದಾರೆ. 1999ರ ಯುದ್ಧದ ಸಂದರ್ಭಕ್ಕಿಂತಲೂ ಇಂದಿನ ಪರಿಸ್ಥಿತಿ ಕೆಟ್ಟದಾಗಿದೆ. ಯುದ್ಧದಿಂದ ಸಾಧಿಸುವುದಾದರೂ ಏನಿದೆ? ಅಂತ ಪ್ರಶ್ನೆ ಮಾಡಿದ್ದಾರೆ.
ಬಾರಾಮುಲ್ಲಾ ನಿವಾಸಿ ನೈಸರ್ಗಿಬೇಗಂ ಪುತ್ರಿ ಹೇಳಿದ್ದಿಷ್ಟು..
ಗ್ರಾಮದ ಮನೆಯಲ್ಲಿದ್ದ ವೇಳೆ ಕರೆಂಟ್ ಹೋಯಿತು.. ಶೆಲ್ ದಾಳಿಯಾಗಿ ನಮ್ಮ ತಾಯಿ ನಮ್ಮನು ಬಿಟ್ಟು ಹೋದಳು… ನಮಗೆ ಆಶ್ರಯ ಇಲ್ಲದಂತಾಗಿದೆ. ಇದನ್ನೇ ಮಾಡುತ್ತಿದ್ದರೆ ನಮ್ಮನ್ನ ಸುರಕ್ಷಿತವಾಗಿ ಸ್ಥಳಾಂತ ಮಾಡಬೇಕಿತ್ತು. ನಮ್ಮ ಪೋಷಕರನ್ನ ಬಲಿ ಪಡೆದು ಯಾವ ಸಾಧನೆ ಮಾಡಿದ್ದಾರೆ? ಇಲ್ಲಿ ಯಾರೊಬ್ಬರ ತಂದೆ… ತಾಯಿ.. ತಮ್ಮ, ಅಣ್ಣ.. ಅಕ್ಕ ಬಲಿಯಾಗುತ್ತಲೇ ಇದ್ದಾರೆ. ಇನ್ನಷ್ಟು ಜನರ ಜೀವನವೇ ಸರ್ವನಾಶ ಮಾಡುತ್ತಿದ್ದಾರೆ, ಇದನ್ನು ಇಲ್ಲಿಗೆ ನಿಲ್ಲಿಸುವಂತೆ ನಾನು ಮನವಿ ಮಾಡುತ್ತೇನೆ. ಮುಖಕ್ಕೆ ಶೆಲ್ ತುಣುಕು ಅಪ್ಪಳಿಸಿ ನನ್ನ ತಾಯಿ ಸಾವನಪ್ಪಿದ್ದರು. ಪಾಕಿಸ್ತಾನವಾಗಲಿ.. ಭಾರತವಾಗಲಿ ಬೇರೆ ಯಾವುದೇ ದೇಶವಾಗಲಿ ಯುದ್ಧದಿಂದ ಅಮಾಯಕ ಜನರು ಸಾಯುತ್ತಾರೆ. ಸೈನಿಕರು ಸಾಯುತ್ತಾರೆ, ಅವರ ಕುಟುಂಬಗಳು ಅನಾಥವಾಗಿವೆ. ಇದನ್ನೇಲ್ಲಾ ಮಾಡಿ ನಿಮಗೆ ಸಿಗುದಾದರೂ ಏನು? ಮೋದಿಜೀ ಸೇಡಿನಿಂದ ಏನು ಸಿಗುತ್ತೆ ನೀವು ಹೇಳಬೇಕು. ಸೇಡಿನಿಂದ ಇಡೀ ಜಗತ್ತು ಸರ್ವನಾಶವಾಗುತ್ತೆ. ಯಾರಿಗೋ ಏನೋ ಸಿಗುವುದಿಲ್ಲ. ಎಲ್ಲರೂ ಅನಾಥರಾಗುತ್ತಾರೆ. ನನ್ನ ಸಹೋದರಿಯ ಮದುವೆ ಇದ್ದು. ನಮ್ಮ ಆಶ್ರಯವನ್ನೆ ಕಳೆದುಕೊಂಡಿದ್ದೇವೆ, ನಮ್ಮ ತಂದೆ ಕೂಡ ಶುಗರ್ ಕಾಯಿಲೆಂದ ಬಳಲುತ್ತಿದ್ದಾರೆ. ಈಗ ನಾವು ಎಲ್ಲಿಗೆ ಹೋಗಬೇಕು ಎಂದು ಕಣ್ಣೀರಿಟ್ಟಿದ್ದಾರೆ.
ಮೃತ ನೈಸರ್ಗಿಬೇಗಂ ಪತಿ
ಪಾಕಿಸ್ತಾನ ಕಡೆಯಿಂದ ದಾಳಿ ಅಯಿತು. ನಾನು ನನ್ನ ಮಗ ಇನ್ನೂಂದು ಗಾಡಿಯಲ್ಲಿ ಬರುತ್ತಿದ್ದ ವೇಳೆ. ಮನೆಯಿಂದ ಫೋನ್ ಬಂತು. ಎಲ್ಲರೂ ಆಳುತ್ತಿದ್ದರು, ನನ್ನ ಪತ್ನಿಯ ಮುಖಕ್ಕೆ ಶೆಲ್ ತುಣುಕು ಬಿದ್ದು ಮುಖ ಸೀಳಿಕೊಂಡಿತ್ತು, ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅತಿಯಾದ ರಸ್ತಸ್ರಾವದಿಂದ ನನ್ನ ಪತ್ನಿಯ ಸೇಹ ಸಂಪೂರ್ಣ ರಕ್ತದ ಮಡುವಿನಿಂದ ಕೂಡಿತ್ತು. ದಾಳಿಯ ಭಯದಿಂದ ಊರಿನ ಮನೆ ಬಿಟ್ಟು ಬರುವ ವೇಳೆ ಈ ರೀತಿ ಆಯಿತು. ಕೊನೆಗೆ ಆಕೆ ಸಾವನ್ನಪ್ಪಿದಳು ಎಂದು ಹೇಳಿದ್ದಾರೆ.
ಮದುವೆಯಾಗಬೇಕಿದ್ದ ನೈಸರ್ಗಿಬೇಗಂ ಪುತ್ರಿ
ನಾನೂ ಏನೋ ಮಾಡಲು ಅಗುತ್ತೆ. ನಮಗೆ ಮನೆಯಿಂದ ಹೊರಕಳಿಸಿದರು, ಮೊದಲು ನೀವು ಚಿಕ್ಕಮನೆಗೆ ಹೋಗಿ ಅಂತಾ ಇಲ್ಲಿಗೆ ಕಳಿಸಿದರು. ನಾವು ಹೋಗುವುದಿಲ್ಲವೆಂದರು ಒತ್ತಾಯದಿಂದ ಕಳಿಸಿದರು. ನಾನು ಹಿಂದೆ ಬರುತ್ತನೆಂದು ಅಮ್ಮ ಕಳಿಸಿದರು. ಈಗ ನಮ್ಮ ತಾಯಿಯನ್ನ ಕಳೆದುಕೊಂಡು ಅನಾಥರಾಗಿದ್ದೇವೆ. ನಾವು ನೌಶೇರಾಗೆ ಬಂದು ಫೋನ್ ಮಾಡಿದ ಬಳಿಕವೇ ತಾಯಿ ಸಾವಿನ ವಿಷಯ ತಿಳಿಯಿತು ಎಂದು ಅಳಲು ತೋಡಿಕೊಂಡಿದ್ದಾರೆ.