– ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಪುಸ್ತಕ ಸಂತೆ
ಬೀದರ್: ರಾಜ್ಯಮಟ್ಟದ ಬೃಹತ್ ವೀರಲೋಕ ಪುಸ್ತಕ ಸಂತೆಗೆ ದೀಪ ಬೆಳಗಿಸುವ ಮೂಲಕ ಖ್ಯಾತ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ (Baraguru Ramachandrappa) ಚಾಲನೆ ನೀಡಿದರು.
ಬೀದರ್ (Bidar) ನಗರದ ಸಾಯಿ ಸ್ಕೂಲ್ ಮೈದಾನದಲ್ಲಿ ರಾಜ್ಯಮಟ್ಟದ ಪುಸ್ತಕ ಸಂತೆ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ. ಮೊದಲ ಬಾರಿಗೆ ಬೀದರ್‌ನಲ್ಲಿ ಬೃಹತ್ ಪುಸ್ತಕ ಸಂತೆ ಆಯೋಜನೆ ಮಾಡಲಾಗಿದ್ದು, 50 ಲಕ್ಷಕ್ಕೂ ಅಧಿಕ ಪುಸ್ತಕ ಮಳಿಗೆಗಳಿವೆ. ಇದರ ಜೊತೆಗೆ ಸಾಹಿತ್ಯಗೋಷ್ಠಿ, ವಿವಿಧ ಬಗ್ಗೆಯ ಚರ್ಚಾಗೋಷ್ಠಿಗಳು, ಸಂಗೀತ ಕಾರ್ಯಕ್ರಮಗಳು ಆಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ತಲೆಕೊಟ್ಟು ಯುವಕ ಆತ್ಮಹತ್ಯೆ
ಮರಾಠಿ, ತೆಲುಗು, ಉರ್ದು ಸೇರಿದಂತೆ ವಿವಿಧ ಭಾಷೆಗಳ ಪ್ರಭಾವದಿಂದಾಗಿ ಕನ್ನಡಕ್ಕೆ ಕುತ್ತು ಬಂದಿದೆ. ಈ ಹಿನ್ನೆಲೆ ಮೊದಲ ಬಾರಿಗೆ ಕನ್ನಡದ ಪುಸ್ತಕಗಳ ಬೃಹತ್ ಸಂತೆಯನ್ನು ಬೀದರ್‌ನಲ್ಲಿ ಆಯೋಜನೆ ಮಾಡಲಾಗಿದೆ.
ಇದೇ ವೇಳೆ ಲವ್ಲಿ ಸ್ಟಾರ್ ನಟ ಪ್ರೇಮ್ ಮಾತನಾಡಿ, ಗಡಿಭಾಗದಲ್ಲಿ ಕನ್ನಡದ ಪುಸ್ತಕಗಳನ್ನು ಪರಿಚಯಿಸಬೇಕು ಎಂಬ ಉದ್ದೇಶದೊಂದಿಗೆ ಈ ಬೃಹತ್ ವೀರಲೋಕ ಕನ್ನಡ ಪುಸ್ತಕ ಸಂತೆ ನೋಡಿ ಬಹಳ ಖುಷಿಯಾಗಿದೆ. ಕನ್ನಡದ ಲಕ್ಷಾಂತರ ಪುಸ್ತಕಗಳು ಇಲ್ಲಿ ಲಭ್ಯವಿದ್ದು, ಈ ವೀರಲೋಕ ಪುಸ್ತಕ ಸಂತೆಗೆ ಬಂದ ಪ್ರತಿಯೊಬ್ಬರು ಒಂದಾದ್ರು ಕನ್ನಡ ಪುಸ್ತಕಗಳನ್ನು ಖರೀದಿ ಮಾಡಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳು, ವಿವಿಧ ಸ್ವಾಮಿಗಳು, ಸಚಿವ ರಹೀಂಖಾನ್, ಶಾಸಕ ಶೈಲೇಂದ್ರ ಬೆಲ್ದಾಳೆ, ಶಾಲಾ-ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ.ಇದನ್ನೂ ಓದಿ: ಸಾಲು ಸಾಲು ರಜೆ – ಊರಿನತ್ತ ಜನರ ದಂಡು; ನೆಲಮಂಗಲ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್

