ಚಿಕಾಗೋ: ಟ್ರಂಪ್‌ರವರು ( Donald Trump) ದೇಶಕ್ಕೆ ‘ಅಪಾಯ’ ಎಂದು ಡೆಮೊಕ್ರಾಟಿಕ್ (Democratic) ನ್ಯಾಶನಲ್ ಕನ್ವೆನ್ಷನ್ ಭಾಷಣದಲ್ಲಿ ಮಾಜಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ (Barack Obama) ಹೇಳಿದರು.
ಚಿಕಾಗೋ ಸಮಾವೇಶದಲ್ಲಿ ಮಾತನಾಡಿದ ಅವರು, ಟ್ರಂಪ್ ಅಧಿಕಾರವನ್ನು ಒಂದು ಸಾಧನವಾಗಿ ನೋಡುತ್ತಾರೆ. ನಾವು ಆ ಚಲನಚಿತ್ರವನ್ನು ಮೊದಲೇ ನೋಡಿದ್ದೇವೆ. ಟ್ರಂಪ್ ಅವರು ಹ್ಯಾರಿಸ್ (Kamala Harris) ವಿರುದ್ಧ ಸೋಲುವ ಭಯದಲ್ಲಿರುತ್ತಾರೆ ಮತ್ತು ಅವರು ಪಿತೂರಿಯ ಸಿದ್ಧಾಂತವನ್ನು ಹರಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ವಿಜಯೇಂದ್ರ ಟಿಕೆಟ್ ಕೊಡಿಸುವ ಮಾತು ಕೊಟ್ಟಿದ್ದಾರೆ, ನನ್ನ ಸ್ಪರ್ಧೆ ಖಚಿತ: ಸಿ.ಪಿ ಯೋಗೇಶ್ವರ್
ಕಮಲಾ ಹ್ಯಾರಿಸ್ ದೇಶಕ್ಕಾಗಿ ಹೋರಾಡುತ್ತಾರೆ, ಹ್ಯಾರಿಸ್ ದೇಶದ ಬಗ್ಗೆ ಚಿಂತಿಸುತ್ತಾರೆ ಎಂದರು. ಇದನ್ನೂ ಓದಿ: ದಾಖಲಾತಿ ತಿದ್ದುವ ಪರಿಸ್ಥಿತಿ ನಮಗೆ ಬಂದಿಲ್ಲ, ಸಿಎಂ ಪತ್ನಿ ಅವರ ಪತ್ರ ತಿದ್ದುಪಡಿ ಆಗಿಲ್ಲ: ಬೈರತಿ ಸುರೇಶ
ಮಾಜಿ ಅಧ್ಯಕ್ಷರನ್ನು ಉಲ್ಲೇಖಿಸಿ, 78 ವರ್ಷದ ಬಿಲಿಯನೇರ್ ಒಂಬತ್ತು ವರ್ಷಗಳ ಹಿಂದೆ ತನ್ನ “ಗೋಲ್ಡನ್ ಎಸ್ಕಲೇಟರ್” ಕೆಳಗೆ ಸವಾರಿ ಮಾಡಿದಾಗಿನಿಂದ ತನ್ನ ಸಮಸ್ಯೆಗಳ ಬಗ್ಗೆ ಕೊರಗುವುದನ್ನು ನಿಲ್ಲಿಸಲಿಲ್ಲ. ಟ್ರಂಪ್ ತಮ್ಮನ್ನು ನೆರೆಹೊರೆಯವರೊಂದಿಗೆ ಹೋಲಿಸಿಕೊಳ್ಳುವುದನ್ನು ನಾನು ಹಿಂದೊಮ್ಮೆ ಕೇಳಿದ್ದೆ ಎಂದು ಒಬಾಮಾ ಹೇಳಿದರು. . ಇದನ್ನೂ ಓದಿ: Karnataka Rain Alert | ಮುಂದಿನ 6 ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯ ಮನ್ಸೂಚನೆ
ಟ್ರಂಪ್ ಅವರ 4 ವರ್ಷ ಅವ್ಯವಸ್ಥೆಯನ್ನು ನಾವು ನೋಡಿದ್ದೇವೆ. ಮತ್ತೆ ನಮಗೆ ನಾಲ್ಕು ವರ್ಷಗಳ ಅವ್ಯವಸ್ಥೆಯ ಅಗತ್ಯವಿಲ್ಲ ಎಂದು ಒಬಾಮಾ ನುಡಿದರು. ಇದನ್ನೂ ಓದಿ: Karnataka Rain Alert | ಮುಂದಿನ 6 ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯ ಮನ್ಸೂಚನೆ