InternationalLatestMain Post

ಅಮೆರಿಕದ ಬಾರ್‌ ಬಳಿ ದುಷ್ಕರ್ಮಿಗಳಿಂದ ಗುಂಡಿನ ದಾಳಿ -12 ಮಂದಿಗೆ ಗಾಯ

ವಾಷಿಂಗ್ಟನ್: ಬಾರ್‌ನ (Bar) ಹೊರಗೆ ದುಷ್ಕರ್ಮಿಗಳು ಹಾರಿಸಿದ ಗುಂಡಿಗೆ 12 ಜನರು ಗಾಯಗೊಂಡಿರುವ ಘಟನೆ ಅಮೆರಿಕದ (America) ಫಿಲಿಡೆಲ್ಫಿಯಾದಲ್ಲಿ ನಡೆದಿದೆ.

ಕಪ್ಪು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಬಾರ್ ಹೊರಗಿದ್ದ ಜನರ (People) ಮೇಲೆ ಏಕಾಕಿ ಗುಂಡಿ ಹಾರಿಸಿದ್ದಾರೆ. ಈ ವೇಳೆ 12 ಮಂದಿಗೆ ಗಾಯವಾಗಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದು, ಈ ಕೃತ್ಯದಲ್ಲಿ ಅನೇಕರು ಭಾಗಿಯಾಗಿದ್ದು, 40 ಗುಂಡುಗಳನ್ನು ಹಾರಿಸಲಾಗಿದೆ ಎಂದು ಶಂಕಿಸಿದ್ದಾರೆ. ಇದನ್ನೂ ಓದಿ: ತಾಯಿಯನ್ನು ನಿಂದಿಸಿದ್ದಕ್ಕೆ ಜೈಲಿನಿಂದ ಬಂದ ಸ್ನೇಹಿತರಿಂದ್ಲೇ ಯುವಕ ಕೊಲೆಯಾದ

ಸದ್ಯ ಗಾಯಾಳುಗಳು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐವರ ಸ್ಥಿತಿ ಚಿಂತಾಜನಕವಾಗಿದ್ದು, 7 ಜನರ ಸ್ಥಿತಿ ಸ್ಥಿರವಾಗಿದೆ ಎಂದು ವರದಿ ತಿಳಿಸಿದೆ. ಗುಂಡಿನ ದಾಳಿಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದನ್ನೂ ಓದಿ: ಪಕ್ಷ ಬಿಡ್ತಾರಾ ರಮೇಶ್ ಜಾರಕಿಹೊಳಿ? – ಸಿದ್ದಾಂತ ಒಪ್ಪಿ ಬಂದ್ರೆ ಸ್ವಾಗತ ಅಂದ್ರು ಕೈ ಮುಖಂಡ

Live Tv

Leave a Reply

Your email address will not be published. Required fields are marked *

Back to top button