ತುಮಕೂರು: ಇಡೀ ದೇಶವೇ ಲಾಕ್‍ಡೌನ್ ಆಗಿ 8 ದಿನಗಳು ಕಳೆಯುತ್ತಾ ಬರುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಬಾರ್ ಮಾಲೀಕರು ರಾತ್ರಿ ವೇಳೆ ಬಾರ್‌ನ ಮೂಲಕ ಮದ್ಯ ವಿತರಣೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಜಿಲ್ಲೆಯ ತಿಮ್ಮಣ್ಣ ಗ್ರಾಮದಲ್ಲಿ ಬಾರ್ ಮಾಲೀಕನ ಜೊತೆ ಅಧಿಕಾರಿಗಳು ಕೈಜೋಡಿಸಿದ್ದಾರೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬಾರ್ ಮುಂದೆ ಜಯಾಯಿಸಿದ ಗ್ರಾಮಸ್ಥರು ಬಾರ್ ಬಾಗಿಲಿಗೆ ಸೀಲ್ ಹಾಕಿದನ್ನ ವ್ಯಂಗ್ಯ ಮಾಡಿದ್ದಾರೆ. ರಾತ್ರಿ ವೇಳೆ ಸೀಲ್ ಓಪನ್ ಮಾಡಿ ದುಪ್ಪಟ್ಟು ದರದಲ್ಲಿ ಮದ್ಯ ಮಾರಾಟ ವಿಷಯ ತಿಳಿದ ಗ್ರಾಮಸ್ಥರು ಸೀಲ್ ಮಾಡಿರುವ ಅಂಗಡಿಯ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ.
Advertisement
Advertisement
ಸೀಲ್ ಹಾಕಿರುವ ರೀತಿ ನಾಟಕ ಮಾಡಿ ಅಧಿಕಾರಿಗಳು ಕೀ ಓಪನ್ ಮಾಡುವ ಜಾಗದಲ್ಲಿ ಸೀಲ್ ಹಾಕದೇ ಬಿಟ್ಟಿರೋದು ಸ್ಪಷ್ಟವಾಗಿ ಕಾಣುತ್ತಿದೆ. ಪ್ರತಿ ರಾತ್ರಿ ಬಾರ್ ಓಪನ್ ಮಾಡಿ ದುಪ್ಪಟ್ಟು ದರದಲ್ಲಿ ಮಾರಾಟ ಮಾಡುತ್ತಿರುವ ಹನುಮಾನ್ ಬಾರ್‌ನ ವಿರುದ್ಧ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
Advertisement
ಅಲ್ಲದೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರ ತಿಳಿದ ಅಬಕಾರಿ ಹಾಗೂ ಪೊಲೀಸ್ ಸ್ಥಳಕ್ಕೆ ಭೇಟಿ ನೀಡಿ ಮತ್ತೊಮ್ಮೆ ಸೀಲ್ ಹಾಕಿದ್ದಾರೆ ಎನ್ನಲಾಗಿದೆ.