ಗದಗ : ಧಾರ್ಮಿಕ ಕೇಂದ್ರಗಳ ಸುತ್ತಮುತ್ತಲಿನ ಬಾರ್ ಮತ್ತು ರೆಸ್ಟೋರೆಂಟ್ ಗಳನ್ನ ತೆರವುಗೊಳಿಸುವಂತೆ ತೋಂಟದಾರ್ಯ ಶ್ರೀಗಳ ನೇತೃತ್ವದಲ್ಲಿ ಜಾಥಾ ನಡೆಸಲಾಗಿದೆ.
ಮಠದ ಆವರಣದಿಂದ ಆರಂಭವಾದ ಜಾತ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆಯಿತು. ಜಾಥಾ ವೇಳೆ ಮಾತನಾಡಿದ ಶ್ರೀಗಳು ಮಠ ಹಾಗೂ ಧಾರ್ಮಿಕ ಕೇಂದ್ರಗಳ ಸುತ್ತ-ಮುತ್ತ ಬಾರ್ ಮತ್ತು ರೆಸ್ಟೋರೆಂಟ್ ಗಳನ್ನ ತೆರವುಗೊಳಿಸುವಂತೆ ಆಗ್ರಹಿಸಿದರು.
Advertisement
ತೋಂಟದಾರ್ಯ ಮಠದ ಡಾ. ಸಿದ್ದಲಿಂಗ ಮಹಾಸ್ವಾಮಿಗಳ ಜಾಥಾ ನೇತೃತ್ವ ವಹಿಸಿದ್ದರು. ಈ ವೇಳೆ “ಬಾರ್ ಹಠಾವ್, ಮಠ ಬಚಾವ್” ಎಂಬ ಪ್ರತಿಭಟನೆ ಘೋಷಣೆಯನ್ನು ಮಾಡಲಾಯಿತು. ಜಾಥಾ ಮೆರವಣಿಗೆಯಲ್ಲಿ ನಗರದ ತಿರಂಗಾ ಯುವಮೋರ್ಚಾ ಘಟಕ ಕಾರ್ಯಕರ್ತರು ಸೇರಿದಂತೆ ಹಲವು ಭಾಗವಹಿಸಿದ್ದರು.
Advertisement
Advertisement
ತೋಂಟದಾರ್ಯ ಮಠದ ಸುತ್ತ-ಮುತ್ತ ಸುಮಾರು 6 ಮದ್ಯದ ಅಂಗಡಿಗಳಿದ್ದು ಮಠಕ್ಕೆ ಬರುವ ಭಕ್ತರಿಗೆ, ಮಹಿಳೆಯರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಪತ್ರಿಭಟನಾಕಾರರು, ಮದ್ಯವೆಸನಿಗಳ ವರ್ತನೆಗೆ ಬೇಸತ್ತು ಸ್ವಾಮಿಜಿಗಳು, ಸಂಘಟಿಕರು, ಸಾರ್ವಜನಿಕರರು, ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
Advertisement
ಮಠದ ಸುತ್ತಲಿನ ಸುಮಾರು 200 ಮೀಟರ್ ಒಳಗಿರುವ ಮದ್ಯದ ಅಂಗಡಿಗಳನ್ನ ಸ್ಥಳಾಂತರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮದ್ಯ ವ್ಯಾಪಾರಿಗಳು ಹಾಗೂ ಅಧಿಕಾರಿಗಳ ಒಳ ಒಪ್ಪಂದಿಂದ ಬಾರ್ ತೆರವಿಗೆ ಮುಂದಾಗುತ್ತಿಲ್ಲ ಎಂಬ ಗಂಭೀರ ಆರೋಪವನ್ನು ತೋಂಟದ ಶ್ರೀಗಳು ಮಾಡಿದ್ದಾರೆ.