ಎಣ್ಣೆ ಹೊಡಿಯೋ ವಿಚಾರಕ್ಕೆ ಗಲಾಟೆ- ಬಾರ್ ಕ್ಯಾಶಿಯರ್ ಹತ್ಯೆ

Public TV
1 Min Read
CASHIER

ಶಿವಮೊಗ್ಗ: ಮದ್ಯ (Alcohol) ಸೇವಿಸುವ ವಿಷಯಕ್ಕೆ ಬಾರ್ (Bar) ನಲ್ಲಿ ಗಲಾಟೆ ನಡೆದಿದ್ದು, ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಸಚಿನ್ (27) ಕೊಲೆಯಾದ ಯುವಕನಾಗಿದ್ದು, ಈತ ಬಾರ್ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದನು. ಶಿವಮೊಗ್ಗ (Shivamogga) ತಾಲೂಕಿನ ಆಯನೂರಿನ ನವರತ್ನ ಬಾರ್ ನಲ್ಲಿ ಈ ಗಲಾಟೆ ನಡೆದಿದೆ. ನಿರಂಜನ, ಸತೀಶ್ ಹಾಗೂ ಅಶೋಕ್ ನಾಯ್ಕ್ ಕೊಲೆ ಮಾಡಿದ ಆರೋಪಿಗಳು.

ಈ ಹಿಂದೆ ಹಣ ನೀಡದೇ ಮದ್ಯ ಖರೀದಿಸಿದ್ದ ಆರೋಪಿಗಳು. ಹೀಗಾಗಿ ಬಾರ್ ಬಳಿ ಬಂದಾಗ ಕ್ಯಾಶಿಯರ್ (Bar Cashier)  ಹಣ ಕೇಳಿದ್ದಾರೆ. ಎಲ್ಲಾ ಜನರ ಎದುರು ಹಣ ಕೇಳುತ್ತೀಯಾ ಅಂತಾ ಗಲಾಟೆ ಮಾಡಿದ್ದರು. ಬಳಿಕ ಮೂವರು ಆರೋಪಿಗಳು ಭಾನುವಾರ ರಾತ್ರಿ 10 ಗಂಟೆಗೆ ಬಾರ್ ಗೆ ಕುಡಿಯಲು ಬಂದಿದ್ದರು.

Alcoholic Drink copy

ರಾತ್ರಿ 11.30 ಆದರೂ ಆರೋಪಿಗಳು ಮದ್ಯ ಸೇವಿಸುತ್ತಲೇ ಇದ್ದರು. ಈ ವೇಳೆ ಸಚಿನ್, 11.30 ಆಯ್ತು ಬಂದ್ ಮಾಡ್ತೇವೆ ಹೊರಡಿ ಎಮದು ಹೇಳಿದ್ದಾರೆ. ಆಗ ನಮ್ದು ಇನ್ನು ಕುಡಿದು ಮುಗಿದಿಲ್ಲ, ನಾವು ಹೋಗಲ್ಲ ಏನ್ ಮಾಡ್ತೀಯಾ ಅಂತಾ ಗಲಾಟೆ ಮಾಡಿದ್ದಾರೆ. ಜಗಳ ತಾರಕಕ್ಕೇರಿ ಸಚಿನ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಕೂಡಲೇ ಗಾಯಾಳುವನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಬೇರೆಡೆ ಶಿಫ್ಟ್ ಮಾಡುವಾಗಲೇ ಸಚಿನ್ ಮೃತಟ್ಟಿದ್ದಾರೆ.

ಘಟನೆ ಕುರಿತು ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಡ್ರಮ್‌ನಲ್ಲಿ ಕೂಡಿ ಹಾಕಿ 4 ಮಕ್ಕಳ ಕೊಂದ ತಾಯಿ – ಬಳಿಕ ತಾನೂ ನೇಣಿಗೆ ಶರಣು

Share This Article