ಬೆಂಗಳೂರು: ಇನ್ನು ಮುಂದೆ ಎಣ್ಣೆ ಹೊಡೆಯೋದಕ್ಕೆ ಬಾರ್ ಗೆ ಹೋಗಬೇಕಿಲ್ಲ. ಯಾಕೆಂದರೆ ಮೊಬೈಲ್ ಆನ್ ಮಾಡಿ ಯಾವ ಎಣ್ಣೆ ಬೇಕು, ಎಷ್ಟು ಬೇಕು ಅಂತ ಬುಕ್ ಮಾಡಿದರೆ ಕೆಲವೇ ನಿಮಿಷಗಳಲ್ಲಿ ಎಣ್ಣೆಯ ಪೆಟ್ಟಿಗೆ ಮನೆ ಬಾಗಿಲಲ್ಲಿ ಇರುತ್ತದೆ.
ಆನ್‍ಲೈನ್‍ನಲ್ಲೇ ಫುಡ್ ಆರ್ಡರ್ ಮಾಡಿ ಹೋಂ ಡೆಲಿವರಿ ಮಾಡುವ ಸ್ವಿಗ್ಗಿ, ಜೋಮೋಟೋ ರೀತಿಯಲ್ಲೇ ಕರ್ನಾಟಕದಲ್ಲಿ ಆನ್‍ಲೈನ್‍ನಲ್ಲೇ ಎಣ್ಣೆ ಆರ್ಡರ್ ಮತ್ತು ಹೋಂ ಡೆಲಿವರಿ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ.
Advertisement
Advertisement
`ಆನ್‍ಲೈನ್‍ನಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಕೊಡಬೇಕು ಅನ್ನೋ ಪ್ರಸ್ತಾವನೆ ಬಂದಿದೆ. ಈ ಬಗ್ಗೆ ನಾವು ಅಬಕಾರಿ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಜೊತೆಗೆ ಇನ್ನಷ್ಟೇ ಚರ್ಚೆ ಮಾಡಬೇಕಿದೆ ಎಂದು ಹಣಕಾಸು ಇಲಾಖೆ ಅಧಿಕಾರಿಯೊಬ್ಬರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
Advertisement
ಆನ್‍ಲೈನ್ ಮದ್ಯ ಮಾರಾಟ ಅವಕಾಶ ಕೊಡಬೇಕು ಅನ್ನೋದಕ್ಕೆ ಕೊಡುತ್ತಿರುವ ಕಾರಣಗಳು ಹೀಗಿವೆ:
ವರ್ಷದಿಂದ ವರ್ಷಕ್ಕೆ ಬೆಂಗಳೂರಲ್ಲಿ ಕುಡಿದು ವಾಹನ ಚಲಾಯಿಸುವ ಕೇಸ್‍ಗಳು ಹೆಚ್ಚಾಗುತ್ತಿವೆ. ಇದೇ ವರ್ಷದ ಸೆಪ್ಟೆಂಬರ್ ವರೆಗೆ ಬರೋಬ್ಬರಿ 33,234 ಕೇಸ್‍ಗಳು ದಾಖಲಾಗಿದ್ದು, ಅಪಘಾತದಲ್ಲಿ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಲಿಕ್ಕರ್ ಹೋಂ ಡೆಲಿವರಿ ಆದರೆ ಆಗ ಡ್ರಂಕ್ ಅಂಡ್ ಡ್ರೈವ್ ಕೇಸ್‍ಗೆ ಬ್ರೇಕ್ ಬೀಳುತ್ತದೆ. ಅಪಘಾತಗಳು ಕೂಡ ಕಡಿಮೆಯಾಗುತ್ತವೆ ಅನ್ನೋ ವಾದವಿದೆ.
Advertisement
ಆನ್‍ಲೈನ್ ಮಾರಾಟದಿಂದ ಮದ್ಯ ಮಾರಾಟ ಹೆಚ್ಚಳವಾಗಿ ಸರ್ಕಾರದ ಬೊಕ್ಕಸಕ್ಕೆ 1500 ರಿಂದ 2,000 ಕೋಟಿ ರೂಪಾಯಿವರೆಗೆ ಹೆಚ್ಚುವರಿ ಆದಾಯ ಬರುವ ಸಾಧ್ಯತೆನೂ ಇದೆ. ಡಿಸ್ಕೌಂಟ್ ರೇಟ್ ಮತ್ತು ಕ್ಯಾಶ್ ಬ್ಯಾಕ್ ಆಫರ್ ಗಳಿಂದ ಗ್ರಾಹಕರಿಗೂ ಕಡಿಮೆ ದುಡ್ಡಿಗೆ ಮದ್ಯ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಅಬಕಾರಿ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಎರಡು ಸುತ್ತಿನ ಚರ್ಚೆಯನ್ನೂ ನಡೆಸಿದ್ದು, ಇನ್ನೊಂದು ಸುತ್ತಿನ ಸಮಾಲೋಚನೆ ಬಾಕಿ ಇದೆ. ಬಳಿಕ ಆ ಪ್ರಸ್ತಾಪನೆಯನ್ನು ಸಿಎಂ ಕುಮಾರಸ್ವಾಮಿ ಮುಂದೆ ಇಡಲಾಗುತ್ತದೆ. ಇದೇ ರೀತಿ ಲಿಕ್ಕರ್ ಹೋಂ ಡೆಲಿವರಿಗೆ ಮುಂದಾಗಿದ್ದ ಮಹಾರಾಷ್ಟ್ರ ಸರ್ಕಾರ ಕಡೆಯ ಕ್ಷಣದಲ್ಲಿ ಹಿಂದೆ ಸರಿದಿತ್ತು. ನಮ್ಮ ರಾಜ್ಯದಲ್ಲಿ ಏನಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv