ನ್ಯೂಯಾರ್ಕ್: ಮೆಲ್ವಿಲ್ಲೆಯಲ್ಲಿರುವ (Melville) ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನವನ್ನು (BAPS Swaminayaran Temple) ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ (Indian Consulate General) ಅಮೆರಿಕಾದ ಕಾನೂನು ಅಧಿಕಾರಗಳ ಮುಂದೆ ವಿಷಯವನ್ನು ಪ್ರಸ್ತಾಪಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದೆ.ಇದನ್ನೂ ಓದಿ: ಉಡುಪಿ: ಇನ್ನೊಬ್ಬರ ಜೀವ ಉಳಿಸಲು ಹೋಗಿ ತನ್ನ ಪ್ರಾಣವನ್ನೇ ತೆತ್ತ ಶಿಕ್ಷಕಿ ಅರ್ಚನಾ ಕಾಮತ್
Advertisement
ಮೆಲ್ವಿಲ್ಲೆಯಲ್ಲಿರುವ ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನ ಧ್ವಂಸಗೊಳಿಸಿರುವ ಸಂಬಂಧ ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಖಂಡಿಸಿದ್ದು, ಇದು ಸ್ವೀಕಾರವಲ್ಲ ಹಾಗೂ ಅಮೆರಿಕಾದ ಕಾನೂನು ಅಧಿಕಾರಿಗಳು ಹೇಯ ಕೃತ್ಯ ಎಸಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
Advertisement
The vandalism of the BAPS Swaminarayan Temple in Melville, New York, is unacceptable ; The Consulate @IndiainNewYork is in touch with the community and has raised the matter with U.S. law enforcement authorities for prompt action against the perpetrators of this heinous act.…
— India in New York (@IndiainNewYork) September 16, 2024
Advertisement
ಅಮೆರಿಕಾದ ಹಿಂದೂ ಸಂಸ್ಥೆಯು (Hindu American Foudation) ಬಿಎಪಿಎಸ್, ಹಿಂದೂ ದೇವಾಲಯದ ಧ್ವಂಸಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಅಮೆರಿಕಾದ ನ್ಯಾಯ ಇಲಾಖೆಗೆ ತಿಳಿಸಿದೆ.
Advertisement
ಕ್ಯಾಲಿಫೋನಿರ್ಯಾ ಹಾಗೂ ಕೆನಡಾದ ದೇವಸ್ಥಾನಗಳ ಮೇಲೆ ಆದ ದಾಳಿ ಬಳಿಕ, ಅದೇ ರೀತಿಯಲ್ಲಿ ನ್ಯೂಯಾರ್ಕ್ ದೇವಸ್ಥಾನದ ಧ್ವಂಸ ನಡೆದಿದೆ ಎಂದು ಅಮೆರಿಕಾದ ಹಿಂದೂ ಸಂಸ್ಥೆಯು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದೆ.ಇದನ್ನೂ ಓದಿ: ಲೇಡಿ ಸೂಪರ್ ಸ್ಟಾರ್‌ಗೆ ತಮಿಳು ಡೈರೆಕ್ಟರ್ ಸುಂದರ್ ಸಿ. ಆ್ಯಕ್ಷನ್ ಕಟ್