ಮಂಗಳೂರು: ಬಂಟ್ವಾಳದ (Bantwal) ಅಬ್ದುಲ್ ರಹಿಮಾನ್ (Abdul Rahiman) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘಟಿತ ಅಪರಾಧ ತಡೆ ಕಾಯ್ದೆಯಡಿ (KCOCA Act) 13 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ದೀಪಕ್, ಚಿಂತನ್, ಪ್ರಥ್ವಿರಾಜ್ ಜೋಗಿ, ಸುಮಿತ್ ಬಿ.ಆಚಾರ್ಯ, ವಿ.ರವಿರಾಜ ಮೂಲ್ಯ, ಅಭಿನ್ ರೈ, ತೇಜಾಕ್ಷ, ರವಿಸಂಜಯ್ ಜಿ.ಎಸ್, ಶಿವಪ್ರಸಾದ್ ತುಂಬೆ, ಪ್ರದೀಪ ಶಾಹಿತ್ @ ಸಾಹಿತ್, ಸಚಿನ್ @ ಸಚ್ಚು ರೊಟ್ಟಿಗುಡ್ಡೆ, ರಂಜಿತ್ ಬಂಧಿತ ಆರೋಪಿಗಳು. ಇದನ್ನೂ ಓದಿ: ಸಿದ್ದರಾಮಯ್ಯ ಆಗಮನ ಹಿನ್ನೆಲೆ ಕೇಸರಿ ಧ್ವಜ ತೆರವಿಗೆ ಪೊಲೀಸರು ಸೂಚನೆ; ದಿಢೀರ್ ಪ್ರತಿಭಟನೆ
ಅರೋಪಿಗಳನ್ನು ಬಂಧಿಸಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹಿಂದೂಪರ ಸಂಘಟನೆ ಮುಖಂಡ ಭರತ್ ಕುಮ್ಡೇಲು ವಿರುದ್ಧವೂ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಬಂಧನ ಭೀತಿ ಹಿನ್ನೆಲೆ ಭರತ್ ತಲೆಮರೆಸಿಕೊಂಡಿದ್ದಾರೆ.
ಹಲವು ವರ್ಷಗಳಿಂದ ಕೊಲೆ, ಕೊಲೆ ಯತ್ನ, ಪ್ರಚೋದನಕಾರಿ ಭಾಷಣಗಳು, ಕಾನೂನುಬಾಹಿರ ಚಟುವಟಿಕೆ, ಸಮಾಜದಲ್ಲಿ ಅಶಾಂತಿ ಮತ್ತು ಕೋಮು ಸಂಘರ್ಷಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿರೊ ಇಸ್ರೇಲ್ ರಾಯಭಾರ ಕಚೇರಿ, ಹೈಕೋರ್ಟ್‌ಗೆ RDX ಇಟ್ಟಿರೋದಾಗಿ ಇ-ಮೇಲ್ ಬೆದರಿಕೆ