ಉಡುಪಿ: ಭೂಗತ ಪಾತಕಿ ಬನ್ನಂಜೆ ರಾಜಾ ಪೆರೋಲ್ ಮೇಲೆ ಹೊರಬರಲಿದ್ದಾನೆ. ಬೆಳಗಾವಿಯ ಹಿಂಡಲಗಾ ಜೈಲಲ್ಲಿರುವ ಬನ್ನಂಜೆ ರಾಜ ಉಡುಪಿಗೆ ಬರಲಿದ್ದಾನೆ.
ಜುಲೈ 8 ರಂದು ಆತ ಉಡುಪಿಗೆ ಬರಲು ನ್ಯಾಯಾಲಯದ ಮುಂದೆ ಅನುಮತಿ ಕೋರಿದ್ದಾನೆ. ಆತನಿಗೆ ನ್ಯಾಯಾಧೀಶರಿಂದ ವಿಶೇಷ ಅನುಮತಿಯೂ ಸಿಕ್ಕಿದೆ ಎಂದು ತಿಳಿದು ಬಂದಿದೆ. ಬನ್ನಂಜೆ ರಾಜ ಅನಾರೋಗ್ಯ ಪೀಡಿತ ತನ್ನ ತಾಯಿಯನ್ನು ನೋಡಲು ಆಗಮಿಸಲಿದ್ದಾನೆ.
ಬನ್ನಂಜೆ ರಾಜಾ ಮೊರಾಕ್ಕೋದಲ್ಲಿ 2015ರಲ್ಲಿ ಬಂಧನಕ್ಕೊಳಗಾಗಿದ್ದನು. ಇದೀಗ ಈತನ ಭೇಟಿ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳುವ ಸಾಧ್ಯತೆಯಿದೆ. ಶೂಟೌಟ್ , ದರೋಡೆ , ಕೊಲೆ ಪ್ರಕರಣ ಸಹಿತ 16 ಕ್ರಿಮಿನಲ್ ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ.
ಬನ್ನಂಜೆ ರಾಜನ ಮೇಲೆ 45 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ಉಡುಪಿ ಭೇಟಿ ಸಂದರ್ಭ ಬನ್ನಂಜೆಯ ಸಹಚರರು ಆಗಮಿಸುವ ಸಾಧ್ಯತೆಯಿದೆ.