ಬೆಂಗಳೂರು: ಬ್ಯಾಂಕ್ ಗ್ರಾಹಕರೇ ಎಚ್ಚರ. ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ) ಪ್ರತಿಭಟನೆ ಹಾಗೂ ಸಾಲು ಸಾಲಾಗಿ ಬಂದ ರಜೆಯಿಂದಾಗಿ ದೇಶಾದ್ಯಂತ ಡಿಸೆಂಬರ್ 21ರಿಂದ ಐದು ದಿನಗಳ ಕಾಲ ಬ್ಯಾಂಕ್‍ಗಳು ಕಾರ್ಯನಿರ್ವಹಿಸುವುದಿಲ್ಲ.
ವೇತನ ಪರಿಷ್ಕರಣೆ ಬೇಡಿಕೆ ಮುಂದಿಟ್ಟುಕೊಂಡು ಎಐಬಿಒಸಿ ಪ್ರತಿಭಟನೆ ಡಿಸೆಂಬರ್ 21ರಂದು ಮುಷ್ಕರಕ್ಕೆ ಕರೆ ನೀಡಿದೆ. ನಂತರದ ದಿನ (ಡಿಸೆಂಬರ್ 22) ನಾಲ್ಕನೇ ಶನಿವಾರದ ರಜೆ ಹಾಗೂ ಡಿಸೆಂಬರ್ 23 ಭಾನುವಾರದ ರಜೆ. ಮಂಗಳವಾರ ಕ್ರಿಸ್ಮಸ್ ಪ್ರಯುಕ್ತ ರಜೆ ಇರುತ್ತದೆ. ಹೀಗಾಗಿ ಸಾಲು ಸಾಲು ರಜೆಗಳು ಬರುವುದರಿಂದ ಗ್ರಾಹಕರು ಆದಷ್ಟು ಬೇಗ ನಿಮ್ಮ ಬ್ಯಾಂಕ್ ಕೆಲಸಗಳನ್ನು ಮುಗಿಸಿಕೊಳ್ಳಿ.
Advertisement
Advertisement
ದೇನಾ, ವಿಜಯ ಮತ್ತು ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‍ಗಳ ವಿಲೀನ ವಿರೋಧಿಸಿ ಅಖಿಲ ಭಾರತ ಬ್ಯಾಂಕ್ ಸಿಬ್ಬಂದಿ ಒಕ್ಕೂಟ (ಎಐಬಿಇಒ) ಡಿಸೆಂಬರ್ 26ರಂದು ಮುಷ್ಕರ ನಡೆಸಲಿದೆ. ಹೀಗಾಗಿ ಡಿಸೆಂಬರ್ 24 (ಸೋಮವಾರ) ಹೊರತುಪಡಿಸಿದರೆ ಒಟ್ಟಾರೆ ಐದು ದಿನ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುವುದಿಲ್ಲ. ಸಾಲು ರಜೆ ಇರುವುದರಿಂದ ಕೆಲವು ಸಿಬ್ಬಂದಿ ಡಿಸೆಂಬರ್ 24ರಂದು ಕೂಡಾ ರಜೆ ಪಡೆಯುವ ಸಾಧ್ಯಗಳಿದ್ದು, ಬ್ಯಾಂಕ್ ವಹಿವಾಟು ನಡೆಯುವ ಸಾಧ್ಯತೆ ವಿರಳ ಎನ್ನಲಾಗುತ್ತಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv