ನವದೆಹಲಿ: ಕೊರೊನಾ ಹೊಡೆತದಿಂದ ದೇಶದಲ್ಲಿ ವಾಣಿಜ್ಯ ವಹಿವಾಟುಗಳ ಮೇಲೆ ಪರಿಣಾಮ ಬೀರಿದ್ದು, ಉದ್ಯಮಿಗಳು, ವ್ಯಾಪಾರಿಗಳ ನೆರವಿಗೆ ಬ್ಯಾಂಕ್‍ಗಳು ಧಾವಿಸಿವೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‍ಗಳು ವಿಶೇಷ ತುರ್ತು ಸಾಲ ಸೌಲಭ್ಯ ಘೋಷಿಸಿವೆ.
ಎಸ್‍ಬಿಐ, ಇಂಡಿಯನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಯುಕೋ ಬ್ಯಾಂಕ್, ಇಂಡಿಯನ್ ಓವರ್‍ಸೀಸ್ ಬ್ಯಾಂಕ್‍ಗಳು ತುರ್ತು ಸಾಲ ಘೋಷಿಸಿವೆ. ಉದ್ದಿಮೆಗಳಿಗೆ ಶೇ.10ರವರೆಗೂ ಹೆಚ್ಚುವರಿ ಸಾಲ ಸೌಲಭ್ಯ ಸಿಗಲಿದೆ.
Advertisement
Advertisement
ಮೊದಲು ಆರು ತಿಂಗಳು ಸಾಲದ ಕಂತು ಪಾವತಿ ಮಾಡುವ ಹಾಗಿಲ್ಲ. 36 ತಿಂಗಳ ಅವಧಿಯಲ್ಲಿ ಸಾಲ ಮರುಪಾವತಿ ಮಾಡಬಹುದಾಗಿದೆ. ಗರಿಷ್ಠ 50 ಲಕ್ಷ ರೂಪಾಯಿವರೆಗೂ ಸಾಲ ಸಿಗಲಿದೆ.
Advertisement
ಇಂಡಿಯನ್ ಬ್ಯಾಂಕ್, ದುಡಿಯುವ ಮಹಿಳೆಯರಿಗೆ 5000 ರೂ.ಗಳಿಂದ 1 ಲಕ್ಷ ರೂ.ವರೆಗೂ ಸಹಾಯ ಸಾಲ ನೀಡಲಿದೆ. ಇದೇ ವೇಳೆ, ವೇತನ ಪಡೆಯುವ ವರ್ಗಕ್ಕೂ ಕೊರೊನಾ ತುರ್ತು ವೇತನ ಸಾಲ ಸಿಗಲಿದೆ. ವೇತನದ 20 ಪಟ್ಟು ಅಥ್ವಾ ಗರಿಷ್ಠ 2 ಲಕ್ಷ ರೂ.ವರೆಗೂ ಸಾಲ ನೀಡಲಾಗುತ್ತಿದೆ.
Advertisement
ಈ ಮಧ್ಯೆ, ಐದು ಕಿಲೋಮೀಟರ್ ಗೆ ಒಂದು ಬ್ಯಾಂಕ್‍ನ್ನು ಮಾತ್ರ ತೆರೆದು, ಉಳಿದ ಬ್ಯಾಂಕ್‍ಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಬಗ್ಗೆ ಸಹ ಚಿಂತನೆ ನಡೆದಿದೆ.