ಬೆಂಗಳೂರು: ಬ್ಯಾಂಕ್ ಕೆಲಸ ಏನೇ ಇದ್ರೂ ಇಂದೇ ಮುಗಿಸಿಕೊಳ್ಳಿ. ಯಾಕಂದ್ರೆ ನಾಳೆಯಿಂದ ಮೂರು ದಿನ ಬ್ಯಾಂಕ್‍ಗಳಿಗೆ ರಜೆ ಇರಲಿದೆ.
ಮೇ 12 ಚುನಾವಣೆ ನಿಮಿತ್ತ, ಬ್ಯಾಂಕ್ ಸಿಬ್ಬಂದಿಯನ್ನ ಬಳಕೆ ಮಾಡಿಕೊಳ್ಳೋದ್ರಿಂದ ಶುಕ್ರವಾರ, ಶನಿವಾರ ಬ್ಯಾಂಕ್‍ಗಳು ಓಪನ್ ಇರಲ್ಲ. ಇನ್ನು ಭಾನುವಾರ ರಜಾದಿನವಾಗಿರೋದ್ರಿಂದ ಸೋಮವಾರದ ತನಕ ಕಾಯಬೇಕಾಗುತ್ತೆ. ಹೀಗಾಗಿ ಬ್ಯಾಂಕ್ ಕೆಲಸವಿದ್ರೆ ಇಂದೇ ಮುಗಿಸಿಕೊಳ್ಳಿ.
ಇನ್ನು ತಿಂಗಳ ಆರಂಭ ಮತ್ತು ವೀಕೆಂಡ್ ಅಂತಾ ಪಾರ್ಟಿ ಮೂಡ್‍ನಲ್ಲಿರುವ ಮದ್ಯಪ್ರಿಯರಿಗೆ ಕೂಡ ಚುನಾವಣಾ ಆಯೋಗ ಶಾಕ್ ನೀಡಿದೆ. ಇಂದು ಸಂಜೆ 5 ಗಂಟೆಯಿಂದ ಮದ್ಯದಂಗಡಿಗಳು ಬಂದ್ ಆಗಲಿವೆ. ಇಂದು ಸಂಜೆ 5 ಗಂಟೆಯಿಂದ ಮೇ 12ರ ಮಧ್ಯರಾತ್ರಿವರೆಗೆ ರಾಜ್ಯದ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚುವಂತೆ ಚುನಾವಣಾ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ವಿಧಾನಸಬಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಚುನಾವಣಾ ಆಯೋಗ ಎಲ್ಲ ರೀತಿಯಿಂದಲೂ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುತ್ತಿದೆ. ಇದೇ ಶನಿವಾರ ಮೇ 12ರಂದು ಮತದಾನ ನಡೆದರೆ, ಮೇ 15ರಂದು ಫಲಿತಾಂಶ ಹೊರಬರಲಿದೆ.