– ಚೀನಾದಲ್ಲಿ ಹಳೆಯ ನೋಟುಗಳಿಗೆ ಕ್ರಿಮಿನಾಶಕ ಸಿಂಪಡಣೆ
ಬೆಂಗಳೂರು: ಹಳೆ ನೋಟು ಹಾಗೂ ಎಟಿಎಂಗಳಿಂದ ಮಾರಕ ಕೊರೊನಾ ಹರಡುತ್ತೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ. ಈ ಬೆನ್ನಲ್ಲೇ ಚೀನಾದಲ್ಲಿ ಹಳೆಯ ನೋಟುಗಳಿಗೆ ಕ್ರಿಮಿನಾಶಕ ಸಿಂಪಡಣೆ ಮಾಡಲಾಗುತ್ತಿದೆ.
ವಿಶ್ವಸಂಸ್ಥೆ ಮಾಹಿತಿ ನೀಡಿದ ಪ್ರಕಾರ, ಕೊರೊನಾ ಹಳೆಯ ನೋಟುಗಳಿಂದ, ಬ್ಯಾಂಕ್‍ನಿಂದ, ಚಿಲ್ಲರೆ ನಾಣ್ಯಗಳಿಂದ ಹಾಗೂ ಒಬ್ಬರ ಕೈಯಿಂದ ಪಡೆದರೆ ವೈರಸ್ ಬರಬಹುದು ಎಂದು ತಿಳಿಸಿದೆ. ಅಲ್ಲದೆ ಎಟಿಎಂನಿಂದ, ಎಟಿಎಂ ಹಣದಿಂದ ಹಾಗೂ ಟಿಕೆಟ್ ಮೆಷಿನ್‍ನಿಂದಲೂ ಮಾರಕ ಕಾಯಿಲೆ ಬರಬಹುದು ಎಂದು ಹೇಳಿದೆ. ಇದನ್ನು ಓದಿ: ಈಗ ಅಧಿಕೃತ – ಭಾರತಕ್ಕೆ ಆಗಮಿಸಿದ 21 ಇಟಲಿ ಪ್ರವಾಸಿಗರ ಪೈಕಿ 15 ಮಂದಿಗೆ ಕೊರೊನಾ
Advertisement
Advertisement
ಸೋಂಕು ಇದ್ದವರನ್ನು ಅಪ್ಪಿಕೊಂಡರೆ ಹಾಗೂ ಕೈ ಕುಲುಕಿದರೂ ಕೊರೊನಾ ಬರುವ ಸಾಧ್ಯತೆಗಳಿವೆ. ಜೊತೆಗೆ ಆಫೀಸ್‍ನಲ್ಲಿ ಡೋರ್ ಹ್ಯಾಂಡಲ್, ಕಾಫಿ ಮೆಷಿನ್, ಆಫೀಸ್ ಫೋನ್ ಹಾಗೂ ಸ್ಮಾರ್ಟ್‍ಫೋನ್‍ನಿಂದಲೂ ಕೊರೊನಾ ಹರಡುವ ಸಾಧ್ಯತೆಗಳಿವೆ. ವಿಮಾನದ ಸೀಟಿನಿಂದಲೂ ಹಾಗೂ ಸಾರ್ವಜನಿಕ ಶೌಚಾಲಯದಿಂದ ಕೂಡ ಕೊರೊನಾ ಹರಡುತ್ತದೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ. ಇದನ್ನೂ ಓದಿ: ಹೆಚ್ಚು ಜನ ಸೇರುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಡಿ – ಪ್ರಧಾನಿ ಮೋದಿ ಮನವಿ
Advertisement
Advertisement
ಇತ್ತ ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ವೈದ್ಯರು ಪಬ್ಲಿಕ್ ಟಿವಿ ಜೊತೆ ಮಾತನಾಡಿ ಕೊರೊನಾ ತಡೆಯುವುದು ಹೇಗೆ ಎಂಬುದನ್ನು ತಿಳಿಸಿದ್ದಾರೆ. ಮಕ್ಕಳಿಗೆ ಮುತ್ತು ಕೊಡುವುದು, ಅಪ್ಪಿಕೊಳ್ಳುವುದನ್ನು ನಿಲ್ಲಸಬೇಕು. ಶೇಕ್ ಹ್ಯಾಂಡ್ ಮಾಡಿದಾಗ ಕೊರೊನಾ ಹೆಚ್ಚಾಗಿ ಹರಡಲಿದೆ. ಕೊರೊನಾ ರೋಗಿ ಜೊತೆ ಹ್ಯಾಂಡ್ ಶೇಕ್ ಮಾಡಿದರೆ ಅವರಿಗೂ ಆ ರೋಗ ಬರುತ್ತದೆ. ವಿದೇಶಗಳಿಗೆ ಹೋಗಿ ಬಂದವರು ಆದಷ್ಟೂ ಮಕ್ಕಳಿಂದ ದೂರವಿದ್ದರೆ ಒಳ್ಳೆಯದು. ಇನ್ನು ಗರ್ಭಿಣಿಯರು, ಮಕ್ಕಳು, ವೃದ್ಧರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಿರುತ್ತದೆ. ಆದ್ದರಿಂದ ಕೊರೊನಾ ಬೇಗ ಇವರಲ್ಲಿ ಹರಡುತ್ತದೆ ಎಂದು ಬೌರಿಂಗ್ ಆಸ್ಪತ್ರೆ ಹಿರಿಯ ವೈದ್ಯ ರಮೇಶ್ ಹೇಳಿದ್ದಾರೆ. ಇದನ್ನೂ ಓದಿ: ಒಂದೇ ದಿನ ಬೆಂಗ್ಳೂರಿನ ನಾಲ್ಕು ಮಂದಿಗೆ ಕೊರೊನಾ ಸೋಂಕು ಶಂಕೆ – ಆಸ್ಪತ್ರೆಗೆ ದಾಖಲು
ಮೊಬೈಲ್ ಫೋನ್, ವ್ಯಾಲೆಟ್ ಹಾಗೂ ಪರ್ಸ್‍ನಿಂದಲೂ ಕೊರೊನಾ ವೈರಸ್ ಹರಡುತ್ತದೆ. ಫಸ್ಟ್ ಶಿಫ್ಟ್ ಅಲ್ಲಿ ಸೊಂಕಿತ ಕಂಪ್ಯೂಟರ್ ಮುಟ್ಟಿದರೆ, ಸೆಕೆಂಡ್ ಶಿಫ್ಟ್ ಅವರಿಗೂ ಕೊರೊನಾ ಬರುತ್ತದೆ. ಮಾರಕ ಕೊರೊನಾ ವೈರಸ್ ಸುಮಾರು 6 ಗಂಟೆಗೂ ಹೆಚ್ಚು ಹೊತ್ತು ಜೀವಂತವಿರುತ್ತದೆ. ಹ್ಯಾಂಡ್ ವಾಶ್ ಇಲ್ಲದೇ ಮುಟ್ಟಿದರೆ ಕೊರೊನಾ ಹರಡುತ್ತೆ. ಜೊತೆಗೆ ರೋಗಿಯ ಮೊಬೈಲ್, ಪರ್ಸ್ ಮುಟ್ಟುವ ಮೊದಲು ಎಚ್ಚರವಾಗಿರಿ. ಏಕೆಂದರೆ ಕ್ಷಣದಲ್ಲಿ ಕೊರೊನಾ ಹರಡುತ್ತೆ ಎಂದು ವೈದ್ಯರಾದ ಡಾ.ರಮೇಶ್ ತಿಳಿಸಿದ್ದಾರೆ.
ಸದ್ಯ ಕೊರೊನಾ ತಡೆಗೆ ಬೌರಿಂಗ್ ಆಸ್ಪತ್ರೆ ಸಂಪೂರ್ಣ ಸಜ್ಜಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ 10 ಹಾಸಿಗೆಗಳ ಕೊಠಡಿ ನಿರ್ಮಾಣ ಮಾಡಲಾಗಿದೆ. ಕೊರೊನಾ ಶಂಕೆ ಕಂಡುಬಂದರೆ ಹಂತ ಹಂತವಾಗಿ ತಪಾಸಣೆಗೆ ವೈದ್ಯರು ತಯಾರಾಗಿದ್ದಾರೆ. ಹೊರರಾಜ್ಯದ ಜನ ಹೆಚ್ಚಿರುವ ಕಾರಣ ಸಂಪೂರ್ಣ ಸಜ್ಜಾಗಿರುವ ಬೌರಿಂಗ್ ಸಿಬ್ಬಂದಿ ಮೊದಲಿಗೆ ಅವರು ವಿಮಾನದಲ್ಲಿ ಪ್ರಯಾಣ ಮಾಡಿದ್ದಾರಾ ಇತ್ಯಾದಿ ಅವರ ಪೂರ್ವ ಮಾಹಿತಿಗಳನ್ನು ಸಹ ಕಲೆಹಾಕುತ್ತಿದ್ದಾರೆ. ಜೊತೆಗೆ ಕೊರೊನಾ ಭೀತಿ ಹಿನ್ನೆಲೆ ಬೆಳ್ಳಂಬೆಳಗ್ಗೆ ಬೌರಿಂಗ್ ಸಿಬ್ಬಂದಿ ಜೊತೆ ಸಭೆ ನಡೆಸಿ, ಯಾವ ರೀತಿ ಕೊರೊನಾವನ್ನು ತಡೆಗಟ್ಟಬೇಕು ಎನ್ನುವ ಬಗ್ಗೆ ಚರ್ಚೆ ಮಾಡಿದ್ದಾರೆ.