ಬೆಂಗಳೂರು: ಈ ತಿಂಗಳ ಅಂತ್ಯ ಅಂದ್ರೆ ಮೇ 30 ಮತ್ತು 31ರಂದು ಬ್ಯಾಂಕ್‍ಗಳ ಒಕ್ಕೂಟ ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಎರಡು ದಿನ ಬ್ಯಾಂಕ್‍ಗಳು ಬಂದ್ ಆಗಲಿವೆ.
ಪ್ರತಿ 5 ವರ್ಷಕ್ಕೊಮ್ಮೆ ವೇತನ ಹೆಚ್ಚಳ ಮಾಡಬೇಕೆಂಬ ನಿಯಮವಿದ್ರು, ಸಹ ಕಳೆದ ಒಂದು ವರ್ಷದಿಂದ ಯಾವುದೇ ರೀತಿಯ ಮಾತುಕತೆಗೆ ಸರ್ಕಾರ ಕರೆದಿಲ್ಲ. ಈಗಾಗಲೇ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಿರೋ ಸಿಬ್ಬಂದಿ ಈ ತಿಂಗಳಾಂತ್ಯಕ್ಕೆ ಎರಡು ದಿನಗಳ ಕಾಲ ಬ್ಯಾಂಕ್ ಕೆಲಸ ನಿಲ್ಲಿಸಿ ಪ್ರತಿಭಟನೆ ನಡೆಸಲಿದ್ದೇವೆ ಅಂತಾರೆ ಬ್ಯಾಂಕ್ ಒಕ್ಕೂಟದ ಸದಸ್ಯರು ತಿಳಿಸಿದ್ದಾರೆ.
Advertisement
ಒಂದು ವೇಳೆ ಸರ್ಕಾರ ಮತ್ತು ಐಬಿಎ (ಭಾರತೀಯ ಬ್ಯಾಂಕ್‍ಗಳ ಒಕ್ಕೂಟ) ನಮ್ಮ ಪ್ರತಿಭಟನೆಗೆ ಸ್ಪಂದಿಸದೇ ಹೋದ್ರೆ ಮುಷ್ಕರವನ್ನ ಅನಿರ್ಧಿಷ್ಟಾವದಿಗೆ ನಡೆಸಲು ಈಗಾಗಲೇ ತೀರ್ಮಾನ ಮಾಡಲಾಗಿದೆ. ಇಡೀ ದೇಶದಲ್ಲಿ ನಡೆಯೋ ಈ ಪ್ರತಿಭಟನೆಯಲ್ಲಿ ಲಕ್ಷಾಂತರ ನೌಕರರು ಪಾಲ್ಗೊಳ್ಳಲಿದ್ದಾರೆ ಎಂದು ಬ್ಯಾಂಕ್ ಅಸೋಸಿಯೇಷನ್‍ನ ಪದಾಧಿಕಾರಿ ಪಿ.ಜಿ.ಆರ್. ಬನ್ನಿಂದ್ಯಾಯ ಎಚ್ಚರಿಕೆ ನೀಡಿದ್ದಾರೆ.