ನವದೆಹಲಿ: ಮಂಗಳವಾರದಂದು ದೇಶದಾದ್ಯಂತ ರಾಷ್ಟ್ರೀಕೃತ ಬ್ಯಾಂಕ್‍ಗಳು ಬಂದ್‍ಗೆ ಕರೆ ನೀಡಿವೆ.
ಎಸ್‍ಬಿಐ ಜೊತೆ ಸಹವರ್ತಿ ಬ್ಯಾಂಕ್‍ಗಳ ವಿಲೀನಕ್ಕೆ ವಿರೋಧಿಸಿ, ನೋಟು ನಿಷೇಧದಿಂದ ಬ್ಯಾಂಕ್‍ಗಳಿಗೆ ನಷ್ಟವಾದ ವೆಚ್ಚ ಭರಿಸುವಂತೆ ಹಾಗೂ ಸೇವಾಭದ್ರತೆ ಸೇರಿದಂತೆ ಸುಮಾರು 30 ಬೇಡಿಕೆಗಳನ್ನು ಮುಂದಿಟ್ಟು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಮಂಗಳವಾರಂದು ಬಂದ್‍ಗೆ ಕರೆ ನೀಡಿದೆ. ದೇಶದಾದ್ಯಂತ ಸುಮಾರು 10 ಲಕ್ಷಕ್ಕೂ ಹೆಚ್ಚಿನ ಬ್ಯಾಂಕ್ ಸಿಬ್ಬಂದಿ ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ.
Advertisement
ದೇಶದ್ಯಾಂತ ಬ್ಯಾಂಕ್‍ಗಳು ಮುಷ್ಕರ ನಡೆಸಲು ನಿರ್ಧರಿಸಿರುವುದರಿಂದ, ಬ್ಯಾಂಕಿಂಗ್ ಸೇವೆ ಬಹುತೇಕ ಸ್ತಬ್ಧವಾಗಲಿದ್ದು, ಎಟಿಎಂನಲ್ಲಿ ಸೇವೆಯಲ್ಲೂ ವ್ಯತ್ಯಯ ಉಂಟಾಗಲಿದೆ.
Advertisement
Advertisement
ಯಾವ ಬ್ಯಾಂಕ್‍ಗಳು ಇರಲ್ಲ?: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಐಡಿಬಿಐ ಬ್ಯಾಂಕ್, ಎಸ್‍ಬಿಐ, ಎಸ್‍ಬಿಎಂ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕರ್ನಾಟಕ ಬ್ಯಾಂಕ್ ಸೇರಿದಂತೆ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‍ಗಳು ಮುಷ್ಕರದಲ್ಲಿ ಪಾಲ್ಗೊಳ್ಳುವುದರಿಂದ ಈ ಬ್ಯಾಂಕ್‍ಗಳ ಸೇವೆ ನಾಳೆ ಇರುವುದಿಲ್ಲ.
Advertisement
ಯಾವ ಬ್ಯಾಂಕ್‍ಗಳು ಇರುತ್ತೆ?: ಐಸಿಐಸಿಐ, ಹೆಚ್‍ಡಿಎಫ್‍ಸಿ, ಆಕ್ಸಿಸ್ ಬ್ಯಾಂಕ್, ಕೋಟಕ್ ಮಹಿಂದ್ರ ಸೇರಿದಂತೆ ಖಾಸಗಿ ಬ್ಯಾಂಕ್‍ಗಳು ನಾಳೆ ಎಂದಿನಂತೆ ಕಾರ್ಯ ನಿರ್ವಹಿಸಲಿವೆ.