ಬೆಂಗಳೂರು: ವಿವಿಧ ಬೇಡಿಕೆ ಆಧರಿಸಿ ಬ್ಯಾಂಕ್‍ಗಳ ಮುಷ್ಕರಕ್ಕೆ ಕರೆ ನೀಡಲಾಗಿದೆ. ಪರಿಣಾಮ 2 ದಿನ ನೌಕರರ ಮುಷ್ಕರದ ಎಫೆಕ್ಟ್ ಜೊತೆ ಮಧ್ಯೆ ಭಾನುವಾರ ಹಿನ್ನೆಲೆಯಲ್ಲಿ ಇಂದಿನಿಂದ 3 ದಿನ ಬ್ಯಾಂಕ್ ವಹಿವಾಟು ಬಂದ್ ಆಗಿದೆ. ವೇತನ ಒಪ್ಪಂದ ಮಾತುಕತೆ ವಿಫಲ ಹಿನ್ನೆಲೆ ಎಲ್ಲಾ ಬ್ಯಾಂಕ್ ಗಳು ಬಂದ್ ಗೆ ಕರೆ ನೀಡಲಾಗಿದೆ.
ಬ್ಯಾಂಕ್ ನೌಕರರ ಬೇಡಿಕೆಯಂತೆ 15% ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಬಂದ್ ನಡೆಯುತ್ತಿದ್ದು, ನಗರದ ಬಹುತೇಕ ಕಡೆ ಎಟಿಎಂಗಳಲ್ಲಿ ಹಣ ಖಾಲಿಯಾಗಿದೆ. ಮತ್ತೆ ಕೆಲವೆಡೆ ಎಟಿಎಂ ಸೆಂಟರ್ ಗಳು ಔಟ್ ಆಫ್ ಸರ್ವಿಸ್ ಆಗಿದೆ. ಪರಿಣಾಮ ನಗದಿಗಾಗಿ ಗ್ರಾಹಕರು ಅಲೆದಾಟ ಮಾಡುತ್ತಿರುವ ಸ್ಥಿತಿ ಎದುರಾಗಿದೆ.
Advertisement
Advertisement
ಮಹಾಲಕ್ಷ್ಮೀ ಲೇಔಟ್, ಲಗ್ಗೆರೆ, ನಂದಿನಿ ಲೇಔಟ್ ಸೇರಿದಂತೆ ಹಲವೆಡೆ ಎಲ್ಲ ಬ್ಯಾಂಕ್‍ಗಳ ಎಟಿಎಂಗಳಲ್ಲಿ ಹಣದ ಲಭ್ಯತೆ ಕಡಿಮೆಯಾಗಿದೆ. ಅದರಲ್ಲೂ ಬ್ಯಾಂಕ್ ಅಸೋಸಿಯೇಷನ್ ಕರೆ ನೀಡಿರುವ ಬಂದ್‍ನಿಂದ ರಾಷ್ಟ್ರೀಕೃತ ಬ್ಯಾಂಕ್‍ಗಳು ಪೂರ್ಣ ಸ್ಥಗಿತವಾಗಿದೆ. ಪರಿಣಾಮ ಖಾಸಗಿ ಬ್ಯಾಂಕ್ ಎಟಿಎಂಗಳ ಕಡೆ ಗ್ರಾಹಕರು ಮುಖ ಮಾಡಿದ್ದಾರೆ. ಪರಿಣಾಮ ಖಾಸಗಿ ಬ್ಯಾಂಕ್ ಎಟಿಎಂಗಳಲ್ಲೂ ಹಣ ಸಿಗುತ್ತಿಲ್ಲ.
Advertisement
ಹಲವೆಡೆ 100 ರೂ. ಮುಖ ಬೆಲೆಯ ನಗದು ಮಾತ್ರ ಸಿಗುತ್ತಿಲ್ಲ. 500, 2000 ಸಾವಿರ ಮಾತ್ರ ಕೆಲ ಎಟಿಎಂಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಸಿಗುತ್ತಿದೆ. ಬ್ಯಾಂಕ್ ಮುಷ್ಕರದ ಮೊದಲ ದಿನವೇ ಸ್ಥಿತಿ ಹೀಗಿದೆ.