ಚಾಮರಾಜನಗರ: ಬ್ಯಾಂಕ್ ಗಳ ದರೋಡೆಗೆ ಯತ್ನಿಸಿದ್ದ ನಾಲ್ವರು ಖದೀಮರನ್ನು ಪೊಲೀಸರು ಬಂಧಿಸಿದ್ದು, ಓರ್ವ ಪರಾರಿಯಾಗಿದ್ದಾನೆ.
Advertisement
ಜಿಲ್ಲೆಯ ಕೊಳ್ಳೇಗಾಲ ಪೊಲೀಸರಿಂದ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಹನೂರಿನ ಅಭಿಷೇಕ್(26), ಶ್ರೀನಿವಾಸ್(27), ರಾಚಪ್ಪಾಜಿನಗರದ ಮುತ್ತುಸ್ವಾಮಿ(26), ಮಲ್ಲೇಶ್(26) ಬಂಧಿತರು. ಬಂಧಿತರಿಂದ ಬ್ಯಾಂಕ್ ಗಳ ಕಂಪ್ಯೂಟರ್ ಮಾನಿಟರ್, ಸಿಸಿಟಿವಿ ಡಿವಿಆರ್, ಆಂಪ್ಲಿಫೈರ್, ಎರಡು ಮೋಟಾರ್ ಬೈಕ್ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಮೈಸೂರಿನ ದರೋಡೆ, ಶೂಟ್‍ಔಟ್ ಪ್ರಕರಣ- ಖತರ್ನಾಕ್ ಬಾಂಬೆ ಬುಡ್ಡಾ ಅಂದರ್
Advertisement
ಬ್ಯಾಂಕ್ ದರೋಡೆಗೆ ಆರೋಪಿಗಳು ಕೊಳ್ಳೇಗಾಲ ಬೆಂಗಳೂರು ಹೆದ್ದಾರಿಯಲ್ಲಿ ಹೊಂಚು ಹಾಕುತ್ತಿದ್ದರು. ಇದೀಗ ಪೊಲೀಸ್ ಅಧಿಕಾರಿಗಳು ಸೇರಿದಂತೆ 17 ಮಂದಿ ಪೊಲೀಸರ ತಂಡದಿಂದ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಹೆಡೆಮುರಿ ಕಟ್ಟಲಾಗಿದೆ.
Advertisement
Advertisement
ಕೆಲ ದಿನಗಳ ಹಿಂದೆ ಪೊನ್ನಾಚಿ ಗ್ರಾಮದ ಎಸ್.ಬಿ.ಐ ಬ್ಯಾಂಕ್, ಕೊಳ್ಳೇಗಾಲದ ಎಂಡಿಸಿಸಿ ಬ್ಯಾಂಕ್ ದರೋಡೆಗೆ ಖದೀಮರು ಯತ್ನಿಸಿದ್ದರು. ಇದೀಗ ತಪ್ಪಿಸಿಕೊಂಡ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಕೊಳ್ಳೇಗಾಲ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.