ಮಂಗಳೂರು: ನಗರದ ಪ್ರತಿಷ್ಠಿತ ಮೋತಿ ಮಹಲ್ ಹೊಟೇಲ್‌ನ (Moti Mahal Hotel) ಸ್ವಿಮ್ಮಿಂಗ್ ಪೂಲ್‌ನಲ್ಲಿ ಬ್ಯಾಂಕ್ ಅಧಿಕಾರಿಯೊಬ್ಬರ ಮೃತದೇಹ ಪತ್ತೆಯಾಗಿದೆ.
ಮೃತವ್ಯಕ್ತಿಯನ್ನು ಗೋಪು ಆರ್ ನಾಯರ್ ಎಂದು ಗುರುತಿಸಲಾಗಿದೆ. ಇವರು ಕೇರಳದ ತಿರುವನಂತಪುರ ನಿವಾಸಿ ಹಾಗೂ ಯುನಿಯನ್ ಬ್ಯಾಂಕ್ ಅಧಿಕಾರಿಯಾಗಿದ್ರು.
ಭಾನುವಾರ ಮಂಗಳೂರಿಗೆ ಬಂದು ಮೋತಿ ಮಹಲ್ ಹೊಟೇಲ್‌ನಲ್ಲಿ ಬ್ಯಾಂಕ್ ಅಧಿಕಾರಿ ಉಳಿದುಕೊಂಡಿದ್ದರು. ಇಂದು ಬೆಳಗ್ಗೆ ೪ ಗಂಟೆ ಸುಮಾರಿಗೆ ಹೊಟೇಲ್ ರೂಮ್‌ನಿಂದ ಹೊರ ಹೋಗಿದ್ದ ಗೋಪು ಆರ್ ನಾಯರ್, ಹೊಟೇಲ್‌ನ ಈಜು ಕೊಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಸ್ಥಳಕ್ಕೆ ಪಾಂಡೇಶ್ವರ ಠಾಣೆಯ (Pandeshwara Police Station) ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಕೇಸ್ ದಾಖಲಿಸಿಕೊಂಡಿದ್ದಾರೆ.
Web Stories