ದಾವಣಗೆರೆ: ಲೋನ್ ನೀಡುವುದಾಗಿ ಹೇಳಿ ಮಂಚಕ್ಕೆ ಕರೆದ ಮ್ಯಾನೇಜರ್‌ಗೆ ಮಹಿಳೆಯೊಬ್ಬರು ಹಿಗ್ಗಾ-ಮುಗ್ಗಾ ಥಳಿಸಿರುವ ಘಟನೆ ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿ ನಡೆದಿದೆ.
ಡಿಎಚ್‍ಎಫ್‍ಎಲ್ ಬ್ಯಾಂಕಿನ ಮ್ಯಾನೇಜರ್ ದೇವಯ್ಯ ಮಹಿಳೆಯನ್ನು ಮಂಚಕ್ಕೆ ಕರೆದು ಒದೆ ತಿಂದ ಆಸಾಮಿಯಾಗಿದ್ದಾನೆ. ಸುಮ (ಹೆಸರು ಬದಲಾಯಿಸಲಾಗಿದೆ) ಎಂಬವರು 2 ಲಕ್ಷ ರೂಪಾಯಿ ಬ್ಯಾಂಕ್ ಲೋನ್ ನೀಡುವಂತೆ ಮ್ಯಾನೇಜರ್ ದೇವಯ್ಯ ಬಳಿ ಮನವಿ ಮಾಡಿಕೊಂಡಿದ್ದರು. ಲೋನ್ ವಿಚಾರ ಮಾತನಾಡುವುದಾಗಿ ದೇವಯ್ಯ ಮಹಿಳೆಯನ್ನು ಮನೆಗೆ ಕರೆದಿದ್ದನು.
Advertisement
Advertisement
ಲೋನ್ ಸಿಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಮ್ಯಾನೇಜರ್ ಮನೆಗೆ ತೆರಳಿದ್ದ ಸುಮಾಗೆ ಶಾಕ್ ಕಾದಿತ್ತು. ಮನೆಗೆ ಹೋಗುತ್ತಿದ್ದಂತೆ ದೇವಯ್ಯ ಮನೆಯ ಬಾಗಿಲನ್ನು ಹಾಕಿ, ಬೆಡ್‍ರೂಂಗೆ ಬಾ ಎಂದು ಕರೆದಿದ್ದಾನೆ. ಬಟ್ಟೆ ಬಿಚ್ಚಿ ಸಹಕರಿಸುವಂತೆ ಮಹಿಳೆ ಬಳಿ ಕೇಳಿಕೊಂಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಸುಮಾ ಕೈಗೆ ಸಿಕ್ಕ ದೊಣ್ಣೆಯಿಂದ ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ.
Advertisement
ಮ್ಯಾನೇಜರ್ ನನ್ನು ಮನೆಯಿಂದ ಹೊರಕ್ಕೆ ಎಳೆದು ತಂದು ಚಪ್ಪಲಿಯಿಂದ ಹೊಡೆದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬ್ಯಾಂಕ್ ಮ್ಯಾನೇಜರ್ ನನ್ನು ವಶಕ್ಕೆ ಪಡೆದು, ಮಹಿಳಾ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನಾ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv