ಬಳ್ಳಾರಿ: ಬುಧವಾರವಷ್ಟೇ ಕಲಬುರಗಿಯಲ್ಲಿ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಿಎಂ ಕುಮಾರಸ್ವಾಮಿ ಸರ್ಕಾರ ರೈತರ ಸಾಲ ಮನ್ನಾ ಮಾತು ಕೊಟ್ಟು ಮೋಸ ಮಾಡಿದೆ ಅಂತ ಗಂಭೀರ ಆರೋಪ ಮಾಡಿದ್ದರು. ಇತ್ತ, ಬಳ್ಳಾರಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಂದೇ ದಿನ ಮೂರು ನೋಟಿಸ್ ಕೊಟ್ಟಿದ್ದು ರೈತರು ಕಂಗಾಲಾಗಿದ್ದಾರೆ.
ಸೋಮಸಮುದ್ರದ 150ಕ್ಕೂ ಹೆಚ್ಚು ರೈತರಿಗೆ ಬಡ್ಡಿ ಸಮೇತ ಬೆಳೆ ಸಾಲ ಕಟ್ಟುವಂತೆ ಸೂಚಿಸಿದೆ. ಒಂದು ಕಡೆ ರೈತರಿಗೆ ಬ್ಯಾಂಕುಗಳು ಸಾಲ ಬಾಕಿ ಪಾವತಿ ನೋಟಿಸ್ ನೀಡಬಾರದು ಎಂದು ಸರ್ಕಾರ ಹೇಳಿದ್ದರೆ ಇತ್ತ ಬ್ಯಾಂಕುಗಳು ಮಾತ್ರ ನೋಟಿಸ್ ಕೊಡುತ್ತಲೇ ಇವೆ. ಹೀಗಾಗಿ ಅನ್ನದಾತರಿಗೆ ಏನ್ ಮಾಡೋದು ಅನ್ನೋ ಚಿಂತೆ ಕಾಡ್ತಿದೆ.
Advertisement
Advertisement
ಬಳ್ಳಾರಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಈ ಬಾರಿ ಭೀಕರ ಬರ ಪರಿಸ್ಥಿತಿ ಆವರಿಸಿದೆ. ಬೆಳೆ ಬೆಳೆಯದಿದ್ದರೂ ರೈತರು ಪಡೆದಿರುವ ಬೆಳೆ ಸಾಲವನ್ನ ಬಡ್ಡಿ ಸಮೇತ ಕಟ್ಟುವಂತೆ ಎಸ್ ಬಿಐ ಬ್ಯಾಂಕ್ ನೋಟಿಸ್ ನೀಡುತ್ತಿದೆ ಎಂದು ರೈತ ಹುಲಗಪ್ಪ ಕಣ್ಣೀರು ಹಾಕಿದ್ದಾರೆ.
Advertisement
ಒಂದೇ ದಿನಕ್ಕೆ 2-3 ನೋಟಿಸ್..!
ಸೋಮಸಮುದ್ರ ಗ್ರಾಮದ ಸುಮಾರು 150 ರೈತರಿಗೆ ಎಸ್‍ಬಿಐ ಬ್ಯಾಂಕ್ ಬೆಳೆಸಾಲವನ್ನ ಬಡ್ಡಿ ಸಮೇತ ಕಟ್ಟುವಂತೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ ಸಮಯಾವಕಾಶ ಸಹ ಕೊಡದೇ ಒಂದೇ ದಿನಕ್ಕೆ ಎರಡು ಮೂರು ನೋಟಿಸ್ ಜಾರಿ ಮಾಡಿರುವುದು ರೈತರನ್ನ ಕಂಗಾಲಾಗಿಸಿದೆ.
Advertisement
ಬರಪೀಡಿತ ಪ್ರದೇಶಗಳ ರೈತರಿಗೆ ಸಾಲ ಕಟ್ಟುವಂತೆ ನೋಟೀಸ್ ಜಾರಿ ಮಾಡಬಾರದು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದ್ರೆ ಬ್ಯಾಂಕ್ ಅಧಿಕಾರಿಗಳು ಮಾತ್ರ ಸರ್ಕಾರದ ಆದೇಶಕ್ಕೆ ಕ್ಯಾರೆ ಎನ್ನದೆ ರೈತರಿಗೆ ಬಡ್ಡಿ ಅಷ್ಟೇ ಅಲ್ಲ ಬೆಳೆ ಸಾಲವನ್ನು ಸಹ ಕಟ್ಟುವಂತೆ ನೋಟಿಸ್ ಜಾರಿ ಮಾಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv