ಗಾಂಧಿನಗರ: ಪತಿಯ ಖಾತೆಯ ವಿವರವನ್ನು ಪತ್ನಿಗೆ ನೀಡಿದ್ದಕ್ಕೆ ರಾಷ್ಟ್ರೀಯ ಬ್ಯಾಂಕ್ ಒಂದಕ್ಕೆ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ 10 ಸಾವಿರ ರೂ. ದಂಡ ವಿಧಿಸಿದೆ.
ಪತಿಯ ಅನುಮತಿ ಇಲ್ಲದೇ, ಆತನ ಪತ್ನಿಗೆ ಬ್ಯಾಂಕ್ ಖಾತೆಗಳ ಮೂರು ವರ್ಷದ ಸ್ಟೇಟ್‍ಮೇಟ್ ನೀಡಿದ್ದ ಇಂಡಿಯನ್ ಓವರ್‍ಸೀಸ್ ಬ್ಯಾಂಕಿಗೆ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ 10 ಸಾವಿರ ರೂ. ದಂಡ ವಿಧಿಸಿದೆ.
Advertisement
Advertisement
ಏನಿದು ಪ್ರಕರಣ?
ಅಹಮದಾಬಾದ್ ನಗರದ ಸರ್ದಾರ್’ನಗರ್-ಹನ್ಸೋಲ್ ಶಾಖೆಯ ಗ್ರಾಹಕರಾಗಿರುವ ದಿನೇಶ್ ಪಮ್ನಾನಿ, ಅನುಮತಿ ಇಲ್ಲದೇ ನನ್ನ ವೈಯಕ್ತಿಕ ಖಾತೆಗಳ ಮಾಹಿತಿಯನ್ನು ಪತ್ನಿಗೆ ನೀಡಿದ್ದರ ಕುರಿತು ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಅಲ್ಲದೇ ದಿನೇಶ್ ಕೌಟುಂಬಿಕ ನ್ಯಾಯಾಲಯದಲ್ಲಿ ಕಳೆದ ಮೂರು ವರ್ಷಗಳಿಂದ ಕುಟುಂಬ ಕಲಹದ ಪ್ರಕರಣ ದಾಖಲಾಗಿತ್ತು. ಹೀಗಿರುವಾಗ ಬ್ಯಾಂಕ್ ನನ್ನ ಅನುಮತಿ ಪಡೆಯದೇ, ಮಾಹಿತಿ ನೀಡಿದ್ದು ತಪ್ಪು ಎಂದು ಆರೋಪಿಸಿದ್ದರು.
Advertisement
ಗೊತ್ತಾಗಿದ್ದು ಹೇಗೆ?
ಇತ್ತೀಚೆಗೆ ದಿನೇಶ್ ಅವರ ಮೊಬೈಲ್ ನಂಬರಿಗೆ ಖಾತೆಯಲ್ಲಿ 103 ರೂಪಾಯಿ ಕಡಿತಗೊಂಡಿದೆ ಎಂದು ಮೆಸೇಜ್ ಬಂದಿತ್ತು. ಯಾಕೆ ಕಡಿತವಾಯಿತು ಎಂದು ಪರಿಶೀಲಿಸಿದಾಗ ಯಾರೋ ಬ್ಯಾಂಕ್ ಸ್ಟೇಟ್‍ಮೆಂಟ್ ಪಡೆದಿರುವುದು ಅವರ ಗಮನಕ್ಕೆ ಬಂದಿದೆ. ಕೂಡಲೇ ಬ್ಯಾಂಕ್ ಶಾಖೆಗೆ ಹೋಗಿ ವಿಚಾರಿಸಿದಾಗ, ಸಿಬ್ಬಂದಿ ತನ್ನ ಪತ್ನಿಗೆ ಮೂರು ವರ್ಷದ ಅಕೌಂಟ್ ಸ್ಟೇಟ್‍ಮೆಂಟ್ ನೀಡಿರುವ ವಿಚಾರ ತಿಳಿಯುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಡು ದಿನೇಶ್ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆಗೆ ದೂರು ನೀಡಿದ್ದರು.
Advertisement
ಐಓಬಿ ಹೇಳಿದ್ದೇನು?
ದಿನೇಶ್ ಪ್ರತಿನಿಧಿಯಾಗಿ ಅವರ ಪತ್ನಿ ಬ್ಯಾಂಕಿಗೆ ಬಂದಿದ್ದರು. ಹೀಗಾಗಿ, ನಾವು ಖಾತೆಯ ಸ್ಟೇಟ್‍ಮೆಂಟ್ ನೀಡಿದ್ದೇವು. ಇದರಲ್ಲಿ ಯಾವುದೇ ಅಕ್ರಮ ವ್ಯವಹಾರ ನಡೆದಿಲ್ಲವೆಂದು ವೇದಿಕೆ ಎದುರು ವಾದಿಸಿತ್ತು.
ಆರ್‌ಬಿಐ ಮಾರ್ಗಸೂಚಿ ಏನು?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ(ಆರ್‌ಬಿಐ) ಮಾರ್ಗಸೂಚಿ ಪ್ರಕಾರ, ವ್ಯಕ್ತಿಯ ಒಪ್ಪಿಗೆ ಪತ್ರವಿಲ್ಲದೇ ಮೂರನೇ ವ್ಯಕ್ತಿಗೆ ಯಾವುದೇ ಬ್ಯಾಂಕ್ ಸ್ಟೇಟ್‍ಮೆಂಟ್ ಗಳನ್ನು ನೀಡಬಾರದು. ಅಲ್ಲದೇ ಬ್ಯಾಂಕುಗಳು ಗ್ರಾಹಕರ ಖಾಸಗಿತನವನ್ನು ಉಲ್ಲಂಘನೆ ಮಾಡುವಂತಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv