-ಫ್ಯಾಶನ್ ಜಗತ್ತಿನಲ್ಲಿ ಲಂಬಾಣಿಗರ ಕಸೂತಿಗೆ ಡಿಮ್ಯಾಂಡ್
ಹಾವೇರಿ: ಜಾಗತಿಕ ಮಾರುಕಟ್ಟೆಯ ಬಹು ಬೇಡಿಕೆಯ ಭಾರತೀಯ ಪರಂಪರೆಯ ಕಸೂತಿ ಕಲೆಗಳ ಪೈಕಿ ಲಂಬಾಣಿ ಜನಾಂಗದ ಕಲೆಗಳು ವಿಶೇಷ ಬೇಡಿಕ ಸೃಷ್ಟಿಸಿವೆ. ಲಂಬಾಣಿ ಮಹಿಳೆಯರು ಧರಿಸುವ ಸಾಂಪ್ರದಾಯಕ ಉಡುಗೆ, ಆಭರಣಗಳು, ಇಂದಿನ ಫ್ಯಾಷನ್ ಜಗತ್ತಿನಲ್ಲಿ ಯುವ ಸಮೂಹವನ್ನು ಸೆಳೆದಿವೆ. ಲಂಬಾಣಿಗರ ಕಸೂತಿ, ಆಭರಣ, ಉಡುಗೆ-ತೊಡುಗೆಗಳಿಗೆ ಮನಸೋಲದವರು ವಿರಳ.
Advertisement
ವಂಶಪಾರಂಪರ್ಯವಾಗಿ ತಮ್ಮ ಬದುಕಿನೊಂದಿಗೆ ಬೆಸೆದುಕೊಂಡು ಬಂದಿರುವ ಕಸೂತಿ ಕಲೆಯು ಯುವ ಪರಂಪರೆಯಲ್ಲಿ ಮರೀಚಿಕೆಯಾದರೂ ಜಿಲ್ಲೆಯ ತಾಂಡಾಗಳ ಹಿರಿಯ ಮಹಿಳೆಯರಲ್ಲಿ ಸುಯ್ -ದೋರಾ ಕಾಮ್ (ಸೂಜಿ ದಾರದಿಂದ ಮಾಡುವ ಗಂಟು ಹೆಣಿಕೆಯ ಕಸೂತಿ ಕಲೆ) ಉಳಿದುಕೊಂಡಿದೆ. ಹಾವೇರಿ ಜಿಲ್ಲೆಯಲ್ಲಿ ಲಂಬಾಣಿ ಸಮೂಹದ ಕೆಲ ಮಹಿಳೆಯರು ಪರಂಪರೆಯ ಈ ಕಲೆಯನ್ನು ತಮ್ಮ ಸಮೂಹದ ಯುವ ಜನಾಂಗಕ್ಕೆ ಕಲಿಸುವ ಕಾಯಕದಲ್ಲಿ ಶ್ರಮಿಸುತ್ತಿದ್ದಾರೆ.
Advertisement
Advertisement
ಹಿರೇಕೆರೂರು ತಾಲೂಕಿ ಬನ್ನಿಹಟ್ಟಿ, ನಿಡನೇಗಿಲು, ಚನ್ನಹಳ್ಳಿ ತಾಂಡಾ, ಹಾವೇರಿಯ ಗುತ್ತಲ, ನೆಲೊಗಲ್, ಹಾಗೂ ರಾಣೇಬೆನ್ನೂರಿನ ಗಂಗಾಜಲ, ವೆಂಕಟಾಪುರ, ಬಸಲಕಟ್ಟಿ ತಾಂಡಾ ಶಿಗ್ಗಾಂವಿ ತಾಲೂಕಿನ ಮಮದಾಪೂರ, ಕಮಲಾನಗರ, ತಡಸ, ದುಂಡಸಿ, ಹೋಸುರು ಸವಣೂರಿನ ಶಿರಬಡಗಿ ತಾಂಡಾ ಒಳಗೊಂಡಂತೆ ನೂರಾರು ತಾಂಡಾಗಳಲ್ಲಿ ದಿನ ಬೆಳಗಾದರೆ ಕೆಲ ವಯೋವೃದ್ಧ ಮಹಿಳೆಯರು ಕಸೂತಿ ಕಾಯಕದಲ್ಲಿ ತೊಡಗಿರುವ ದೃಶ್ಯ ಸಾಮಾನ್ಯವಾಗಿರುತ್ತವೆ. ಕೆಲ ಮಹಿಳೆಯರು ಹೊಲ, ಮನೆ ಕೆಲಸದ ಬಿಡುವಿನ ವೇಳೆ ಮೇಕೆ ಮೇಯಿಸಲು ಹೋಗುವ ಕಾಡು-ಮೇಡುಗಳಲ್ಲಿ ತಮ್ಮ ಬೇಸರ ಮರೆಯಲು ಹೆಣಿಗೆ ಕಾಯಕದಲ್ಲಿ ನಿರತರಾಗುವುದು ಕಾಣಬಹುದು. ಇದನ್ನೂ ಓದಿ: ಲಂಬಾಣಿ ಮಹಿಳೆಯರ ಉಡುಪಿನಲ್ಲಿ ಕನ್ನಡಿಗಳು ಯಾಕಿರುತ್ತೆ? ಹಂಸಲೇಖ ನೀಡಿದ್ರು ಉತ್ತರ
Advertisement
ಮಾರಾಟಕ್ಕಲ್ಲದಿದ್ದರೂ ಸಾಂಪ್ರದಾಯಕವಾಗಿ ಕೌಟುಂಬಿಕ ಸಭೆ, ಸಮಾರಂಭಗಳಲ್ಲಿ ಧರಿಸಲು ತಾವೇ ತಯಾರಿಸುವ ಅನಿವಾರ್ಯತೆಗೆ ಈ ಕಾಯಕದಲ್ಲಿ ತೊಡಗಿರುವುದು ಕಾಣಬಹುದು. ಲಂಬಾಣಿ ಮದುವೆ, ಗೋದಿ ಹಬ್ಬ, ಹೋಳಿ ಹಬ್ಬದ ಸಂಭ್ರಮದಲ್ಲಿ ಸಾಂಪ್ರದಾಯಿಕ ಉಡುಗೆ ತೊಡುವುದು ಈ ಸಮೂಹದ ರೂಢಿಗತವಾಗಿದೆ. ಈ ಸಮೂಹದ ಹಿರಿಯ ಮಹಿಳೆಯರು ಸೀರೆ ಬದಲು ಸಾಂಪ್ರದಾಯಕವಾದ ಫೇಟಿಯಾ(ಲೆಹೆಂಗಾ), ಕಾಂಚಳಿ(ರವಿಕೆ), ಛಾಂಟಿಯಾ(ವೇಲ್) ಹಾಕಲು ಇಷ್ಟಪಡುತ್ತಾರೆ. ಮಾರುಕಟ್ಟೆಯಲ್ಲಿ ಈ ಉಡುಪುಗಳು ದೊರೆಯದ ಕಾರಣ ತಾವೇ ಈ ಉಡುಪು, ಆಭರಣಗಳ ತಯಾರಿಕೆಯಲ್ಲಿ ತೊಡಗಬೇಕಾಗಿದೆ ಎಂಬುದು ಹಿರೇಕೆರೂರಿನ ಬನಹಟ್ಟಿ ತಾಂಡಾದ ಸಕ್ರಿಬಾಯಿ, ಸುಸಲಿಬಾಯಿ, ಪ್ರೇಮಾಬಾಯಿ, ರೇಣುಕಾಬಾಯಿ ಹಾಗೂ ಸರೋಜಿಬಾಯಿ ಅವರ ಅಭಿಪ್ರಾಯ. ಇದನ್ನೂ ಓದಿ: ಲಂಬಾಣಿ ಡ್ರೆಸ್ ಧರಿಸಿ ಮಿಂಚಿದ ಸಂಸದೆ ಕರಂದ್ಲಾಜೆ
ಗೋರ್ಮಾಟಿ, ಗೋರ್ಭಾಯಿ, ಲಮಾಣಿ, ಲಂಬಾಣಿ, ಬಂಜಾರಾ ಹೀಗೆ ಹಲವು ಹೆಸರುಗಳಿಂದ ಕರೆಯಿಸಿಕೊಳ್ಳುವ ಇವರು ಕರ್ನಾಟಕ ಗುಜರಾತ, ಮಾಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಹರಿದು ಹಂಚಿಹೋಗಿದ್ದಾರೆ. ಪ್ರಾದೇಶಿಕ ಭಿನ್ನತೆಗನುಣವಾಗಿ ಈ ಸಮೂಹ ಧರಿಸುವ ಉಡುಪು ಆಭರಣಗಳಲ್ಲೂ ವ್ಯತ್ಯಾಸಗಳಿವೆ. ಇದನ್ನೂ ಓದಿ: ದೀಪಾವಳಿಯಂದು ಯಾದಗಿರಿಯಲ್ಲಿ ಲಂಬಾಣಿ ಯುವತಿಯರಿಂದ ವಿಶೇಷ ಡ್ಯಾನ್ಸ್
ಮಹಿಳೆಯರ ಉಡುಗೆಗಳಾದ, ಫೆಟಿಯಾ( ಲೆಹೆಂಗಾ), ಕಾಂಚಳಿ(ರವಿಕೆ), ಛಾಂಟಿಯಾ(ವೇಲ್) ಹಾಗೂ ಆಭರಣಗಳಾದ, ಮುತೈದೆಯರು ತೋಳಿಗೆ, ಕೈಗೆ ಭಲ್ಯ (ಪ್ಲಾಸ್ಟಿಕ್ ಅಥವಾ ಜಿಂಕೆ, ಸಾರಂಗ ಸೇರಿದಂತೆ ಇತರೆ ಪ್ರಾಣಿಯ ಕೊಂಬಿನಿಂದ ಮಾಡಿದ ಬಳೆ), ತಲೆಗೆ ಘುಗ್ರಿ (ಬೆಳ್ಳಿಯ ಜಡೆಕಟ್ಟು) ಟೊಪಳಿ, ಮತ್ತು ಹಾಸ್ಲೊ ಭೂರಿಯಾ( ಮೂಗುತಿ) ಹಾಗೂ ಕೊರಳಿಗೆ ಪಾವಲಾರ್ಹಾರ( ಬೆಳ್ಳಿಯ ನಾಲ್ಕಾಣೆ, ಎಂಟಾಣೆಗಳ ಹಾರ), ಕೈ ಮತ್ತು ಕಾಲಿನ ಬೆರಳುಗಳಿಗೆ ಕಸ್, ಅಂಗುತ್ತಾ, ಚಟಕಿ( ಹಿತ್ತಾಳೆಯ ಉಂಗುರಗಳು) ಹೀಗೆ ಅಡಿಯಿಂದ ಮುಡಿಯವರೆಗೂ ಬಗೆಬಗೆಯ ಆಭರಣಗಳನ್ನು ಧರಿಸಿರುವುದು ಸಂಪ್ರದಾಯ.