ಬೆಂಗಳೂರು: ಬಾಂಗ್ಲಾದೇಶದವರಿಗೂ ರಾಜ್ಯದಲ್ಲಿ BPL ಕಾರ್ಡ್ ಕೊಡಲಾಗಿದೆ ಅಂತ ಬಿಜೆಪಿ ಸದಸ್ಯ ಸಿಟಿ ರವಿ (CT Ravi) ಆರೋಪ ಮಾಡಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಸದಸ್ಯರು ರೇಷನ್ ಕಾರ್ಡ್ (Ration Card) ಗೊಂದಲದ ಬಗ್ಗೆ ಪ್ರಶ್ನೆ ಕೇಳಿದ್ರು. ಈ ವೇಳೆ ಬಾಂಗ್ಲಾದೇಶದವರಿಗೂ ಬಿಪಿಎಲ್ ಕಾರ್ಡ್ ಕೊಡಲಾಗಿದೆ ಅಂತ ಆರೋಪ ಮಾಡಿದ್ರು. ಇದನ್ನೂ ಓದಿ: ಪ್ರತಿ ತಿಂಗಳು ಎಷ್ಟು ಮಂದಿಗೆ ಯುವನಿಧಿ ಹಣ ಸೇರುತ್ತಿದೆ – ಲೆಕ್ಕ ಕೊಟ್ಟ ಸರ್ಕಾರ
ಜೆಡಿಎಸ್ ಸದಸ್ಯ ಜವರಾಯಿಗೌಡ ಮಾತಾಡಿ, ರಾಜ್ಯದಲ್ಲಿ 40 ಲಕ್ಷ ಬೋಗಸ್ ಕಾರ್ಡ್ ಇದೆ ಅಂತ ಹೇಳಲಾಗ್ತಿದೆ. ಈ ಬೋಗಸ್ ಕಾರ್ಡ್ ಕೊಟ್ಟ ಅಧಿಕಾರಗಳ ಮೇಲೆ ಯಾಕೆ ಕ್ರಮ ತೆಗೆದುಕೊಂಡಿಲ್ಲ. ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದರು.
ಕಾಂಗ್ರೆಸ್ ನ ಐವಾನ್ ಡಿಸೋಜಾ, BPL ಕಾರ್ಡ್ ರದ್ದು ಮಾಡೋಕೆ ಇರೋ ಮಾನದಂಡ ಸರಿಯಿಲ್ಲ. ಜೀವನೋಪಾಯಕ್ಕಾಗಿ ಸ್ವಂತ ವಾಹನ ಇರೋ ಅಂಶ ಪ್ರಸ್ತಾಪ ಮಾಡಿರೋದು ಸರಿಯಲ್ಲ. ಈ ಮಾನದಂಡ ಸರಿ ಮಾಡಬೇಕು ಎಂದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಿ.ಟಿ ರವಿ, 5 ಕೋಟಿಗೂ ಹೆಚ್ಚು ಜನ ರೇಷನ್ ಪಡೆಯುತ್ತಿದ್ದಾರೆ. ಅಷ್ಟೊಂದು ಬಡವರು ರಾಜ್ಯದಲ್ಲಿ ಇದ್ದಾರಾ? ಹಾಗಾದರೆ ಕರ್ನಾಟಕ ಸಂವೃದ್ಧಿ ಹೇಗೆ ಆಗುತ್ತದೆ? ಕಾಳಸಂತೆಗೆ ಅಕ್ಕಿ ಹೇಗೆ ಬರ್ತಿದೆ? ಇದಕ್ಕೆ ನಾವೇ ದಾರಿ ಮಾಡಿಕೊಟ್ಟಂತೆ ಕಾಣ್ತಿದೆ. ಇದನ್ನ ನಿಯಂತ್ರಣ ಮಾಡಲು ಸರ್ಕಾರದ ಕ್ರಮ ಏನು? ಅಂತ ಪ್ರಶ್ನೆ ಮಾಡಿದ್ರು.
ಬಳಿಕ ಜೆಡಿಎಸ್ ಶರವಣ ಮಾತಾಡಿ, ಸರ್ಕಾರ ಯಾರಿಗೆ ಕಾರ್ಡ್ ರದ್ದು ಮಾಡುತ್ತದೆ ಅಂತ ಸ್ಪಷ್ಟಪಡಿಸಬೇಕು. ಯಾವುದು ನಿಯಮ ಅಂತ ಸ್ಪಷ್ಟವಾಗಿ ಹೇಳಿಕೆ. ಬೆಂಗಳೂರಿನಲ್ಲಿ ಪಡಿತರ ಅಂಗಡಿಯವರು ಜನರಿಂದ ಒಂದು ಕಾರ್ಡ್‌ಗೆ 20 ರೂ. ವಸೂಲಿ ಮಾಡ್ತಿದ್ದಾರೆ. ಇದಕ್ಕೆ ಸರ್ಕಾರದ ಅನುಮತಿ ಇದೆಯಾ? ಬಡವರಿಗೆ ಕೊಟ್ಟ ಅಕ್ಕಿ ಉಳಿದ ಮೇಲೆ ಖಾಸಗಿ ಅವರಿಗೆ ಮಾರಾಟ ಮಾಡಲಾಗ್ತಿದೆ. ಇಂತಹವರ ವಿರುದ್ಧ ಸರ್ಕಾರದ ಕ್ರಮ ಏನು ಅಂತ ಪ್ರಶ್ನೆ ಮಾಡಿದ್ರು. ಇದನ್ನೂ ಓದಿ: 9 ಕಂಪನಿಗಳಿಗೆ ನೀಡಿರೋ 5,150 ಎಕ್ರೆ ಗುತ್ತಿಗೆ ಅರಣ್ಯ ಭೂಮಿ ವಶಕ್ಕೆ ಕ್ರಮ: ಈಶ್ವರ್ ಖಂಡ್ರೆ
ಇದಕ್ಕೆ ಉತ್ತರ ನೀಡಿದ ಸಚಿವ ಮುನಿಯಪ್ಪ, ಅರ್ಹರೆ ಇಲ್ಲದ 13 ಲಕ್ಷ ಕಾರ್ಡ್ ಪರಿಷ್ಕರಣೆ ಮಾಡೋಕೆ ಹೋದೆ. ಇದರಲ್ಲಿ 3,35,463 ಅನರ್ಹರು ಅಂತ ಬಂತು. ಒಂದು ಕಾರ್ಡ್ ರದ್ದಾದ್ರೆ ಟಿವಿಗೆ ಹೋಗ್ತಾರೆ. ಎಲ್ಲ ಪಕ್ಷದವರು ಸಹಕಾರ ಕೊಟ್ರೆ 3 ತಿಂಗಳಲ್ಲಿ ಎಲ್ಲವೂ ಸರಿ ಮಾಡ್ತೀನಿ. ನಾನು ಸರಿ ಮಾಡಲು ಹೋದಾಗ ಟಿವಿಯಲ್ಲಿ ಸುದ್ದಿ ಆಯ್ತು. ಆ ಮೇಲೆ ನಾನು ಕಾರ್ಡ್ ರದ್ದು ಮಾಡೋದು ಪ್ರಕ್ರಿಯೆ ಬಿಟ್ಟೆ. 20% ಕಾರ್ಡ್ ಅಹರ್ತೆ ಇಲ್ಲದೆ ಇರೋರಿಗೆ ಕಾರ್ಡ್ ಇದೆ. ಇದನ್ನ ಪರಿಷ್ಕರಣೆ ಮಾಡಬೇಕು ಎಂದರು.
ರೇಷನ್ ಕಾರ್ಡ್ ಅಂಗಡಿಯಲ್ಲಿ 20 ರೂ. ತೆಗೆದುಕೊಳ್ಳೋ ಹಾಗೆ ಇಲ್ಲ. ಸರ್ಕಾರ ಯಾವುದೇ ಹಣ ಸಂಗ್ರಹ ಮಾಡುತ್ತಿಲ್ಲ. ಯಾರಾದ್ರು ದೂರು ಕೊಟ್ರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು. ಸಚಿವರ ಮಾತಿಗೆ ಬಿಜೆಪಿ ಸದಸ್ಯ ಸಿಟಿ ರವಿ ವಿರೋಧ ವ್ಯಕ್ತಪಡಿಸಿದರು. ಕೂಲಿ ಮಾಡೋರ ಕಾರ್ಡ್ ರದ್ದು ಮಾಡಿದರೆ ನಾವು ಟಿವಿಗೆ ಹೋಗ್ತೀವಿ. ಅರ್ಹತೆ ಇಲ್ಲದೇ ಇದ್ದೋರ ಕಾರ್ಡ್ ರದ್ದು ಮಾಡಿ. ಯಾರಿಗೆ ಹೆದರುತ್ತಿದ್ದೀರಾ? ಬಾಂಗ್ಲಾದೇಶದವರಿಗೆಲ್ಲ ಇಲ್ಲಿ Bpl ಕಾರ್ಡ್ ಕೊಟ್ಟಿದ್ದಾರೆ ಅದನ್ನ ರದ್ದು ಮಾಡಿ. ಬಾಂಗ್ಲಾದೇಶದವರಿಗೂ ಇಲ್ಲಿ ಕಾರ್ಡ್ ಕೊಟ್ಟಿದ್ದಾರೆ ಅಂತ ಆರೋಪ ಮಾಡಿದ್ರು.
ಸಚಿವ ಪ್ರಿಯಾಂಕ್ ಖರ್ಗೆ ಸಿಟಿ ರವಿ ಮಾತಿಗೆ ವಿರೋಧ ವ್ಯಕ್ತಪಡಿಸಿದರು. ಬಾಂಗ್ಲಾದೇಶದಿಂದ ಇಲ್ಲಿ ಒಳಗೆ ಬರಲಿ ಬಿಟ್ಟಿದ್ದು ಯಾರು ಎಂದ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ರು. ಈ ವೇಳೆ ಸಿಟಿ ರವಿ-ಪ್ರಿಯಾಂಕ್ ಖರ್ಗೆ ನಡುವೆ ಮಾತಿನ ಚಕಮಕಿ ನಡೀತು. ಸಭಾಪತಿಗಳು ಮಧ್ಯೆ ಪ್ರವೇಶ ಮಾಡಿ ವಾತಾವರಣ ತಿಳಿ ಮಾಡಿದ್ರು. ಇದನ್ನೂ ಓದಿ: ಬಿಜೆಪಿಯವ್ರು ಮುಸ್ಲಿಂ ಮೀಸಲಾತಿ ಹಿಂಪಡೆದು ಒಕ್ಕಲಿಗ, ಲಿಂಗಾಯತ ಸಮುದಾಯಗಳಿಗೆ ಹಂಚಿದ್ರು: ಸಿಎಂ