ನೋಯ್ಡಾ: ಇತ್ತೀಚೆಗೆ ಗಡಿಯಾಚೆಯ ಪ್ರೇಮ ಕಥನಗಳು ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣಗಳ (Social Media) ಮೂಲಕ ಪರಿಚಯವಾಗಿ ನಂತರ ಗಡಿ ದಾಟಿ ಬಂದು ಪ್ರೀತಿಸಿದವನ ಕೈಹಿಡಯುವ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿದೆ. ಈ ಲಿಸ್ಟ್ ಗೆ ಇದೀಗ ಮತ್ತೊಂದು ಸ್ಟೋರಿ ಸೇರಿಕೊಂಡಿದೆ.
ಹೌದು. ಬಾಂಗ್ಲಾದೇಶದ (Bangladesh) ಮಹಿಳೆಯೊಬ್ಬರು ತನ್ನ 1 ವರ್ಷದ ಪುಟ್ಟ ಕಂದಮ್ಮನೊಂದಿಗೆ ಗಡಿ ದಾಟಿ ಭಾರತಕ್ಕೆ ಬಂದಿದ್ದಾರೆ. ಆದರೆ ಇಲ್ಲಿ ಬಂದು ನೋಡಿದಾಗ ಪತಿಯ ಸ್ಟೋರಿ ಕೇಳಿ ಆಕೆ ಕಂಗಾಲಾಗಿದ್ದಾರೆ. ಈ ಬಗ್ಗೆ ಮಹಿಳೆಯ 20 ಸೆಕೆಂಡ್ ಗಳ ವೀಡಿಯೋ ಮಾಡಿದ್ದು, ಇದರಲ್ಲಿ ತನ್ನ ಅಳಲು ತೋಡಿಕೊಂಡಿದ್ದಾರೆ.
ಏನಿದು ಪ್ರಕರಣ..?: ಬಾಂಗ್ಲಾ ಮಹಿಳೆಯು ಭಾರತ ಮೂಲದ ಸೌರಭ್ ಕಾಂತ್ ತಿವಾರಿ ಎಂಬಾತನನ್ನು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ಆದರೆ ಮದುವೆಯಾಗಿ ಜೊತೆಗಿದ್ದ ಕೆಲ ತಿಂಗಳ ನಂತರ ಪತಿ ಸೌರಭ ಭಾರತಕ್ಕೆ ಮರಳಿದ್ದು, ಬಳಿಕ ವಾಪಸ್ ಆಗಿಲ್ಲ. ಹೀಗಾಗಿ ನಾನು ಪತಿಯನ್ನು ಹುಡುಕಿಕೊಂಡು ಭಾರತಕ್ಕೆ ಬಂದಿದ್ದೇನೆ ಎಂದು ಮಹಿಳೆ ವೀಡಿಯೋದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಭಾರತದಲ್ಲೇ ಇರಲು ಅವಕಾಶ ಕೊಡಿ – ರಾಷ್ಟ್ರಪತಿಗೆ ಸೀಮಾ ಹೈದರ್ ಪತ್ರ
ಮಹಿಳೆಯ ದೂರಿನಲ್ಲೇನಿದೆ..?: ಮಹಿಳೆಯು ಇದೀಗ ಪತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎಸಿಪಿ ಮಹಿಳಾ ಭದ್ರತಾ ಸಿಬ್ಬಂದಿ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ದೂರಿನಲ್ಲಿ ಬಾಂಗ್ಲಾದೇಶದ ಢಾಕಾದ ಮಹಿಳೆಯೊಬ್ಬರು ಸೌರಭ್ ಕಾಂತ್ ತಿವಾರಿ ಎಂಬ ಯುವಕ ತನ್ನನ್ನು 14 ಏಪ್ರಿಲ್ 2021ರಂದು ಬಾಂಗ್ಲಾದೇಶದಲ್ಲಿ ವಿವಾಹವಾಗಿದ್ದರು ಎಂದು ಹೇಳಿದ್ದಾರೆ. ಈಗ ಸೌರಭ್ ಕಾಂತ್ ಅವರನ್ನು ಬಿಟ್ಟು ಭಾರತಕ್ಕೆ ವಾಪಸ್ ಆಗಿದ್ದಾರೆ. ಈ ನಡುವೆ ಮಹಿಳೆ ಮತ್ತು ಸೌರಭ್ ಗೆ ಒಬ್ಬ ಮಗ ಕೂಡ ಇದ್ದಾನೆ. ಆದರೆ ಸೌರಭ್ ಈಗಾಗಲೇ ಮದುವೆಯಾಗಿದ್ದು, ಈ ವಿಚಾರವನ್ನು ತನ್ನಿಂದ ಮುಚ್ಚಿಟ್ಟಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಸದ್ಯ ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]