ಢಾಕಾ: ‘ಇಸ್ಕಾನ್’ ವಿರುದ್ಧ ಮುಸ್ಲಿಂ ವ್ಯಾಪಾರಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವುದನ್ನು ಖಂಡಿಸಿ ಹಿಂದೂಗಳು ಬಾಂಗ್ಲಾದೇಶದ (Bangladesh) ಬಂದರು ನಗರವಾದ ಚಿತ್ತಗಾಂಗ್‌ನಲ್ಲಿ (Chittagong) ಪ್ರತಿಭಟನೆ ನಡೆಸಿದರು. ಈ ಕಾರಣಕ್ಕೆ ಬಾಂಗ್ಲಾ ಭದ್ರತಾ ಪಡೆಗಳು ಹಿಂದೂ ಸಮುದಾಯದ ಮೇಲೆ ಭಾರಿ ದಬ್ಬಾಳಿಕೆಯನ್ನು ನಡೆಸಿದೆ.
ನ.5 ರಂದು ಹಜಾರಿ ಗಲಿ ಪ್ರದೇಶದಲ್ಲಿ ಈ ಘಟನೆಯು ಆರಂಭವಾಯಿತು. ಇಸ್ಲಾಮಿಕ್ ಗುಂಪಾದ ಜಮಾತ್-ಎ-ಇಸ್ಲಾಮಿ ಸದಸ್ಯ ಉಸ್ಮಾನ್ ಅಲಿ ಸಾಮಾಜಿಕ ಮಾಧ್ಯಮದಲ್ಲಿ ಹಿಂದೂ ಧರ್ಮ ಮತ್ತು ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ISKON) ವಿರುದ್ಧ ಅವಹೇಳನಕಾರಿ ಹೇಳಿಕೆಯ ಪೋಸ್ಟ್ ಹಾಕಿದ್ದ. ಇದನ್ನು ಖಂಡಿಸಿ ಹಿಂದೂ ನಿವಾಸಿಗಳು ಅಲಿ ಅಂಗಡಿಯ ಹೊರಗೆ ಜಮಾಯಿಸಿ ಪ್ರತಿಭಟಿಸಿದರು. ಇದು ಎರಡು ಸಮುದಾಯಗಳ ನಡುವೆ ಘರ್ಷಣೆಗೆ ಕಾರಣವಾಯಿತು. ಸುವ್ಯವಸ್ಥೆಯನ್ನು ಸರಿಪಡಿಸಲು ಬಾಂಗ್ಲಾದೇಶ ಸೇನೆ ಸೇರಿದಂತೆ ಭದ್ರತಾ ಪಡೆಗಳನ್ನು ನಿಯೋಜಿಸಿದಾಗ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಬಹಿಷ್ಕೃತ ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸ್ರೀನ್ ಕೂಡ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮೂವರು ಮಕ್ಕಳನ್ನು ತುಂಗಭದ್ರಾ ನದಿಗೆ ತಳ್ಳಿ ವ್ಯಕ್ತಿ ಆತ್ಮಹತ್ಯೆ ಕೇಸ್ – ಇಬ್ಬರ ಮೃತದೇಹ ಪತ್ತೆ
ಭದ್ರತಾ ಸಿಬ್ಬಂದಿ ನಾಗರಿಕರೊಂದಿಗೆ ಘರ್ಷಣೆ, ಅವರನ್ನು ಬೆನ್ನಟ್ಟಿ ಸೇನಾ ಸಿಬ್ಬಂದಿ ಹಾಗೂ ಪೊಲೀಸರು ಲಾಠಿ ಪ್ರಹಾರ ಮಾಡುತ್ತಿರುವ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಕೆಲವರು ಸಿಸಿಟಿವಿ ಕ್ಯಾಮೆರಾಗಳನ್ನು ಹಾಳುಗೆಡವಿದ್ದಾರೆ. ಚಿತ್ತಗಾಂಗ್ ಮೆಟ್ರೋಪಾಲಿಟನ್ ಪೊಲೀಸ್‌ನ ಹಿರಿಯ ಅಧಿಕಾರಿಯೊಬ್ಬರಿಗೆ, ಪ್ರತಿಭಟನಾಕಾರರು ಇಟ್ಟಿಗೆ ಮತ್ತು ಆಸಿಡ್ ಎಸೆದಿದ್ದಾರೆ. ಒಂಬತ್ತು ಅಧಿಕಾರಿಗಳು ಗಾಯಗೊಂಡಿದ್ದಾರೆ. ಮಂಗಳವಾರ ಅಧಿಕಾರಿಗಳು 582 ವ್ಯಕ್ತಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ. ಕೃತ್ಯವೆಸಗಿದ 49 ಜನರನ್ನು ಬಂಧಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ. ಇದನ್ನೂ ಓದಿ: ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಬ್ರೇಕ್ ಹಾಕಲು ಮುಂದಾದ ಟ್ರಂಪ್
ಹಿಂದೂ ಪ್ರಾಬಲ್ಯದ ವ್ಯಾಪಾರ ಪ್ರದೇಶವಾದ ಹಜಾರಿ ಗಲಿಯು ಭಾರೀ ಕಣ್ಗಾವಲಿನಲ್ಲಿದೆ ಮತ್ತು ನಡೆಯುತ್ತಿರುವ ಕಾರ್ಯಾಚರಣೆಗಳಿಂದಾಗಿ ಅನೇಕ ನಿವಾಸಿಗಳು ಹೊರಹೋಗಲು ಸಾಧ್ಯವಾಗುತ್ತಿಲ್ಲ. ಪೊಲೀಸರು ಆ ಪ್ರದೇಶದಲ್ಲಿ ಮನೆ-ಮನೆಗೆ ತೆರಳಿ ಶೋಧ ನಡೆಸುತ್ತಿರುವ ಬಗ್ಗೆಯೂ ವರದಿಯಾಗಿದೆ. ಇದನ್ನೂ ಓದಿ: ಜಮ್ಮು & ಕಾಶ್ಮೀರ | ಸೇನೆಯ ಗುಂಡಿಗೆ ಉಗ್ರ ಬಲಿ – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ