ಢಾಕಾ: ಬಾಂಗ್ಲಾದೇಶ (Bangladesh) ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಗೆಲುವಿನಲ್ಲಿ ಹೀರೋ ಆಗಿದ್ದ ಟೀಂ ಇಂಡಿಯಾ ಸ್ಪಿನ್ನರ್ ಕುಲ್‍ದೀಪ್ ಯಾದವ್‍ಗೆ (Kuldeep Yadav) ಎರಡನೇ ಟೆಸ್ಟ್ (Test) ಪಂದ್ಯದಿಂದ ಕೊಕ್ ನೀಡಲಾಗಿದೆ.
Advertisement
ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಪರ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‍ನಲ್ಲಿ 40 ರನ್ ಸಿಡಿಸಿ, ಬೌಲಿಂಗ್‍ನಲ್ಲಿ 5 ವಿಕೆಟ್ ಕಬಳಿಸಿದ್ದರು. ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಕಬಳಿಸುವ ಮೂಲಕ 188 ರನ್ ಜಯದಲ್ಲಿ ಕುಲ್‍ದೀಪ್ ಮಹತ್ವದ ಪಾತ್ರವಹಿಸಿದ್ದರು. ಈ ಪ್ರದರ್ಶನದ ಫಲವಾಗಿ ಕುಲ್‍ದೀಪ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ಇದನ್ನೂ ಓದಿ: ಮೆಸ್ಸಿ ಕೈಯಲ್ಲಿ ಕಮಲ – ಬಿಜೆಪಿಗೆ ಹೋಲಿಸಿ ಟ್ವಿಟ್ಟರ್‌ನಲ್ಲಿ ಟ್ರೋಲ್
Advertisement
Advertisement
ಹಾಗಾಗಿ ಕುಲ್‍ದೀಪ್ ಎರಡನೇ ಟೆಸ್ಟ್‌ನಲ್ಲೂ ಟ್ರಂಪ್ ಕಾರ್ಡ್ ಆಟಗಾರನಾಗಿದ್ದರು. ಆದರೆ ಎರಡನೇ ಟೆಸ್ಟ್ ಟಾಸ್ ವೇಳೆ ನಾಯಕ ಕೆ.ಎಲ್ ರಾಹುಲ್ ತಂಡವನ್ನು ಪ್ರಕಟಿಸಿದಾಗ ಅಚ್ಚರಿ ಕಾದಿತ್ತು. ಕುಲ್‍ದೀಪ್ ಯಾದವ್ ಎರಡನೇ ಟೆಸ್ಟ್‌ನಲ್ಲಿ ಆಡುತ್ತಿಲ್ಲ. ಅವರ ಬದಲಾಗಿ ಜೈದೇವ್ ಉನಾದ್ಕಟ್‌ಗೆ (Jaydev Unadkat) ಅವಕಾಶ ನೀಡಲಾಗಿದೆ ಎಂದು ಪ್ರಕಟಿಸಿದರು. ಇದನ್ನೂ ಓದಿ: ಫಿಫಾ ವಿಶ್ವಕಪ್ ತಬ್ಬಿಕೊಂಡು ಮಲಗಿದ ಮೆಸ್ಸಿ
Advertisement
ಈ ನಿರ್ಧಾರದಿಂದ ಟೀಂ ಮ್ಯಾನೇಜ್‍ಮೆಂಟ್ ವಿರುದ್ಧ ಟೀಕೆಗಳು ಕೇಳಿಬರುತ್ತಿದೆ. ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಸಹಕರಿಸಿ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರನನ್ನು ಯಾಕೆ ಕೈಬಿಟ್ಟಿದ್ದೀರಿ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.