ಢಾಕಾ: ಮುಂದಿನ ವರ್ಷದ ಕೊನೆಯಲ್ಲಿ ಅಥವಾ 2026ರ ಆರಂಭದಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು (Elections) ನಡೆಸಲಾಗುವುದು ಎಂದು ಬಾಂಗ್ಲಾದೇಶದ (Bangladesh) ಮಧ್ಯಂತರ ಸರ್ಕಾರದ ಮುಖ್ಯಸ್ಥ ನಾಯಕ ಮೊಹಮ್ಮದ್ ಯೂನಸ್ (Muhammad Yunus) ಹೇಳಿದ್ದಾರೆ.
ಚುನಾವಣೆಯ ವ್ಯವಸ್ಥೆಗೂ ಮುನ್ನ ಸಾಕಷ್ಟು ಸುಧಾರಣೆಗಳು ಆಗಬೇಕಿದೆ. ದೋಷರಹಿತ ಮತದಾರರ ಪಟ್ಟಿ ತಯಾರಾಗಬೇಕು. ಅಲ್ಲದೇ ಸಂಪೂರ್ಣ ಸುಧಾರಣೆ ಮಾಡಿ ಚುನಾವಣೆ ನಡೆಸುವುದಾದರೆ ಕೆಲವು ತಿಂಗಳು ವಿಳಂಬವಾಗಲಿದೆ. ಇನ್ನೂ ರಾಜಕೀಯ ಪಕ್ಷಗಳು ಒಪ್ಪಿಕೊಂಡರೆ, ನವೆಂಬರ್ ಅಂತ್ಯದೊಳಗೆ ಚುನಾವಣೆ ನಡೆಸಬಹುದು ಎಂದು ಅವರು ಹೇಳಿದ್ದಾರೆ.
Advertisement
ಆಗಸ್ಟ್‌ನಲ್ಲಿ ದೇಶದಲ್ಲಿ ನಡೆದ ದಂಗೆಯ ವೇಳೆ ಮಾಜಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ಭಾರತಕ್ಕೆ ಬಂದಿದ್ದರು. ಬಳಿಕ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಯೂನಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆ ಮಾಡಲಾಗಿತ್ತು. ಇದೀಗ ಅವರ ಮೇಲೆ ಚುನಾವಣೆಗೆ ದಿನಾಂಕ ನಿಗದಿಪಡಿಸುವಂತೆ ಒತ್ತಡ ಹೆಚ್ಚುತ್ತಿದೆ. ಇದರಿಂದ ಚುನಾವಣೆ ನಿಗದಿಗೆ ಮುಖ್ಯ ಸಲಹೆಗಾರರನ್ನು ನೇಮಿಸಲಾಗಿದೆ.
Advertisement
Advertisement
ಈ ಹಿಂದೆ ಮಾಜಿ ಪ್ರಧಾನಿ ಶೇಖ್ ಹಸೀನಾ ಸರ್ಕಾರವು ನ್ಯಾಯಾಲಯ ಮತ್ತು ಸರ್ಕಾರಿ ಸಂಸ್ಥೆಗಳನ್ನು ರಾಜಕೀಯಗೊಳಿಸಿತ್ತು. ಅಲ್ಲದೇ ಅಧಿಕಾರಕ್ಕಾಗಿ ಚುನಾವಣೆಯಲ್ಲಿ ಅಕ್ರಮ ಎಸಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು.
Advertisement
ಹಸೀನಾ ಅವರ 15 ವರ್ಷಗಳ ಆಳ್ವಿಕೆಯಲ್ಲಿ ತಮ್ಮ ರಾಜಕೀಯ ವಿರೋಧಿಗಳ ಸಾಮೂಹಿಕ ಬಂಧನ. ಕಾನೂನುಬಾಹಿರ ಹತ್ಯೆಗಳು ನಡೆದಿವೆ. ಈ ಮೂಲಕ ವ್ಯಾಪಕವಾದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬ ಆರೋಪವನ್ನು ಸಹ ಎದುರಿಸುತ್ತಿದ್ದಾರೆ.