ಢಾಕಾ/ನವದೆಹಲಿ: ಬಾಂಗ್ಲಾದೇಶದ ಇಸ್ಲಾಂ ಮೂಲಭೂತವಾದಿ ಸರ್ಕಾರದ ಹಿಂದೂ (Hindu) ದ್ವೇಷ ರಾಜಕೀಯ ಮಿತಿ ಮೀರುತ್ತಿದೆ. ಹಿಂದೂ ಪ್ರಜೆಗಳ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಸುತ್ತಿದೆ.
ಬಾಂಗ್ಲಾ ರಾಷ್ಟ್ರಧ್ವಜಕ್ಕೆ (Bangladesh National Flag) ಅಪಮಾನ ಎಸಗಿದ ಆರೋಪದ ಮೇಲೆ ಮಂಗಳವಾರ ಇಸ್ಕಾನ್ (ISKCON) ಸಂತ ಚಿನ್ಮಯ್ ಕೃಷ್ಣದಾಸ್‌ರನ್ನು (Chinmoy Krishna Das) ಬಂಧಿಸಿದ್ದ ಪೊಲೀಸರು ದೇಶದ್ರೋಹದ (Sedition) ಕೇಸ್ ದಾಖಲಿಸಿದ್ದಾರೆ. ಕೋರ್ಟ್ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
- Advertisement -
ಚಿನ್ಮಯ್ ಕೃಷ್ಣದಾಸ್ ಬಂಧನಕ ಖಂಡಿಸಿ ಬಾಂಗ್ಲಾ ಹಿಂದೂಗಳು ದೊಡ್ಡಮಟ್ಟದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೊತ್ತಲ್ಲೇ ಮಹತ್ವದ ಬೆಳವಣಿಗೆ ಘಟಿಸಿದೆ. ಇಸ್ಕಾನ್ ಸಂಸ್ಥೆಯನ್ನು ನಿಷೇಧಿಸಲು ಬಾಂಗ್ಲಾ ಸರ್ಕಾರ ಚಿಂತನೆ ನಡೆಸಿದೆ. ಇಸ್ಕಾನ್ ಸಂಸ್ಥೆ ಒಂದು ಧಾರ್ಮಿಕ ಮೂಲಭೂತವಾದಿ ಸಂಘಟನೆಯಾಗಿದ್ದು, ಇದು ದೇಶಕ್ಕೆ ಅಪಾಯಕಾರಿಯಾಗಿದೆ. ಇದನ್ನು ನಿಷೇಧಿಸಿ ಎಂದು ಕೋರಿ ಢಾಕಾ ಹೈಕೋರ್ಟ್‌ನಲ್ಲಿ ಅರ್ಜಿಯೊಂದು ಸಲ್ಲಿಕೆ ಆಗಿದೆ. ಇದನ್ನೂ ಓದಿ: ಅಮೆರಿಕ ಮಧ್ಯಸ್ಥಿಕೆಯಲ್ಲಿ ಇಸ್ರೇಲ್-ಹಿಜ್ಬುಲ್ಲಾ ನಡುವೆ ಕದನ ವಿರಾಮ ಘೋಷಣೆ
- Advertisement -
ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಮೊಹಮ್ಮದ್ ಅಸದುಜ್ಜಮಾನ್ ಕೂಡ, ಇಸ್ಕಾನ್‌ಗೆ ಧಾರ್ಮಿಕ ಮೂಲಭೂತವಾದಿ ಸಂಸ್ಥೆ ಎಂಬ ಹಣೆಪಟ್ಟಿ ಕಟ್ಟಿದ್ದಾರೆ. ಇಸ್ಕಾನ್ ಸಂಸ್ಥೆಯನ್ನು ನಿಷೇಧಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳು ಶುರುವಾಗಿವೆ ಎಂಬುದನ್ನು ಕೋರ್ಟ್ ಗಮನಕ್ಕೆ ತಂದರು.
- Advertisement -
- Advertisement -
ಈ ವೇಳೆ ಇಸ್ಕಾನ್ ಸಂಸ್ಥೆಯ ವಿರುದ್ಧ ಸರ್ಕಾರ ತೆಗೆದುಕೊಳ್ಳುವ ತೀರ್ಮಾನದ ಬಗ್ಗೆ ನಾಳೆಯೊಳಗೆ ವರದಿ ನೀಡಿ ಬಾಂಗ್ಲಾ ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿತು. ಬಾಂಗ್ಲಾ ದೇಶದ ನಡೆ ಅಲ್ಲಿನ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ.
ಚಿನ್ಮಯ್ ಕೃಷ್ಣದಾಸ್ ಬಿಡುಗಡೆಗೆ ಆಗ್ರಹಿಸಿ ಇಸ್ಕಾನ್ ಸಂಸ್ಥೆ ವಿರುದ್ಧ ಕ್ರಮ ತೆಗೆದುಕೊಳ್ಳದಂತೆ ಬಾಂಗ್ಲಾ ದೇಶವನ್ನು ತಡೆಯುವಂತೆ ಒತ್ತಾಯಿಸಿ ಕೋಲ್ಕತ್ತಾದಲ್ಲಿ ಇಸ್ಕಾನ್ ಸಂಸ್ಥೆ ಪ್ರತಿಭಟನೆ ನಡೆಸಿದೆ. ಚಿನ್ಮಯ್ ಬಿಡುಗಡೆಗಾಗಿ ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಬೇಕು ಎಂದು ಕೋರಿದೆ.
ದೇಶದ್ರೋಹದ ಕೇಸ್ ಯಾಕೆ?
ಚಿತ್ತಗಾಂಗ್‌ನಲ್ಲಿ ವ್ಯಾಪಾರಿ ಓಸ್ಮಾನ್ ಆಲಿ ಎಂಬಾತ ಇಸ್ಕಾನ್ ನಿಷೇಧಿಸಿ ಎಂದು ಪೋಸ್ಟ್ ಹಾಕಿದ್ದ.ಇದಕ್ಕೆ ಇಸ್ಕಾನ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಅಂಗಡಿ ಮುಂದೆ ನಡೆಯುತ್ತಿದ್ದ ಪ್ರತಿಭಟನೆ ಘರ್ಷಣೆಗೆ ತಿರುಗಿದೆ. ಘರ್ಷಣೆ ವೇಳೆ ಕಲ್ಲು ತೂರಾಟ, ಜೈಶ್ರೀರಾಮ್ ಘೋಷಣೆ ವೇಳೆ ಆಸಿಡ್ ದಾಳಿಯಾಗಿದೆ. ಈ ಘರ್ಷಣೆಯಲ್ಲಿ 14 ಪೊಲೀಸರು ಗಾಯಗಳಾಗಿತ್ತು. ಆಲಿ ಅಂಗಡಿ ಧ್ವಂಸವಾಗಿತ್ತು. ಆರೋಪಿ ಓಸ್ಮಾನ್ ಆಲಿ ಸೇರಿ 82 ಮಂದಿಯನ್ನು ಪೊಲೀಸರು ಬಂಧಿಸಿದ್ದರು.
ಚಿತ್ತಗಾಂಗ್‌ನಲ್ಲಿ ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಕೇಸರಿ ಧ್ವಜ ಹಾರಿಸಲಾಗಿತ್ತು. ಈ ಕಾರಣಕ್ಕೆ ಪ್ರತಿಭಟನೆಯ ಉಸ್ತುವಾರಿ ಹೊತ್ತಿದ್ದ ಇಸ್ಕಾನ್ ಸಂತ ಚಿನ್ಮಯ್ ಕೃಷ್ಣದಾಸ್ ಸೇರಿ 18 ಮಂದಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ.
ಚಿನ್ಮಯ್ ಕೃಷ್ಣದಾಸ್ ಯಾರು?
38 ವರ್ಷದ ಕೃಷ್ಣದಾಸ್ ಬಾಂಗ್ಲಾದ ಚಿತ್ತಗಾಂಗ್ ಮೂಲದವರು. ಬಾಲ್ಯದಿಂದಲೇ ಧಾರ್ಮಿಕ ಭಾಷಣಗಳಿಗೆ ಫೇಮಸ್ ಆಗಿದ್ದ ಇವರು ಶಿಶುಭಕ್ತ ಎಂದೇ ಜನಪ್ರಿಯರಾಗಿದ್ದರು.
2007ರಿಂದ ಪುಂಡರಿಕ್ ಧಾಮ್ ಅಧ್ಯಕ್ಷ ಮತ್ತು 2016ರಿಂದ ಇಸ್ಕಾನ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶೇಖ್ ಹಸೀನಾ ಪಲಾಯನದ ನಂತರ ದೇಗುಲಗಳ ಮೇಲೆ ದಾಳಿ ನಡೆದ ಬಳಿಕ ಆಗಸ್ಟ್‌ನಲ್ಲಿ ಸನಾತನ ಜಾಗರಣ ಮಂಚ್ ಹೆಸರಿನ ಸಂಘಟನೆ ರಚನೆಯಾಗಿತ್ತು. ಕೃಷ್ಣದಾಸ್ ಈ ಸಂಘಟನೆಯ ವಕ್ತಾರರಾಗಿದ್ದಾರೆ.