Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅಲ್ಪಸಂಖ್ಯಾತರ ಮೇಲೆ ಹಿಂಸಾಚಾರ – ಭಾರತದ ಆರೋಪ ತಿರಸ್ಕರಿಸಿದ ಬಾಂಗ್ಲಾ ವಿದೇಶಾಂಗ ಸಚಿವಾಲಯ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಅಲ್ಪಸಂಖ್ಯಾತರ ಮೇಲೆ ಹಿಂಸಾಚಾರ – ಭಾರತದ ಆರೋಪ ತಿರಸ್ಕರಿಸಿದ ಬಾಂಗ್ಲಾ ವಿದೇಶಾಂಗ ಸಚಿವಾಲಯ

Latest

ಅಲ್ಪಸಂಖ್ಯಾತರ ಮೇಲೆ ಹಿಂಸಾಚಾರ – ಭಾರತದ ಆರೋಪ ತಿರಸ್ಕರಿಸಿದ ಬಾಂಗ್ಲಾ ವಿದೇಶಾಂಗ ಸಚಿವಾಲಯ

Public TV
Last updated: December 22, 2025 10:21 am
Public TV
Share
2 Min Read
Bangladesh Hindu Man
SHARE

– ಇಲ್ಲಿನ ಭಾರತೀಯ ಅಧಿಕಾರಿಗಳಿಂದ ಅಪಪ್ರಚಾರ ಅಂತ ಆಕ್ಷೇಪ

ಢಾಕಾ: ಬಾಂಗ್ಲಾದೇಶದ (Bangladesh) ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹಾದಿ ಹತ್ಯೆ ಬಳಿಕ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಭಾರತೀಯ ಅಲ್ಪ ಸಂಖ್ಯಾತರ ಮೇಲೆ ಹಿಂಸಾಚಾರ ಮುಂದುವರಿದಿದೆ. ಈ ಬೆನ್ನಲ್ಲೇ ಅಲ್ಪ ಸಂಖ್ಯಾತರ ಮೇಲಿನ ದಾಳಿ ಕುರಿತ ಭಾರತದ ಆರೋಪವನ್ನ ಬಾಂಗ್ಲಾ ವಿದೇಶಾಂಗ ಸಚಿವಾಲಯ ತಿಸ್ಕರಿಸಿದೆ.

ಭಾರತದ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಬಾಂಗ್ಲಾ, ಮೈಮೆನ್ಸಿಂಗ್‌ನಲ್ಲಿ ಹಿಂದೂ ಯುವಕನ ಹತ್ಯೆಯ ನಂತರ ಅಲ್ಪಸಂಖ್ಯಾತರ ಮೇಲೆ ವ್ಯಾಪಕ ದಾಳಿಗಳು ನಡೆದಿರುವ ಯಾವುದೇ ಸೂಚನೆಗಳಿಲ್ಲ. ಬಾಂಗ್ಲಾದೇಶದ ಮಾಧ್ಯಮಗಳು ಸುಳ್ಳು ಸೃಷ್ಟಿಸಿ ದಾರಿತಪ್ಪಿಸುವ ಕೆಲಸ ಮಾಡಿವೆ. ಇದರೊಂದಿಗೆ ಹಿಂದೂ ಯುವಕನ ಮೇಲಿನ ಪ್ರತ್ಯೇಕ ದಾಳಿಯನ್ನ ಅಲ್ಪಸಂಖ್ಯಾತರ ಮೇಲಿನ ದಾಳಿ ಎಂದು ಭಾರತೀಯ ಅಧಿಕಾರಿಗಳು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆಕ್ಷೇಪಿಸಿದೆ.

India Bangal Clash

ನಮ್ಮ ಸರ್ಕಾರವು ಈಗಾಗಲೇ ಅಪರಾಧಿಗಳನ್ನ ಬಂಧಿಸಿದೆ ಮತ್ತು ಬಾಂಗ್ಲಾದೇಶದಲ್ಲಿನ ಸಮುದಾಯಗಳ ನಡುವಿನ ಪರಿಸ್ಥಿತಿ ತುಲನಾತ್ಮಕವಾಗಿ ಸ್ಥಿರವಾಗಿದೆ. ಈ ಪ್ರದೇಶದ ಎಲ್ಲಾ ಸರ್ಕಾರಗಳು ತಮ್ಮ ಅಲ್ಪಸಂಖ್ಯಾತರ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಹೊಂದಿವೆ ಎಂದು ಹೇಳಿದೆ. ಇದನ್ನೂ ಓದಿ: ಹಾದಿ ಹತ್ಯೆ ಬಳಿಕ ಭುಗಿಲೆದ್ದ ಹಿಂಸಾಚಾರ – ಬಾಂಗ್ಲಾದಲ್ಲಿ ಭಾರತೀಯ ವೀಸಾ ಸೇವೆ ಸ್ಥಗಿತ

ವೀಸಾ ಕೇಂದ್ರ ತಾತ್ಕಾಲಿಕ ಸ್ಥಗಿತ
ಇನ್ನೂ ಹಿಂಸಾಚಾರ ಭುಗಿಲೇಳುತ್ತಿದ್ದಂತೆ ಭಾರತೀಯ ವೀಸಾ ಅರ್ಜಿ ಕೇಂದ್ರದಲ್ಲಿ (IVAC) ವೀಸಾ ಅರ್ಜಿಗಳನ್ನು (Indian visa applications) ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿದೆ. ಈಕುರಿತು ವೀಸಾ ಕೇಂದ್ರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವುದಾಗಿ ಸ್ಥಳೀಯ ಪತ್ರಿಕೆ ವರದಿ ಮಾಡಿದೆ. ಇದನ್ನೂ ಓದಿ: ಬಲವಿಲ್ಲದ ಯೂನಸ್ ಸರ್ಕಾರದಿಂದ ಕಾನೂನು ಸುವ್ಯವಸ್ಥೆ ವಿಫಲ – ಬಾಂಗ್ಲಾ ಹಿಂಸಾಚಾರಕ್ಕೆ ಮಾಜಿ ಪ್ರಧಾನಿ ಶೇಖ್ ಹಸೀನಾ ಕಿಡಿ

Bangladesh 1

IVAC ಪ್ರಕಾರ, ಬಂದರು ನಗರದಲ್ಲಿ ಎಲ್ಲಾ ಭಾರತೀಯ ವೀಸಾ ಸಂಬಂಧಿತ ಸೇವೆಗಳು ಡಿಸೆಂಬರ್ 21 ರಿಂದ ಮುಂದಿನ ಸೂಚನೆ ಬರುವವರೆಗೆ ಮುಚ್ಚಲ್ಪಡುತ್ತವೆ. ಭದ್ರತಾ ಪರಿಸ್ಥಿತಿಯ ಪರಿಶೀಲನೆಯ ನಂತರ ವೀಸಾ ಅರ್ಜಿ ಕೇಂದ್ರವನ್ನು ಪುನರಾರಂಭಿಸುವ ಬಗ್ಗೆ ಮುಂದಿನ ಪ್ರಕಟಣೆ ಹೊರಡಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಕ್ರೂರ ಹತ್ಯೆ – 7 ಮಂದಿ ಅರೆಸ್ಟ್‌

ಬಾಂಗ್ಲಾ ʻಹಾದಿʼಯಲ್ಲಿ ಗಲಭೆ
ಕಳೆದ ವರ್ಷ ವಿದ್ಯಾರ್ಥಿ ನೇತೃತ್ವದ ಪ್ರತಿಭಟನೆಗಳಲ್ಲಿ ಪ್ರಮುಖ ಪಾತ್ರ ವಹಿಸಿ ಅಂದಿನ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಮೂಲಕ ದೇಶವನ್ನೇ ತೊರೆಯುವಂತೆ ಮಾಡವಲ್ಲಿ ಹಾದಿ ಜನಪ್ರಿಯತೆ ಗಳಿಸಿದ್ದರು. ಇನ್ನು, ಅವರು ಈ ಫೆಬ್ರವರಿಯಲ್ಲಿ ನಡೆಯಬೇಕಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಫರ್ಧಿಸುವ ಸಲುವಾಗಿ ಡಿಸೆಂಬರ್ 12 ರಂದು ಢಾಕಾ ಪ್ರದೇಶದಲ್ಲಿ ಪ್ರಚಾರ ನಡೆಸುತ್ತಿದ್ದರು.

ಈ ವೇಳೆ ಮುಸುಕಧಾರಿ ದುಷ್ಕರ್ಮಿಗಳು ಹಾದಿ ತಲೆಗೆ ಗುಂಡು ಹಾರಿಸಿದ್ದರು. ನಂತರ ಆತನನ್ನ ಸಿಂಗಾಪುರಕ್ಕೆ ಚಿಕಿತ್ಸೆಗೆಂದು ತೆರಳಿಸಿದರು ಸಹ ಅವರು ಕೊನೆಗೆ ಸಾವನ್ನಪ್ಪಿದರು. ಇದರಿಂದ ಆಕ್ರೋಶ ಭುಗಿಲೆದ್ದಿದ್ದು, ಬಾಂಗ್ಲಾದೇಶದಾದ್ಯಂತ ಅಶಾಂತಿ ಮತ್ತು ಗಲಭೆಗೆ ನಾಂದಿ ಹಾಡಿತು. ಈ ಗಲಭೆಯಲ್ಲಿ ಚಟ್ಟೋಗ್ರಾಮ್‌ ಭಾರತದ ಸಹಾಯಕ ಉಚ್ಚಾಯುಕ್ತರ ನಿವಾಸದ ಮೇಲೆ ಕಲ್ಲು ತೂರಾಟ, ಹಿಂದೂಗಳ ಮೇಲೆ ಹಲ್ಲೆ ನಡೆಸುವುದು ಸೇರಿದಂತೆ ಹಲವು ಭೀಕರ ದಾಳಿಗಳಿಗೆ ಸಾಕ್ಷಿಯಾಗಿದೆ. ಶನಿವಾರವಷ್ಟೇ ಶರೀಫ್‌ ಉಸ್ಮಾನ್‌ ಹಾದಿಯ ಅಂತ್ಯಕ್ರಿಯೆ ಶಾಂತಿಯುತವಾಗಿ ನಡೆದಿತ್ತು.

TAGGED:bangladeshChittagongIndia's High Commission attackIndian visaVisa Applicationsಬಾಂಗ್ಲಾದೇಶಭಾರತೀಯ ವೀಸಾವೀಸಾ ಅರ್ಜಿ. ಭಾರತ
Share This Article
Facebook Whatsapp Whatsapp Telegram

Cinema news

Rashmika Mandanna Vijay Devarakonda Wedding Decorated Kodagu Virajpet House
ರಶ್ಮಿಕಾ ಮಂದಣ್ಣ ಮದುವೆ – ಸಿಂಗಾರಗೊಂಡ ಕೊಡಗಿನ ಮನೆ
Cinema Districts Karnataka Kodagu Latest Sandalwood Top Stories
Ranveer Singh Rishab Shetty Kantara
ಸೂಪರ್ ಸ್ಟಾರ್ ಆದ ಮಾತ್ರಕ್ಕೆ ಹೇಗೆ ಬೇಕಾದ್ರೂ ವರ್ತಿಸಬಹುದಾ? – ರಣವೀರ್ ಸಿಂಗ್‌ಗೆ ಹೈಕೋರ್ಟ್ ಚಾಟಿ
Bengaluru City Cinema Court Karnataka Latest Top Stories
Zee Short Film Contest
ಹೊಸ ಪ್ರತಿಭೆಗಳ ಹುಡುಕಾಟಕ್ಕೆ ಜೀ ಕಿರುಚಿತ್ರ ಸ್ಪರ್ಧೆ
Cinema Latest Top Stories
Krishna Vamshi serial
ಕೃಷ್ಣವಂಶಿ: ನಾಚಿಕೆ ಕೃಷ್ಣನ ಜೊತೆ ವಂಶಿ ಡೇಟ್ ಫಿಕ್ಸ್
Cinema Latest Sandalwood Top Stories

You Might Also Like

Mitchell Santner
Cricket

ವಿಶ್ವಕಪ್‌ನಿಂದ ಶ್ರೀಲಂಕಾ ಔಟ್‌ – ನ್ಯೂಜಿಲೆಂಡ್‌ ಸೆಮಿ ಆಸೆ ಜೀವಂತ

Public TV
By Public TV
14 minutes ago
Narendra Modi Israel Parliament speech
Latest

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಇಸ್ರೇಲ್ ಜೊತೆ ಸದಾ ನಿಲ್ಲುತ್ತದೆ: ಮೋದಿ

Public TV
By Public TV
18 minutes ago
Retired BBMP officer commits suicide due to fear of CBI
Bengaluru City

ಸಿಬಿಐ ಭಯಕ್ಕೆ ನಿವೃತ್ತ ಬಿಬಿಎಂಪಿ ಅಧಿಕಾರಿ ಆತ್ಮಹತ್ಯೆ?

Public TV
By Public TV
59 minutes ago
Sirsi Marikamba Jatre
Districts

ಶಿರಸಿ ಮಾರಿಕಾಂಬಾ ದೇವಿಯ ಮಹಾ ರಥೋತ್ಸವಕ್ಕೆ ಅದ್ಧೂರಿ ಚಾಲನೆ

Public TV
By Public TV
1 hour ago
BILL GATES 2
Latest

ರಷ್ಯಾದ ಇಬ್ಬರು ಮಹಿಳೆಯರ ಜೊತೆ ಸಂಬಂಧವಿದೆ: ಎಪಿಸ್ಟೀನ್‌ ಜೊತೆಗಿನ ಸ್ನೇಹಕ್ಕೆ ಕ್ಷಮೆಯಾಚಿದ ಬಿಲ್‌ ಗೇಟ್ಸ್‌

Public TV
By Public TV
1 hour ago
Goa Thar Accident
Crime

ಗೋವಾ ಥಾರ್ ಅಪಘಾತ ಪ್ರಕರಣ – 19 ವರ್ಷದ ದೆಹಲಿ ಯುವಕನ ವಿರುದ್ಧ FIR

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?